HD ರೇವಣ್ಣ ನಿವಾಸಕ್ಕೆ ಸಂತ್ರಸ್ತೆ ಜೊತೆ ಎಂಟ್ರಿ ಕೊಟ್ಟ SIT ತಂಡ.. ಏನೇನು ಮಾಡ್ತಾರೆ ಗೊತ್ತಾ?

author-image
Bheemappa
Updated On
HD ರೇವಣ್ಣ ನಿವಾಸಕ್ಕೆ ಸಂತ್ರಸ್ತೆ ಜೊತೆ ಎಂಟ್ರಿ ಕೊಟ್ಟ SIT ತಂಡ.. ಏನೇನು ಮಾಡ್ತಾರೆ ಗೊತ್ತಾ?
Advertisment
  • ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಹಿನ್ನೆಲೆಯಲ್ಲಿ SIT ಭೇಟಿ
  • ನಿವಾಸದಲ್ಲಿ ಹೆಚ್​.ಡಿ ರೇವಣ್ಣ ಅವರ ಕುಟುಂಬಸ್ಥರು ಯಾರೂ ಇಲ್ಲ
  • ಸಂತ್ರಸ್ತೆಯನ್ನ ಜೊತೆಯಲ್ಲೆ ಕರೆದುಕೊಂಡು ಬಂದಿರುವ ಅಧಿಕಾರಿಗಳು

ಹಾಸನ: ಅಶ್ಲೀಲ ವಿಡಿಯೋ ಕೇಸ್​ಗೆ ಸಂಬಂಧಿಸಿದಂತೆ ಹೊಳೆನರಸೀಪುರದಲ್ಲಿನ ಹೆಚ್​​.ಡಿ ರೇವಣ್ಣರ ಚೆನ್ನಾಂಬಿಕೆ ನಿವಾಸಕ್ಕೆ ಸಂತ್ರಸ್ತೆ ಮಹಿಳೆಯನ್ನು ಕರೆದುಕೊಂಡು ಬರಲಾಗಿದೆ.

ಮಾಜಿ ಸಚಿವ ಹೆಚ್​.ಡಿ ರೇವಣ್ಣರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಹೊಳೆನರಸೀಪುರದ ಚೆನ್ನಾಂಬಿಕೆ ನಿವಾಸಕ್ಕೆ ಎಸ್​​ಐಟಿ ತಂಡ ಆಗಮಿಸಿದೆ. ಸ್ಥಳ ಮಹಜರು ಮಾಡುವುದಕ್ಕಾಗಿ ಜೊತೆಗೆ ಸಂತ್ರಸ್ತೆ ಮಹಿಳೆಯನ್ನು ಅಧಿಕಾರಿಗಳು ಕರೆದುಕೊಂಡು ಬಂದಿದ್ದಾರೆ. ನಿವಾಸದ ಒಳಗೆ ಅಧಿಕಾರಿಗಳು ಎಂಟ್ರಿಕೊಟ್ಟಿದ್ದಾರೆ. ಇನ್ನು, ಮನೆಯಲ್ಲಿ ರೇವಣ್ಣ ಕುಟುಂಬದವರು ಯಾರೂ ಇಲ್ಲ ಎನ್ನುವುದು ಗೊತ್ತಾಗಿದೆ.

publive-image

ಇದನ್ನೂ ಓದಿ:ಪ್ರಜ್ವಲ್ ರೇವಣ್ಣ ಮುಂದೆ ಉಮೇಶ್ ರೆಡ್ಡಿಯೂ ಶೂನ್ಯ; ದೋಸ್ತಿ ನಾಯಕ ಶಿವರಾಮೇಗೌಡ ವಾಗ್ದಾಳಿ

ಎಸ್​​ಐಟಿ ತಂಡದಲ್ಲಿ ಮಹಿಳಾ ಸಿಬ್ಬಂದಿ ಕೂಡ ಇದ್ದಾರೆ. ಸಂತ್ರಸ್ತೆಯನ್ನು ಮನೆಯೊಳಗೆ ಕರೆದುಕೊಂಡು ಹೋಗಿ ಏನೆಲ್ಲ ನಡೆಯಿತು ಎಂಬುದನ್ನು ಸ್ಥಳ ಮಹಜರು ಅನ್ನು ಅಧಿಕಾರಿಗಳು ಮಾಡುತ್ತಾರೆ. ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿನ ಹೆಚ್​​.ಡಿ ರೇವಣ್ಣರ ಚೆನ್ನಾಂಬಿಕೆ ನಿವಾಸಕ್ಕೆ ಈಗಾಗಲೇ ಅಧಿಕಾರಿಗಳು, ಸಂತ್ರಸ್ತೆ ಮಹಿಳೆ ಆಗಮಿಸಿದ್ದಾರೆ. ಸ್ಥಳ ಮಹಜರು ವೇಳೆ ಸಂತ್ರಸ್ತೆ ಮಹಿಳೆ ಏನೆಲ್ಲ ನಡೆಯಿತು ಎಂದು ಹೇಳುವಾಗ ಅಧಿಕಾರಿಗಳು ತಮ್ಮ ಹ್ಯಾಂಡಿ ಕ್ಯಾಮೆರಾ ಮೂಲಕ ಎಲ್ಲವನ್ನು ಸೆರೆ ಹಿಡಿದುಕೊಳ್ಳುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment