/newsfirstlive-kannada/media/post_attachments/wp-content/uploads/2024/04/Hassan-Men.jpg)
ಹಾಸನ: ಬಿಸಿಲ ತಾಪಕ್ಕೆ ಯುವಕನೋರ್ವ ತೆಂಗಿನ ಮರದಲ್ಲೇ ಪ್ರಜ್ಞೆತಪ್ಪಿದ ಘಟನೆ ಸಕಲೇಶಪುರ ತಾಲ್ಲೂಕಿನ ಕೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ನವೀನ್ (21) ಪ್ರಜ್ಞೆ ತಪ್ಪಿದ ಯುವಕ.
ಗ್ರಾಮದ ಮಂಜು ಎಂಬುವವರಿಗೆ ಸೇರಿದ ತೆಂಗಿನಮರದ ಗರಿಗಳನ್ನು ಕತ್ತರಿಸಲು ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ನವೀನ್ ಮರವೇರಿದ್ದನು. ಅತಿಯಾದ ಬಿಸಿಲಿನ ತಾಪಕ್ಕೆ ಪ್ರಜ್ಞಾಹೀನನಾಗಿ ತೆಂಗಿನ ಮರದಲ್ಲೇ ನೇತಾಡಿದ್ದಾನೆ. ಸುಮಾರು ಐವತ್ತು ಅಡಿ ಎತ್ತರದಲ್ಲಿ 45 ನಿಮಿಷಗಳ ಕಾಲ ಪ್ರಜ್ಞೆ ತಪ್ಪಿ ತೆಂಗಿನ ಮರದಲ್ಲೇ ಸಿಲುಕಿಕೊಂಡಿದ್ದಾನೆ.
/newsfirstlive-kannada/media/post_attachments/wp-content/uploads/2024/04/Hassan-Men-1.jpg)
ಇದನ್ನೂ ಓದಿ: ನಂಬಿದ್ರೆ ನಂಬಿ.. ದಿನಕ್ಕೆ 30Km.. ಮೆಟ್ರೋ, ಬಸ್​ನಲ್ಲಿ ಓಡಾಡುತ್ತಿದೆ ಈ ಬೀದಿ ಶ್ವಾನ!
ಈ ಘಟನೆ ಎದುರಾದ ಬೆನ್ನಲ್ಲೇ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಮರದಲ್ಲಿ ನೇತಾಡುತ್ತಿದ್ದ ನವೀನ್‌ನನ್ನು ರಕ್ಷಿಸಿದ್ದಾರೆ. ಸಾವಿನ ದವಡೆಯಿಂದ ಪಾರು ಮಾಡಿ ಆತನನ್ನು ಬದುಕಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us