newsfirstkannada.com

ಹಾಸನ ಪೆನ್‌ಡ್ರೈವ್‌ ಕೇಸ್ ಎದುರಿಸಲು ರೆಡಿಯಾದ ಪ್ರಜ್ವಲ್ ರೇವಣ್ಣ; ವಿದೇಶದಿಂದಲೇ ಹೇಳಿದ್ದೇನು?

Share :

Published May 1, 2024 at 5:47pm

    ಹಾಸನದಲ್ಲಿ ಕೇಸ್ ದಾಖಲಾಗುತ್ತಿದ್ದಂತೆ ವಿದೇಶಕ್ಕೆ ಹೋಗಿದ್ದು ಪ್ರೀ ಪ್ಲಾನ್?

    ಯಾವುದೇ ಜಾಮೀನಿಗೆ ಮನವಿ ಮಾಡದ ಸಂಸದ ಪ್ರಜ್ವಲ್ ರೇವಣ್ಣ

    ‘ವಿಚಾರಣೆಗೆ 24 ಗಂಟೆಯಲ್ಲಿ ಬಂದಿಲ್ಲ ಅಂದ್ರೆ ಕ್ರಮ ಅಂತ ಎಲ್ಲೂ ಹೇಳಿಲ್ಲ’

ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಪ್ರಕರಣಕ್ಕೆ ಪ್ರಜ್ವಲ್ ರೇವಣ್ಣ ಅವರು ವಿದೇಶದಿಂದಲೇ ಎಂಟ್ರಿ ಆಗಿದ್ದಾರೆ. ಆರೋಪಗಳನ್ನ ಎದುರಿಸಲು ರೆಡಿಯಾಗಿರುವ ಪ್ರಜ್ವಲ್ ರೇವಣ್ಣ ಅವರು ಇದೇ ಮೊದಲ ಬಾರಿಗೆ ತಮ್ಮ ಮೇಲಿನ ಆರೋಪಗಳ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸತ್ಯ ಆದಷ್ಟು ಬೇಗ ಹೊರ ಬರಲಿದೆ ಎಂದಿದ್ದಾರೆ.

ಹೊಳೆನರಸೀಪುರದಲ್ಲಿ ಕೇಸ್ ದಾಖಲಾದ 4 ದಿನದ ಬಳಿಕ ಪ್ರಜ್ವಲ್ ರೇವಣ್ಣ ಅವರು ತಮ್ಮ ವಿರುದ್ಧದ ಆರೋಪದ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಕಾನೂನು ತಜ್ಞರ ಜೊತೆ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಿ ಮಾಹಿತಿ ಪಡೆದಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್‌ಗೆ ಮೇಜರ್ ಟ್ವಿಸ್ಟ್ ಕೊಟ್ಟ ಸಿಎಂ; ಪ್ರಧಾನಿ ಮೋದಿಗೆ ಪತ್ರ; ಹೇಳಿದ್ದೇನು? 

ಕಳೆದ ಮೂರ್ನಾಲ್ಕು ದಿನಗಳಿಂದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಸಾಕಷ್ಟು ಗಂಭೀರ ಆರೋಪಗಳು ಕೇಳಿ ಬಂದಿದೆ. ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಜರ್ಮನಿಗೆ ಹೋಗಿದ್ದ ಪ್ರಜ್ವಲ್ ರೇವಣ್ಣ ಅವರು ಇಂದು ಆರೋಪಗಳನ್ನು ಎದುರಿಸಲು ನಾನು ರೆಡಿ ಎಂಬ ಸಂದೇಶ ನೀಡಿದ್ದಾರೆ.

ಸಾಲು, ಸಾಲು ಆರೋಪಗಳಿಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ ಅವರು ಮುಂದಿನ 7 ದಿನಗಳ ನಂತರ SIT ಮುಂದೆ ಹಾಜರಾಗುವ ಸಾಧ್ಯತೆ ಇದೆ. ಈ ಬಗ್ಗೆ ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ಜಿ ಅವರೇ ಹೇಳಿಕೆ ನೀಡಿದ್ದಾರೆ. ನಮ್ಮ ಕಕ್ಷಿದಾರರ ಮನವಿ ಮೇಲೆ SIT ಟೀಮ್‌ಗೆ ರಿಕ್ವೆಸ್ಟ್ ಮಾಡಲಾಗಿದೆ.

