ಹಾಸನ ರೌಡಿಶೀಟರ್​ನ ಬರ್ಬರ ಹತ್ಯೆ.. ನಡುರಸ್ತೆಯಲ್ಲಿಯೇ ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು

author-image
AS Harshith
Updated On
ಹಾಸನ ರೌಡಿಶೀಟರ್​ನ ಬರ್ಬರ ಹತ್ಯೆ.. ನಡುರಸ್ತೆಯಲ್ಲಿಯೇ ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು 
Advertisment
  • ರೌಡಿ ಶೀಟರ್​ನನ್ನು​ ಬರ್ಬರವಾಗಿ ಹತ್ಯೆ ಮಾಡಿದ ಹಂತಕರು
  • ನಡುರಸ್ತೆಯಲ್ಲಿಯೇ ಕೊಚ್ಚಿ ಕೊಂದ ದುಷ್ಕರ್ಮಿಗಳು
  • ಸಿಸಿಟಿವಿಯಲ್ಲಿ ಸೆರೆಯಾಯ್ತು ದುರುಳರ ಭಯಾನಕ ದೃಶ್ಯ

ಹಾಸನ: ನಿನ್ನೆ ನಡುರಸ್ತೆಯಲ್ಲಿಯೇ ರೌಡಿ ಶೀಟರ್​ನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಮಾಸ್ತಿಗೌಡ ಎಂಬಾತನನ್ನು ರೌಡಿಗಳು ಅಟ್ಟಾಡಿಸಿ ಕೊಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯ ಸೆರೆಯಾಗಿದೆ.

ರೌಡಿಗಳು ಮಾಸ್ತಿಯನ್ನ ಅಟ್ಟಾಡಿಸುವ ದೃಶ್ಯ ಸಿಸಿಟಿವಿಯಲ್ಲಿ‌‌ ರೆಕಾರ್ಡ್​ ಆಗಿದೆ. ಕೈಯಲ್ಲಿ ತಲ್ವಾರ್‌ ಹಿಡಿದ ರೌಡಿಗಳು ಮಾಸ್ತಿಗೌಡನನ್ನು ಅಟ್ಟಾಡಿಸಿಕೊಂಡು ಹೋಗುವುದು ದೃಶ್ಯದಲ್ಲಿ ಕಂಡಿದೆ.

ಬಳಿಕ ದುಷ್ಕರ್ಮಿಗಳು ಮಾಸ್ತಿಗೌಡನನ್ನ ನಡುರಸ್ತೆಯಲ್ಲಿ ಕೊಂದಿದ್ದಾರೆ. ಹಂತಕರು ಮಾಸ್ತಿಗೌಡನನ್ನು ಸುತ್ತುವರಿದು ಕೊಚ್ಚಿ ಕೊಲೆ ಮಾಡಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ ನಾಲ್ವರು ಹಂತಕರು ತಲ್ವಾರ್ ಹಿಡಿದು ಅಟ್ಟಾಡಿಸಿದ್ದಾರೆ.

ಇನ್ನು ಸಿಸಿಟಿವಿ ವಿಡಿಯೋ ಆಧರಿಸಿ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment