/newsfirstlive-kannada/media/post_attachments/wp-content/uploads/2024/04/prajval-revanna.jpg)
ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಂತ್ರಸ್ತೆಯೊಬ್ಬರು ಇಂದು ಲೈಂಗಿಕ ದೌರ್ಜನ್ಯ ಹಾಗೂ ಬೆದರಿಕೆ ಆರೋಪದಲ್ಲಿ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಇದನ್ನೂ ಓದಿ:‘ಸಾವಿರಾರು ಹೆಣ್ಣು ಮಕ್ಕಳ ಚಿತ್ರೀಕರಣ’- ಹಾಸನದ ಅಶ್ಲೀಲ ವಿಡಿಯೋಗಳ ಸತ್ಯ ಬಿಚ್ಚಿಟ್ಟ ಡಾ.ನಾಗಲಕ್ಷ್ಮಿ ಚೌಧರಿ
ಹಾಸನ ಅಶ್ಲೀಲ ವಿಡಿಯೋ ಕೇಸ್​ ಸಂಬಂಧ ಎಸ್ಐಟಿ ತಂಡ ರಚಿಸಿ ಇಂದು ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಆದೇಶ ಹೊರಡಿಸಲಾಗಿದೆ. ಬಿಜಯ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಎಸ್ಐಟಿ ತಂಡ ರಚನೆ ಮಾಡಲಾಗಿದೆ. ಬಿಜಯ್ ಸಿಂಗ್ ಅವರು ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್ಮೆಂಟ್ ಎಡಿಜಿಪಿ ಆಗಿದ್ದಾರೆ. ಇವರ ನೇತೃತ್ವದಲ್ಲಿ ಹಾಸನ ಪೆನ್​ ಡ್ರೈವ್​ ಪ್ರಕರಣದ ತನಿಖೆ ನಡೆಯಲಿದೆ. ಜೊತೆಗೆ ಎಸ್ ಪಿ ಸುಮನ್ ಡಿ ಪನ್ನೇಕರ್ ಹಾಗೂ ಸೀಮಾ ಲಾಠ್ಕರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ.
/newsfirstlive-kannada/media/post_attachments/wp-content/uploads/2024/03/Prajwal-Revanna-1.jpg)
ಇನ್ನು, ಹಾಸನ ಪೆನ್​ ಡ್ರೈವ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೇಸ್​ ದಾಖಲಿಸಿದ್ದಾರೆ. ಇನ್ನು, ಇಂದು ಸಂತ್ರಸ್ತೆ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 354(A) ಲೈಂಗಿಕ ಕಿರುಕುಳ, 354(D) ಮಹಿಳೆಗೆ ಮುಜುಗರ ಆಗುವಂತೆ ಮಾಡುವುದು, 506 ಬೆದರಿಕೆ ಹಾಗೂ 509 ಮಹಿಳೆ ಮಾನಹಾನಿ ಅಡಿಯಲ್ಲಿ ಎಫ್​ಐಆರ್ ಕೇಸ್ ದಾಖಲಾಗಿದೆ. ಸದ್ಯ ಈ ಕೇಸ್​ ಅನ್ನು ಎಸ್​ಐಟಿಗೆ ವರ್ಗಾಯಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us