Advertisment

ಸಿನಿಮಾ ಆಯ್ತು ಹಾಸನ ಪೆನ್​ ಡ್ರೈವ್​ ಕೇಸ್​? ರಿಲೀಸ್​ ಆಯ್ತು ಟೀಸರ್​! ಹೀರೋ ಯಾರು? ನಿರ್ಮಾಪಕ ಏನಂದ್ರು?

author-image
AS Harshith
Updated On
ಸಿನಿಮಾ ಆಯ್ತು ಹಾಸನ ಪೆನ್​ ಡ್ರೈವ್​ ಕೇಸ್​? ರಿಲೀಸ್​ ಆಯ್ತು ಟೀಸರ್​! ಹೀರೋ ಯಾರು? ನಿರ್ಮಾಪಕ ಏನಂದ್ರು?
Advertisment
  • ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್​ ಡ್ರೈವ್ ಕೇಸ್
  • ಸಿಂಹಗುಹೆ ಸಿನಿಮಾ ಮಾಡಿ ಟೀಸರ್ ರಿಲೀಸ್
  • ನಿರ್ಮಾಪಕ ಕೃಷ್ಣರವರು ಪ್ರಜ್ವಲ್ ರೇವಣ್ಣನವರ ಸ್ನೇಹಿತ

ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್​ ಡ್ರೈವ್ ಕೇಸ್​ ಸಂಬಂಧಿತ ಕಥೆ ಸಿನಿಮಾ ಆಗ್ತಿದ್ಯಾ? ಇಂಥದ್ದೊಂದು ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ರಿಲೀಸ್ ಆಗಿರೋ ಅದೊಂದು ಟೀಸರ್.

Advertisment

ನೀವೀಗ ನೋಡ್ತಿರೋದು ಸಿಂಹಗುಹೆ ಅನ್ನೋ ಚಿತ್ರದ ಟೀಸರ್. ಸದ್ಯ ಇದೇ ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್​ ಡ್ರೈವ್ ಕೇಸ್​ ಸಂಬಂಧಿತ ಕಥೆನಾ ಅನ್ನೋ ಚರ್ಚೆ ಆರಂಭವಾಗಿದೆ.

ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಹೊಸ ತಂಡ ಸಿಂಹಗುಹೆ ಸಿನಿಮಾ ಮಾಡಿ ಟೀಸರ್ ರಿಲೀಸ್ ಮಾಡಿದೆ. ಈ ಟೀಸರ್​ನಲ್ಲಿ ಅಶ್ಲೀಲ ವೀಡಿಯೋಗಳ ಕಂಟೆಂಟ್ ಇದೆ. ಇದು ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್​ ಡ್ರೈವ್ ಕೇಸ್​ ಸಂಬಂಧಿತ ಕಥೆ ಸಿನಿಮಾ ಆಗ್ತಿದ್ಯಾ ಇಂಥದ್ದೊಂದು ಚರ್ಚೆ ಶುರುವಾಗಿದೆ. ಇದನ್ನ ಪ್ರಜ್ವಲ್​ ಕೇಸ್​ಗೆ ಲಿಂಕ್ ಮಾಡ್ತಿರೋದಕ್ಕೆ ಕಾರಣವೂ ಇದೆ. ಈ ಸಿನಿಮಾದ ಚಿತ್ರೀಕರಣ ನಡೆದಿರೋದು ಹಾಸನ, ಹೊಳೆನರಸೀಪುರ, ಅರಕಲಗೂಡು ಭಾಗದಲ್ಲಿ. ನಿರ್ಮಾಪಕ ಕೃಷ್ಣ ಕೂಡ ಹಾಸನ ಮೂಲದವರು, ವಿಶೇಷ ಅಂದ್ರೆ ಇದೇ ಕೃಷ್ಣ ಪ್ರಜ್ವಲ್ ರೇವಣ್ಣ ಸ್ನೇಹಿತ ಕೂಡ ಹೌದು.

publive-image

ಇದನ್ನೂ ಓದಿ: ಬರ್ತ್​​ಡೇ ಹೆಸರಲ್ಲಿ ರೇವ್​​ ಪಾರ್ಟಿ ಕೇಸ್​ಗೆ ಬಿಗ್​ ಟ್ವಿಸ್ಟ್​​.. ಹೊರಬಿತ್ತು ಸ್ಫೋಟಕ ಮಾಹಿತಿ

Advertisment

ಪೆನ್ ಡ್ರೈವ್ ಕಥೆಯಂತೆ ಟೀಸರ್ ಕಾಣ್ತಿದೆ ಎಂದು ಹೋಲಿಕೆ ಶುರುವಾಗಿದೆ. ಈ ಚರ್ಚೆ ಬೆನ್ನಲ್ಲೇ ಸಿಂಹಗುಹೆ ತಂಡ ಸ್ಪಷ್ಟನೆ ಕೂಡ ನೀಡಿದೆ. ಸಿನಿಮಾ ಕಥೆ ಹಾಗೂ ಪೆನ್​ ಡ್ರೈವ್​ ಕೇಸ್​ಗೂ ಯಾವುದೇ ಸಂಬಂಧವಿಲ್ಲ. ಇದು ಬೇರೆಯದ್ದೇ ಸಸ್ಪೆನ್ಸ್​ ಸ್ಟೋರಿ ಅಂತಾ ನಿರ್ಮಾಪಕರು ಸ್ಪಷ್ಟವಾಗಿ ಹೇಳಿದ್ದಾರೆ.

[caption id="attachment_65540" align="alignnone" width="800"]publive-imageನಿರ್ಮಾಪಕ ಕೃಷ್ಣ[/caption]

ಇದು ಕಾಕತಾಳೀಯ ಅಷ್ಟೇ

ಈ ಸಿನಿಮಾಗೂ, ಪೆನ್​ಡ್ರೈವ್ ಪ್ರಕರಣಕ್ಕೂ ಲಿಂಕ್ ಇಲ್ಲ ಅಂತಾ ಚಿತ್ರತಂಡ ಸ್ಪಷ್ಟಪಡಿಸಿದೆ. ಆದರೆ, ತೋಟದ ಮನೆ ರಹಸ್ಯ, ಅಶ್ಲೀಲ ವಿಡಿಯೋ ವಿಚಾರಗಳು ಚಿತ್ರದಲ್ಲಿರೋದು ಹಲವು ಪ್ರಶ್ನೆಗಳು ಮೂಡುವಂತೆ ಮಾಡಿದೆ. ಇದಕ್ಕೆಲ್ಲಾ ಸಿನಿಮಾ ತೆರೆಕಂಡ ಬಳಿಕವೇ ಉತ್ತರ ಸಿಗಲಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment