newsfirstkannada.com

BREAKING: H.D ರೇವಣ್ಣ ಮೇಲೆ ಬಿತ್ತು ನಾನ್‌ ಬೇಲೆಬಲ್ ಸೆಕ್ಷನ್; ನಾಳೆಯೇ ಬಂಧನ ಭೀತಿ

Share :

Published May 2, 2024 at 8:09pm

Update May 2, 2024 at 8:11pm

    ನಾಳೆ ಹೊಳೆನರಸೀಪುರ ಜೆಎಂಎಫ್‌ಸಿ ಕೋರ್ಟ್ ಮಹತ್ವದ ನಿರ್ಧಾರ

    ಹಾಸನ ಅಶ್ಲೀಲ ಕೇಸ್‌ನಲ್ಲಿ ಹೆಚ್.ಡಿ ರೇವಣ್ಣ, ಪ್ರಜ್ವಲ್ ರೇವಣ್ಣಗೂ ಸಂಕಷ್ಟ

    ರೇವಣ್ಣ ವಿರುದ್ಧ ದೂರು ಕೊಟ್ಟಿರುವ ಸಂತ್ರಸ್ತ ಮಹಿಳೆಯಿಂದ 164 ಹೇಳಿಕೆ

ಹಾಸನ ಅಶ್ಲೀಲ ವಿಡಿಯೋ ವೈರಲ್‌ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್‌.ಡಿ ರೇವಣ್ಣಗೆ ಬಂಧನದ ಭೀತಿ ಎದುರಾಗಿದೆ. ಸೆಕ್ಸ್ ಸ್ಕ್ಯಾಂಡಲ್‌ ಕೇಸ್‌ನಲ್ಲಿ ಹೆಚ್.ಡಿ ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಇಬ್ಬರಿಗೂ ಸಂಕಷ್ಟ ಎದುರಾಗಿದೆ.

ಎಸ್‌ಐಟಿ ಅಧಿಕಾರಿಗಳು ಹೊಳೆನರಸೀಪುರ ಠಾಣೆಯಲ್ಲಿ ದಾಖಲಾದ FIRಗೆ ಸೆಕ್ಷನ್‌ 376 ಸೇರಿಸಲು ಮುಂದಾಗಿದ್ದಾರೆ. ವೈರಲ್‌ ಆಗಿರುವ ವಿಡಿಯೋದಲ್ಲಿರುವ ಸಂತ್ರಸ್ತ ಮಹಿಳೆ ಇಂದು ಮ್ಯಾಜಿಸ್ಟ್ರೇಟ್ ಮುಂದೆ 164 ಹೇಳಿಕೆ ನೀಡಿದ್ದಾರೆ. ದೂರು ಕೊಟ್ಟ ಮೇಲೆ ಪ್ರಕರಣದ ವಿಕ್ಟೀಮ್ ಆಗಿರುವ ಸಂತ್ರಸ್ತೆ ಸ್ವಯಂ ಪ್ರೇರಿತವಾಗಿ 164 ಹೇಳಿಕೆ ನೀಡಬೇಕಾಗುತ್ತೆ. ಇದು ಪ್ರಕರಣದ ವಿಚಾರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತೆ. ಹೆಚ್‌.ಡಿ ರೇವಣ್ಣ, ಪ್ರಜ್ವಲ್ ರೇವಣ್ಣ ವಿರುದ್ಧ ದೂರು ಕೊಟ್ಟಿರುವ ಸಂತ್ರಸ್ತ ಮಹಿಳೆ ಕೊನೆಗೂ 164 ಹೇಳಿಕೆ ದಾಖಲಿಸಿದ್ದಾರೆ.

ಸಂತ್ರಸ್ತ ಮಹಿಳೆ ನೀಡಿರುವ 164 ಹೇಳಿಕೆ ಆಧಾರದಲ್ಲಿ FIRನಲ್ಲಿ 376 ಸೇರಿಸಲು ಮನವಿ ಮಾಡಲಾಗಿದೆ. ಹೊಳೆನರಸೀಪುರ ಜೆಎಂಎಫ್‌ಸಿಗೆ ಸಾಕ್ಷಿ ನೀಡಿ ಮನವಿ ಮಾಡಲಾಗಿದೆ. ಈ ಮೂಲಕ ಹಾಸನ ಅಶ್ಲೀಲ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೂ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ಪೆನ್‌ಡ್ರೈವ್‌ ಕೇಸ್‌ಗೆ ಬಿಗ್ ಟ್ವಿಸ್ಟ್.. 164 ಹೇಳಿಕೆ ದಾಖಲಿಸಿದ ಸಂತ್ರಸ್ತೆ; ಪ್ರಜ್ವಲ್‌ ರೇವಣ್ಣಗೆ ಈಗ ಸಂಕಷ್ಟ 

ನಾಳೆ ರೇವಣ್ಣಗೆ ಬಂಧನದ ಭೀತಿ?
ನಾಳೆ ಹೊಳೆನರಸೀಪುರ ಜೆಎಂಎಫ್‌ಸಿ ಕೋರ್ಟ್ & ಬೆಂಗಳೂರು ಜನಪ್ರತಿನಿಧಿ‌ ನ್ಯಾಯಾಲಯ ನೀಡುವ ಆದೇಶದ ಮೇಲೆ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಭವಿಷ್ಯ ನಿಂತಿದೆ. ನಾಳೆ ನಿರೀಕ್ಷಣಾ ಜಾಮೀನು ಸಿಗದಿದ್ರೆ ಹೆಚ್‌.ಡಿ ರೇವಣ್ಣ ಅವರಿಗೆ ಬಂಧನದ ಭೀತಿ ಇದೆ.

ನಾಳೆ ಹೊಳೆನರಸೀಪುರ ಜೆಎಂಎಫ್‌ಸಿ ಕೋರ್ಟ್ 376 ಸೇರಿಸಲು ಅನುಮತಿ ನೀಡಿದ್ರೆ ಬೇಲ್ ಸಿಗೋದು ಬಹುತೇಕ ಕಷ್ಟ. ಯಾಕೆಂದ್ರೆ ಸೆಕ್ಷನ್ 376 ನಾನ್ ಬೇಲೇಬಲ್ ಸೆಕ್ಷನ್ ಆಗಿದೆ. ಈ‌ ಮೂಲಕ ನಾಳೆ ರೇವಣ್ಣ ಅವರಿಗೆ ಜಾಮೀನು ಸಿಗುತ್ತಾ ಅನ್ನೋದು ಕುತೂಹಲ ಕೆರಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: H.D ರೇವಣ್ಣ ಮೇಲೆ ಬಿತ್ತು ನಾನ್‌ ಬೇಲೆಬಲ್ ಸೆಕ್ಷನ್; ನಾಳೆಯೇ ಬಂಧನ ಭೀತಿ

https://newsfirstlive.com/wp-content/uploads/2023/09/HD-Revanna-1.jpg

Load More