ಹಾಸನದಲ್ಲಿ ರೇವಣ್ಣ ಅವರ ಮನೆಗೆ ಸಿಆರ್‌ಪಿಸಿ 41a ಅಡಿ ನೋಟಿಸ್ ನೀಡಲಾಗಿತ್ತು. ಈ ನೋಟಿಸ್ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲು 7 ದಿನಗಳ ಕಾಲಾವಕಾಶ ಕೋರಿದ್ದೀವಿ. 7 ದಿನಗಳ ಬಳಿಕ ವಿಚಾರಣೆಗೆ ಹಾಜರಾಗ್ತೀನಿ ಅಂತ ಪ್ರಜ್ವಲ್ ರೇವಣ್ಣ ಅವರು ಕೂಡ ಹೇಳಿದ್ದಾರೆ ಎಂದು ವಕೀಲ ಅರುಣ್ ಜಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಅವರ ಪರ ವಕೀಲ ಅರುಣ್ ಜಿ ಹೇಳಿಕೆ

ಇದೇ ವೇಳೆ ಪ್ರಜ್ವಲ್ ರೇವಣ್ಣ ಅವರು ಯಾವುದೇ ಜಾಮೀನಿಗೆ ಮನವಿ ಮಾಡಿಲ್ಲ. ನಾವು ತನಿಖೆಗೆ ಸಹಕಾರ ಮಾಡಲು ರೆಡಿ ಇದ್ದೀವಿ. ಹೆಚ್.ಡಿ ರೇವಣ್ಣ ಅವ್ರು ತನಿಖೆಗೆ ಸಹಕರಿಸಲು ಸಿದ್ಧರಿದ್ದಾರೆ. ನಾವು ತನಿಖೆಗೆ ಏನೆಲ್ಲಾ ಸಹಕಾರ ಬೇಕೋ ಅದನ್ನು ಮಾಡ್ತೀವಿ. ನಾನು ಸದ್ಯಕ್ಕೆ ಪ್ರಜ್ವಲ್ ರೇವಣ್ಣ ಅವರ ಪರ ಮಾತ್ರ ಅರ್ಜಿ ಹಾಕಿದ್ದೀನಿ ಎಂದು ವಕೀಲರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ಸತ್ಯ ಆದಷ್ಟು ಬೇಗ ಹೊರಬರಲಿದೆ’- ಹಾಸನ ಸೆಕ್ಸ್ ಸ್ಕ್ಯಾಂಡಲ್‌ ಬಗ್ಗೆ ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ 

ನಮಗೆ ಮನೆ ಬಾಗಿಲು ಬಳಿ ಸಿಕ್ಕಿರೋ ನೋಟಿಸ್ ಪ್ರಕಾರ ಉತ್ತರಿಸಿದ್ದೇವೆ. ವಿಚಾರಣೆಗೆ 24 ಗಂಟೆಯಲ್ಲಿ ಬಂದಿಲ್ಲ ಅಂದ್ರೆ ಕ್ರಮ ಅಂತ ಎಲ್ಲೂ ಹೇಳಿಲ್ಲ. ವಿಚಾರಣೆಗೆ ಹಾಜರಾಗಲು ಸೂಚಿಸಿದ್ರೂ ಅದಕ್ಕೆ ಸಹಕಾರ ನೀಡ್ತೀವಿ. ಪ್ರಜ್ವಲ್ ರೇವಣ್ಣ ಅವರು ಮುಂದಿನ 7 ದಿನದಲ್ಲಿ ವಿಚಾರಣೆಗೆ ಹಾಜರಾಗುತ್ತಾರೆ. ವಿದೇಶಕ್ಕೆ ಹೋಗಿದ್ದು ಪ್ರೀಪ್ಲಾನ್ ಅನ್ನೋದು ಸುಳ್ಳು. ಇದೇ ಕೇಸ್‌ಗಾಗಿ ಅವರು ದೇಶ ಬಿಟ್ಟಿಲ್ಲ. ಹೊಳೆನರಸೀಪುರದಲ್ಲಿ ಕೇಸ್ ರಿಜಿಸ್ಟರ್ ಆಗೋ ಮುಂಚೆಯೇ ಹೋಗಿದ್ದಾರೆ. ನಾವು ಕೇಸ್ ಬಗ್ಗೆ ಕಮ್ಯೂನಿಕೇಟ್ ಮಾಡುತ್ತಿದ್ದೇವೆ ಎಂದು ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನ ಪೆನ್‌ಡ್ರೈವ್‌ ಕೇಸ್ ಎದುರಿಸಲು ರೆಡಿಯಾದ ಪ್ರಜ್ವಲ್ ರೇವಣ್ಣ; ವಿದೇಶದಿಂದಲೇ ಹೇಳಿದ್ದೇನು?

https://newsfirstlive.com/wp-content/uploads/2024/04/PRAJWAL.jpg

Load More