newsfirstkannada.com

ಮಾಹಿತಿ ಲೀಕ್​ ಆಗೋ ಭಯ; ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​​​ ಕೇಸ್​ಗೆ ದಿನಕ್ಕೊಂದು ಟ್ವಿಸ್ಟ್​​!

Share :

Published May 12, 2024 at 5:57am

    ಮಾಹಿತಿ ಸೋರಿಕೆಯಾಗದಂತೆ 6 ತಂಡದಿಂದ ಕಾರ್ಯಾಚರಣೆ

    ತನಿಖಾ ಮಾಹಿತಿ ಸೋರಿಕೆಯಾದಲ್ಲಿ ಕಠಿಣ ಕ್ರಮಕ್ಕೆ ಎಚ್ಚರಿಕೆ

    ಹಾಸನ ಅಶ್ಲೀಲ ವಿಡಿಯೋ ವೈರಲ್ ಕೇಸ್​ ತೀವ್ರಗೊಂಡ ತನಿಖೆ

ಹಾಸನ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದ ತನಿಖೆ ತೀವ್ರಗೊಂಡಿದೆ. ಇದರ ಮಧ್ಯೆ ತಂಡದ ಅಧಿಕಾರಿಗಳಿಗೆ ಎಸ್​​ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ಖಡಕ್ ವಾರ್ನಿಂಗ್ ನೀಡಿದ್ದು, ಮಾಹಿತಿ ಸೋರಿಕೆಯಾಗದಂತೆ ಎಚ್ಚರ ವಹಿಸಲು ಸೂಚನೆ ನೀಡಿದ್ದಾರೆ. ಮತ್ತೊಂದು ಆರೋಪದಲ್ಲಿ ಎಸ್​ಐಟಿಯೊಳಗೇ ಆತಂರಿಕ ತನಿಖೆ ನಡೆಯುತ್ತಿದೆ. ದೇಶಾದ್ಯಂತ ಸಂಚಲನ, ತಲ್ಲಣ, ಆಕ್ರೋಶ ಸೃಷ್ಟಿಸಿರುವ ಪ್ರಜ್ವಲ್​ ಪೆನ್​ಡ್ರೈವ್​ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್​ಐಟಿಗೆ ದಿನಕ್ಕೊಂದು ಸವಾಲು ಎದುರಾಗುತ್ತಿವೆ. ತನಿಖಾ ತಂಡ ಎಷ್ಟೇ ಎಚ್ಚರಿಕೆಯಿಂದ ವಿಚಾರಣೆ ಮಾಡ್ತಿದ್ರೂ, ಮಾಹಿತಿ ಸೋರಿಕೆ ಆಗ್ತಿದೆ. ಇದರ ಬೆನ್ನಲ್ಲೇ ಎಚ್ಚೆತ್ತ ಪೆನ್​ಡ್ರೈವ್​ ಕೇಸ್​ನ ಎಸ್​ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್​ ಗೌಪ್ಯ ತನಿಖೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ: ಅಪ್ಪ, ಅಮ್ಮ.. ಬದುಕಿಸಿ ಬಿಡಿ.. ಕರುಳು ಹಿಂಡುತ್ತೆ ಪ್ರವಾಹದಲ್ಲಿ ಫ್ಯಾಮಿಲಿ ಕಳೆದುಕೊಂಡ ಪುಟಾಣಿಯ ಕಣ್ಣೀರ ಕತೆ

ಹಾಸನ ಅಶ್ಲೀಲ ಪೆನ್​ಡ್ರೈವ್​ ಪ್ರಕರಣ ಸಾಕಷ್ಟು ಜಟಿಲವಾಗುತ್ತಿದೆ. ಒಂದೆಡೆ ಪ್ರಜ್ವಲ್​ ವಿರುದ್ಧದ ಆರೋಪಗಳು. ಮತ್ತೊಂದೆಡೆ ವಿಡಿಯೋ ಹರಿಬಿಟ್ಟವರು ಯಾರು ಎಂಬ ಪ್ರಶ್ನೆ. ಇದರ ಮಧ್ಯೆ ಎಸ್​ಐಟಿ ವಶದಲ್ಲಿದ್ದಾಗಲೇ ಇದೊಂದು ರಾಜಕೀಯ ಷಡ್ಯಂತ್ರ ಎಂದಿದ್ದ ರೇವಣ್ಣ. ಇನ್ನು, ವಕೀಲ ದೇವರಾಜೇಗೌಡರಿಂದ ಸಾಲು ಸಾಲು ಆಡಿಯೋ ಬಾಂಬ್​. ಹೀಗೆ ಪೆನ್​ಡ್ರೈವ್​ ಪ್ರಕರಣದಲ್ಲಿ ಸಾಕಷ್ಟು ಮಾಹಿತಿಗಳು ಸೋರಿಕೆ ಆಗಿದ್ವು. ಇನ್ನು ವಿಪಕ್ಷಗಳೂ ಕೂಡ ಎಸ್​ಐಟಿ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದೆ. ಈ ಎಲ್ಲ ಕಾರಣಗಳಿಂದ ಅಲರ್ಟ್​ ಆದ ಎಸ್​ಐಟಿ ಚೀಫ್​ ಬಿ.ಕೆ.ಸಿಂಗ್​ ತಮ್ಮ ತನಿಖಾ ತಂಡದ ಸದ್ಯರಿಗೆ ಖಡಕ್​ ಸೂಚನೆ ಕೊಟ್ಟಿದ್ದು, ಪೆನ್​ಡ್ರೈವ್​​​ ಕೇಸ್​ನಲ್ಲಿ ಸೀಕ್ರೆಟ್​ ಆಪರೇಷನ್​ಗೆ ಮುಂದಾಗಿದ್ದಾರೆ.

SIT ಮುಖ್ಯಸ್ಥರ ವಾರ್ನಿಂಗ್!

ಮಾಹಿತಿ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಿರುವ ಎಸ್ಐಟಿ ಚೀಫ್ ಬಿ.ಕೆ.ಸಿಂಗ್​, ಪೆನ್​ಡ್ರೈವ್​ ಪ್ರಕರಣದಲ್ಲಿ ಆರು ಪ್ರತ್ಯೇಕ ತಂಡಗಳಾಗಿ ತನಿಖೆ ನಡೆಸಲು ಸೂಚನೆ ನೀಡಿದ್ದಾರೆ. ಕೋರ್ಟ್ ಪ್ರೊಸಿಡಿಂಗ್ಸ್, ಪತ್ತೆ ಕಾರ್ಯ, ಹೇಳಿಕೆ ದಾಖಲು, ಎವಿಡೆನ್ಸ್, ಮಹಜರ್ ಪ್ರಕ್ರಿಯೆಗೆ ಪ್ರತ್ಯೇಕ ತನಿಖಾ ತಂಡ ರಚನೆ ಮಾಡಿದ್ದಾರಂತೆ. ಒಂದು ತಂಡ ಮತ್ತೊಂದು ತಂಡದ ಜೊತೆ ಚರ್ಚಿಸುವಂತಿಲ್ಲ. ಏನೇ ಮಾಹಿತಿ ಇದ್ದರೂ ತಂಡದ ಮುಖ್ಯಸ್ಥರ ಗಮನಕ್ಕೆ ತರಬೇಕು. ಎಸ್ಐಟಿ ಮುಖ್ಯಸ್ಥರ ಬಳಿ ಮಾತ್ರ ಚರ್ಚೆ ಮಾಡಲು ಸೂಚನೆ ನೀಡಿದ್ದಾರೆ. ತನಿಖಾ ಮಾಹಿತಿ ಸೋರಿಕೆಯಾದಲ್ಲಿ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ.

ಎಸ್​ಐಟಿಯೊಳಗೇ ನಡೆಯುತ್ತಿದೆ ಆಂತರಿಕ ತನಿಖೆ

ಎಸ್​ಐಟಿಗೆ ಮಾಹಿತಿ ಸೋರಿಕೆ ಟೆನ್ಷನ್​ ಒಂದೆಡೆಯಾದ್ರೆ, ಮತ್ತೊಂದೆಡೆ ಅಧಿಕಾರಿಗಳ ಹೆಸರಲ್ಲಿ ಸಂತ್ರಸ್ತ ಮಹಿಳೆಯರಿಗೆ ಬೆದರಿಕೆ ಆರೋಪ ತಲೆನೋವು ತರಿಸಿದೆ. ಪೆನ್​ಡ್ರೈವ್​ ಪ್ರಕರಣದ ಸಂತ್ರಸ್ತೆಯರಿಗೆ ಪ್ರಜ್ವಲ್​ ವಿರುದ್ಧ ಹೇಳಿಕೆ ನೀಡುವಂತೆ ಪೊಲೀಸರ ಹೆಸರಲ್ಲಿ ಒತ್ತಡ ಹಾಕ್ತಿದ್ದಾರಂತೆ. ಈ ಬಗ್ಗೆ ಮೂವರು ಮಹಿಳೆಯರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದರು. ಈ ರೀತಿ ಆರೋಪ ಕೇಳಿ ಬಂದ ಬೆನ್ನಲ್ಲೇ ಎಸ್​ಐಟಿಯೊಳಗೆ ಆಂತರಿಕ ತನಿಖೆ ನಡೆಯುತ್ತಿದೆ. ಪ್ರಜ್ವಲ್​ ಪೆನ್​ಡ್ರೈವ್​ ಪ್ರಕರಣ ತುಂಬಾ ಗಂಭೀರವಾದ ಕೇಸ್​ ಆಗಿರುವ ಕಾರಣ ಎಸ್​ಐಟಿ ಮೈಯನ್ನೆಲ್ಲ ಕಣ್ಣಾಗಿಸಿಕೊಂಡು ತನಿಖೆ ಮಾಡ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಹಿತಿ ಲೀಕ್​ ಆಗೋ ಭಯ; ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್​​​ ಕೇಸ್​ಗೆ ದಿನಕ್ಕೊಂದು ಟ್ವಿಸ್ಟ್​​!

https://newsfirstlive.com/wp-content/uploads/2024/05/prajwal-revanna3.jpg

Load More