newsfirstkannada.com

BREAKING: ಪ್ರಜ್ವಲ್ ರೇವಣ್ಣ ಇರೋ ಜಾಗ ಕೊನೆಗೂ ಪತ್ತೆ; ಈ ದಿನ ಬೆಂಗಳೂರಿಗೆ ವಾಪಸ್?

Share :

Published May 1, 2024 at 1:03pm

    ಹಾಸನ ಅಶ್ಲೀಲ ಪೆನ್‌ಡ್ರೈವ್‌ ಪ್ರಕರಣದಲ್ಲಿ ತೀವ್ರಗೊಂಡ SIT ತನಿಖೆ

    ಫ್ರಾಂಕ್‌ಫರ್ಟ್‌ನಿಂದ ಬೆಂಗಳೂರಿಗೆ ವಾಪಸ್ ಆಗೋದು ಯಾವಾಗ?

    ಜರ್ಮನಿಯ ಲುಫ್ಥಾನ್ಸ ಏರ್‌ಲೈನ್ಸ್‌ ವಿಮಾನದಲ್ಲಿ ಟಿಕೆಟ್ ಬುಕ್ ಆಗಿದೆ

ಚಿಕ್ಕಬಳ್ಳಾಪುರ: ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬಂದ ಮೇಲೆ ಸಂಸದ ಪ್ರಜ್ವಲ್ ರೇವಣ್ಣ ಅವರು ಎಲ್ಲಿಯೂ ಕಂಡಿಲ್ಲ. ವಿಶೇಷ ತನಿಖಾ ತಂಡದ ಪೊಲೀಸರು ನೋಟಿಸ್ ಜಾರಿ ಮಾಡಿದ ಮೇಲೆ ಪ್ರಜ್ವಲ್ ರೇವಣ್ಣ ಅವರ ಮೇಲೆ ಒತ್ತಡ ಹೆಚ್ಚಾಗಿದೆ. ಅಶ್ಲೀಲ ವಿಡಿಯೋ ಹಾಗೂ ಪೆನ್‌ಡ್ರೈವ್‌ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ಅವರ ವಿಚಾರಣೆ SIT ತಂಡ ಸಿದ್ಧತೆ ನಡೆಸಿದೆ.

ಹಾಸನ ಅಶ್ಲೀಲ ಪೆನ್‌ಡ್ರೈವ್‌ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಆರಂಭವಾದ ಮೇಲೆ ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಹೋಗಿದ್ದಾರೆ ಎನ್ನಲಾಗಿದೆ. ನ್ಯೂಸ್‌ ಫಸ್ಟ್‌ಗೆ ಸಿಕ್ಕ ಮಾಹಿತಿಯ ಪ್ರಕಾರ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯ ಫ್ರಾಂಕ್‌ಫರ್ಟ್ ಸಿಟಿ ತೆರಳಿದ್ದಾರೆ. ಫ್ರಾಂಕ್‌ಫರ್ಟ್‌ನಿಂದ ಬೆಂಗಳೂರಿಗೆ ವಾಪಸ್ ಆಗಲು ಈಗಾಗಲೇ ಟಿಕೆಟ್ ಕೂಡ ಬುಕ್ ಆಗಿದೆ.

ಇದನ್ನೂ ಓದಿ: BREAKING: ಹಾಸನ ಅಶ್ಲೀಲ ವಿಡಿಯೋ ಕೇಸ್‌ನಲ್ಲಿ H.D ರೇವಣ್ಣ, ಪ್ರಜ್ವಲ್ ರೇವಣ್ಣಗೆ ಬಿಗ್‌ ಶಾಕ್‌! 

ಹೌದು.. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯ ಲುಫ್ಥಾನ್ಸ ಏರ್‌ಲೈನ್ಸ್‌ ವಿಮಾನದಲ್ಲಿ ರಿಟರ್ನ್‌ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ. ಇದೇ ಮೇ 3ರಂದು ಪ್ರಜ್ವಲ್ ರೇವಣ್ಣ ಅವರು ಫ್ರಾಂಕ್‌ಫರ್ಟ್‌ನಿಂದ ಬೆಂಗಳೂರಿಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ.

