/newsfirstlive-kannada/media/post_attachments/wp-content/uploads/2025/01/Hassan-Rowdy-Arrest.jpg)
ಇತ್ತೀಚೆಗೆ ಹಾಸನದಲ್ಲಿ ಸಾರ್ವಜನಿಕರು ಬೆಚ್ಚಿ ಬೀಳಿಸೋ ಘಟನೆಯೊಂದು ನಡೆದಿತ್ತು. ಖಾಸಗಿ ಬಸ್ ತಡೆದು ದಾಂಧಲೆ ನಡೆಸಿದ ಪುಡಿ ರೌಡಿ ಮಾರಾಕಾಸ್ತ್ರ ಹಿಡಿದು ಬಸ್‌ನಲ್ಲಿದ್ದವರಿಗೆ ಆವಾಜ್ ಹಾಕಿದ್ದ. ಕಾರಿನಲ್ಲಿದ್ದ ಲಾಂಗ್ ತೆಗೆದು ಖಾಸಗಿ ಬಸ್‌ನ ಗ್ಲಾಸ್ ಒಡೆದು ಪುಂಡಾಟ ಪ್ರದರ್ಶನ ಮಾಡಿದ್ದ.
ಹಾಸನದ ಬೈಪಾಸ್ ಬಳಿ ಮಧ್ಯರಾತ್ರಿ 2 ಗಂಟೆಗೆ ನಡೆದಿರೋ ಈ ಘಟನೆಯನ್ನ ಬಸ್‌ನಲ್ಲಿದ್ದ ಪ್ಯಾಸೆಂಜರ್ ವಿಡಿಯೋ ರೆಕಾರ್ಡ್ ಮಾಡಿದ್ದರು. ಪುಡಿರೌಡಿ ಮಾರಾಕಾಸ್ತ್ರ ಹಿಡಿದು ಬಸ್‌ನಲ್ಲಿದ್ದವರಿಗೆ ಆವಾಜ್ ಹಾಕಿದ್ದ ಈ ವಿಡಿಯೋ ವೈರಲ್ ಆಗಿತ್ತು.
ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಅಡ್ಡಗಟ್ಟಿದ್ದ ಪುಡಿ ರೌಡಿ, KA 51 MV 8912 ಕಾರಿನಲ್ಲಿ ದಾಳಿ ಮಾಡಿ ಲಾಂಗ್‌ನಿಂದ ಬಸ್ ಗ್ಲಾಸ್ ಒಡೆದು ಎಸ್ಕೇಪ್ ಆಗಿದ್ದ. ಹಾಸನದಲ್ಲಿ ಪುಡಿರೌಡಿಗಳು ಬಾಲ ಬಿಚ್ಚಿದ್ದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಕೊನೆಗೆ ಖಾಸಗಿ ಬಸ್ ಅಡ್ಡಗಟ್ಟಿ ರೌಡಿ ಶೀಟರ್ ಹಲ್ಲೆ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಪುಡಿರೌಡಿಯ ಹೆಡೆಮುರಿ ಕಟ್ಟಿದ್ದಾರೆ.
ಇದನ್ನೂ ಓದಿ: ಪ್ರಯಾಗ್‌ರಾಜ್ ಮಹಾ ಕುಂಭಮೇಳದಲ್ಲಿ ಶಾಹಿ ಸ್ನಾನ ಮಾಡಿದ ಪವಿತ್ರಾ ಗೌಡ; ಫೋಟೋಗಳು ಇಲ್ಲಿವೆ!
ಕಾರಿನಿಂದ ಲಾಂಗ್ ತೆಗೆದು ಆವಾಜ್ ಹಾಕಿದ ಪುಡಿ ರೌಡಿಯನ್ನು ರೌಡಿಶೀಟರ್ ಮನು ಎನ್ನಲಾಗಿದೆ. ಹಾಸನ ನಗರ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲಾಗಿದ್ದು, ಪೊಲೀಸರು ಬಂಧಿಸಲು ಮುಂದಾಗಿದ್ದಾರೆ. ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸರ ಮೇಲೆ ರೌಡಿಶೀಟರ್ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ರೌಡಿಶೀಟರ್ ಮನು ಕಾಲಿಗೆ ಗುಂಡೇಟು ತಗುಲಿದೆ.
ಹಾಸನ ತಾಲ್ಲೂಕಿನ ಶಾಂತಿಗ್ರಾಮದ ಬಳಿ ಪೊಲೀಸರು ರೌಡಿಶೀಟರ್ ಬಂಧಿಸಲು ಹೋಗಿದ್ದು, ಹಾಸನ ನಗರ ಠಾಣೆ ಇನ್ಸ್‌ಪೆಕ್ಟರ್ ಮೋಹನ್ ಕೃಷ್ಣ ಅವರು ಶೂಟ್ ಮಾಡಿದ್ದಾರೆ. ರೌಡಿಶೀಟರ್ ಮನು ಅವರು ಮೂರು ಕೊಲೆ ಯತ್ನ, ಒಂದು ಕೊಲೆ ಕೇಸ್ ಆರೋಪಿಯಾಗಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