newsfirstkannada.com

ರೇವಣ್ಣ ನಾಪತ್ತೆ? SITಯಿಂದ ಲುಕ್​ಔಟ್​ ನೋಟಿಸ್​​.. ಬಂಧನದ ಭೀತಿಯಲ್ಲಿ ಮಾಜಿ ಸಚಿವ

Share :

Published May 4, 2024 at 7:22am

Update May 4, 2024 at 7:31am

    ಎರಡೆರಡು​​​ ಎಫ್​ಐಆರ್​​ನಿಂದ ಹೆಚ್​ಡಿ ರೇವಣ್ಣ ಕಂಗಾಲ್​​

    364 A, ಅಪಹರಣ, 364 ಅಕ್ರಮ ಬಂಧನ ಜಾಮೀನು ರಹಿತ ಸೆಕ್ಷನ್​​

    ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಲ್ಲಿ‌ ವಿಚಾರಣೆ

ರೇವಣ್ಣ ಎಲ್ಲಿ? ಸದ್ಯ ಈ ಪ್ರಶ್ನೆ ಜನ ಸಾಮಾನ್ಯರ ಬಾಯಲ್ಲಿ ಹರಿದಾಡುತ್ತಿದೆ. ಮಗ ಫಾರಿನ್​​ನಲ್ಲಿ, ತಂದೆ ಎದೆಲ್ಲೋ?. ಮೈಸೂರು ಕಿಡ್ನಾಪ್​​​ ಕೇಸ್​ ಅದ್ಯಾಕೋ ರೇವಣ್ಣಗೆ ಟೆನ್ಶನ್​​ ದುಪ್ಪಟ್ಟು ಮಾಡಿದೆ. ಪ್ರಕರಣದಲ್ಲಿ A2 ಆರೋಪಿ ಬಂಧನ ಆಗಿದ್ದು, ಮುಂದಿನ ಸರದಿ ನಂದೇನಾ ಅನ್ನೋ ಆತಂಕದಲ್ಲೇ ರೇವಣ್ಣ ನಾಪತ್ತೆ ಆಗಿದ್ದಾರೆ. ಎಸ್​​ಐಟಿ ಲುಕ್​ಔಟ್​ ನೋಟಿಸ್​ ಜಾರಿ ಮಾಡಿದೆ. ಆದ್ರೆ, ಇವತ್ತಿನ ಜಾಮೀನು ಅರ್ಜಿ ವಿಚಾರಣೆ ಮೇಲೆ ರೇವಣ್ಣ, ಭವಿಷ್ಯ ನಿಂತಿದೆ.

ರೇವಣ್ಣ ಕುಟುಂಬಕ್ಕೆ ಶನಿ ಹೆಗಲೇರಿದ್ನಾ? ಗೊತ್ತಿಲ್ಲ. ಒಂದಂತು ಸತ್ಯ ಇದು ಸಂಕಷ್ಟದ ಕಾಲ. ಹೋಮ-ಹವನಗಳು ಕೈಹಿಡಿಯದ ಸ್ಥಿತಿ. ಪಾಪಕರ್ಮಗಳ ಈ ಸಂದಿಗ್ಧತೆ ಬೇಧಿಸಲಾಗದ ಶತ್ರುಬಾಧೆಯಿಂದ ಭೇದಿ ಹೆಚ್ಚಿಸಿದೆ. ಈಗ ಮೈಸೂರಿನ ಕೆ.ಆರ್​.ನಗರದ ಈ ಕೇಸ್​ನ್ನೇ ನೋಡಿ, ಕಿಡ್ನಾಪ್ ಆರೋಪ‌ ರೇವಣ್ಣಗೆ ಹೈ ಡೆಫನಿಷನ್​​​ ಟೆನ್ಶನ್​​ ತರಿಸಿದೆ.

ರೇವಣ್ಣಗೆ ಹೊಳೆನರಸೀಪುರ, ಕೆ.ಆರ್​.ನಗರ ಕೇಸ್​​ ಟೆನ್ಶನ್​​!

ಮಹಿಳೆಯನ್ನ ಕರೆದೊಯ್ದಿದ್ದ ಭವಾನಿ ರೇವಣ್ಣ ಸಂಬಂಧಿ ಸತೀಶ್ ಬಾಬಣ್ಣರನ್ನ ಕೆ.ಆರ್ ನಗರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಸತೀಶ್‌ ಬಾಬಣ್ಣ ಎ2 ಆಗಿದ್ದಾರೆ. ಸತತ ಒಂದು ಗಂಟೆ ಕಾಲ ವಿಚಾರಣೆ ನಡೆಸಲಾಗಿದೆ. ಕೆ.ಆರ್ ನಗರ ಸೆಷನ್​ಕೋರ್ಟ್‌, 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಇತ್ತ, ಎ1 ಆರೋಪಿ ರೇವಣ್ಣ ದಿಢೀರ್​​​ ಮಿಸ್ಸಿಂಗ್​​​ ಆಗಿದ್ದಾರೆ. ಇದೇ ಕೇಸ್​ನಲ್ಲಿ ರೇವಣ್ಣ ಬೇಲ್​ ಬಯಸಿ ಅರ್ಜಿ ಸಲ್ಲಿಸಿದ್ದು, ಇವತ್ತು ವಿಚಾರಣೆಗೆ ಬರಲಿದೆ.

ದೂರಿನಲ್ಲಿ ಮಹಿಳೆ ಹೆಸರನ್ನೇ ಉಲ್ಲೇಖಿಸಿಲ್ಲ ಎಂದು ವಕೀಲರ ವಾದ

ಕೆ.ಆರ್.ನಗರ ಠಾಣೆಯ FIRನಲ್ಲಿ ಜಾಮೀನು ರಹಿತ ಸೆಕ್ಷನ್​ಗಳಿವೆ. ಮುಖ್ಯವಾಗಿ 364 A ಅಪಹರಣ, 364 ಅಕ್ರಮ ಬಂಧನ ಜಾಮೀನು ರಹಿತ ಸೆಕ್ಷನ್​​ ಆಗಿದೆ. ಈ ಕೇಸ್​​ ಸದ್ಯ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ನಲ್ಲಿ‌ ನಡೆಯುತ್ತಿದೆ. ದೂರಿನಲ್ಲಿ ಮಹಿಳೆ ಹೆಸರನ್ನೇ ಉಲ್ಲೇಖಿಸಿಲ್ಲ ಎಂದು ರೇವಣ್ಣ ಪರ ವಕೀಲರು ವಾದಿಸಿದ್ದಾರೆ. ಅಲ್ಲದೇ, ಎಸ್ಐಟಿಯ ಮುಂದೆ ಹಾಜರಾಗಲು ಹೆಚ್.ಡಿ.ರೇವಣ್ಣ ಸಿದ್ಧರಿದ್ದಾರೆ. ಹೀಗಾಗಿ ಈ ಕೇಸ್​​​ನಲ್ಲಿ ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಿದ್ದಾರೆ. ವಾದ ಆಲಿಸಿದ ನ್ಯಾಯಾಧೀಶರು, ಬೆಳಗ್ಗೆ 11 ಗಂಟೆಗೆ ವಿಚಾರಣೆ ಮುಂದೂಡಿದ್ದಾರೆ. ಜೊತೆಗೆ ಎಸ್ಐಟಿ ಪರ ಎಸ್​ಪಿಪಿಗೆ ನೋಟಿಸ್ ನೀಡಿದ್ದಾರೆ.

ನಾಪತ್ತೆಯಾದ ರೇವಣ್ಣಗೆ SIT ಲುಕ್​ಔಟ್​ ನೋಟಿಸ್​​!

ಪ್ರಕರಣ ದಿನೇ ದಿನೆ ಕಠಿಣವಾಗ್ತಾ ಆಗ್ತಿದೆ. ನಿತ್ಯ ಒಂದೊಂದು ಕೇಸ್​​​ ಭುಜಕ್ಕೆ ಬಂದು ಚಪ್ಪರಿಸ್ತಿವೆ.. ಇದರಿಂದ ಕಂಗಾಲಾದ ರೇವಣ್ಣ, ದಿಢೀರ್​​​ ನಾಪತ್ತೆ ಆಗಿದ್ದಾರೆ. ವಿಚಾರಣೆಗೆ ನೋಟಿಸ್​​​ ನೀಡಿದ್ರೂ ಕಾಣಿಸ್ತಿಲ್ಲ. ಹೀಗಾಗಿ ಮಾಜಿ ಸಚಿವ ಹೆಚ್‌.ಡಿ ರೇವಣ್ಣಗೆ ಎಸ್​​ಐಟಿ ಲುಕ್‌ಔಟ್ ನೋಟಿಸ್ ಜಾರಿ ಮಾಡಿದೆ. ಹೀಗಾಗಿ ರೇವಣ್ಣಗೆ ಬಂಧನ ಭೀತಿ ಮತ್ತಷ್ಟು ಹೆಚ್ಚಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇವಣ್ಣ ನಾಪತ್ತೆ? SITಯಿಂದ ಲುಕ್​ಔಟ್​ ನೋಟಿಸ್​​.. ಬಂಧನದ ಭೀತಿಯಲ್ಲಿ ಮಾಜಿ ಸಚಿವ

https://newsfirstlive.com/wp-content/uploads/2023/09/HD-Revanna.jpg

Load More