ಇಮಿಗ್ರೇಷನ್ ಕ್ಲಿಯರೇನ್ಸ್‌ಗೆ (Emigration Clearance) ರಿಟರ್ನ್ ಟಿಕೆಟ್ ಬುಕ್‌ ಮಾಡುವುದು ಕಡ್ಡಾಯವಾಗಿದೆ. ಹೀಗಾಗಿ ಬೆಂಗಳೂರಿಂದ ವಿದೇಶಕ್ಕೆ ತೆರಳುವ ಮುನ್ನವೇ ಪ್ರಜ್ವಲ್ ರೇವಣ್ಣ ಅವರು ರಿಟರ್ನ್‌ ಟಿಕೆಟ್‌ ಬುಕ್ ಮಾಡಿಕೊಂಡಿದ್ದಾರೆ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಇದೇ ಮೇ 3ರ ಮಧ್ಯಾಹ್ನ 01.03ಕ್ಕೆ ಫ್ರಾಂಕ್‌ಫರ್ಟ್‌ನಿಂದ ಲುಫ್ಥಾನ್ಸ ಏರ್‌ಲೈನ್ಸ್‌ ವಿಮಾನದಲ್ಲಿ ಹೊರಡಲಿದ್ದಾರೆ. ಮಧ್ಯರಾತ್ರಿ 01 ಗಂಟೆ ಸುಮಾರಿಗೆ ಲುಫ್ಥಾನ್ಸ ಏರ್‌ಲೈನ್ಸ್‌ ವಿಮಾನ ಕೆಂಪೇಗೌಡ ಏರ್‌ಪೋರ್ಟ್‌ಗೆ ಆಗಮಿಸಲಿದೆ.

ಇದನ್ನೂ ಓದಿ: ‘2000 ಮಹಿಳೆಯರ ಕೇಸ್.. MP ಪ್ರಜ್ವಲ್ ರೇವಣ್ಣ ಬೇರೆ ಕೆಲಸನೇ ಮಾಡಿಲ್ಲ ಹಾಗಿದ್ರೆ’- HDK ಯಾಕೆ ಹೀಗಂದ್ರು?

ಪ್ರಜ್ವಲ್ ರೇವಣ್ಣ ಅವರು ಇದೇ ಮೇ 3ರಂದು ರಿಟರ್ನ್‌ ಟಿಕೆಟ್ ಬುಕ್ ಮಾಡಿದ್ದಾರೆ. ಆದ್ರೆ ಮೇ03 ರಂದು ವಾಪಸ್ ಬರ್ತಾರಾ ಅಥವಾ ಅಲ್ಲೇ ಉಳಿದುಕೊಳ್ತಾರಾ ಅನ್ನೋ ಅನುಮಾನವಿದೆ. ಮೇ 03 ರಂದು ಬುಕ್ ಆಗಿರುವ ಟಿಕೆಟ್ ಮೇಲೆ ಎಸ್ಐಟಿ ಪೊಲೀಸರ ತಂಡ ಕಣ್ಣಿಟ್ಟಿದೆ. ಮೇ 03ರ ಮಧ್ಯರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್ ರೇವಣ್ಣ ಅವರು ಬರ್ತಾರಾ ಅನ್ನೋದು ಕುತೂಹಲ ಸೃಷ್ಟಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಪ್ರಜ್ವಲ್ ರೇವಣ್ಣ ಇರೋ ಜಾಗ ಕೊನೆಗೂ ಪತ್ತೆ; ಈ ದಿನ ಬೆಂಗಳೂರಿಗೆ ವಾಪಸ್?

https://newsfirstlive.com/wp-content/uploads/2024/04/Prajwal-Revanna-Hassan-JDS.jpg

Load More