/newsfirstlive-kannada/media/post_attachments/wp-content/uploads/2025/04/shivanna5.jpg)
ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಸುಖಾ ಸುಮ್ಮನೆ ಎನರ್ಜಿ ಕಿಂಗ್ ಅಂತ ಹೆಸರು ಕೊಟ್ಟಿಲ್ಲ. ಪವರ್ ಅನ್ನೋದಕ್ಕೆ ನಿಜವಾದ ಎಕ್ಸಾಂಪಲ್ ಕರುನಾಡ ಚಕ್ರವರ್ತಿ. ಎಂತಹದ್ದೇ ಕಷ್ಟ ಬಂದ್ರು ಪುಟಿದೇಳುವ ತಾಕತ್ತಿದೆ ಅನ್ನೋದನ್ನು ಮತ್ತೇ ಮತ್ತೇ ಪ್ರೂವ್ ಮಾಡಿದ್ದಾರೆ ಶಿವಣ್ಣ.
ಸಣ್ಣ ಕೆಮ್ಮು ಬಂದ್ರೆನೇ ಬಳಲಿ ಬೆಂಡಾಗಿ ಹೋಗ್ತೀವಿ. ಅಂತಹದರಲ್ಲಿ ಕ್ಯಾನ್ಸರ್ನ ಜಯಿಸಿ, ಕೆಲವೇ ಕೆಲವು ದಿನಗಳಲ್ಲಿ ಕಮ್ಬ್ಯಾಕ್ ಮಾಡಿರೋದು ನಿಜಕ್ಕೂ ಸ್ಫೂರ್ತಿದಾಯಕ. ಸದ್ಯ ಸರಿಗಮಪ ವೇದಿಕೆಗೆ ಪವರ್ ಪ್ಯಾಕ್ಡ್ ಎಂಟ್ರಿ ಕೊಟ್ಟಿದ್ದಾರೆ.
ಹೌದು, ಡಿಕೆಡಿ ವೇದಿಕೆಯಿಂದ ತುಂಬಿದ ಕಣ್ಣುಗಳಲ್ಲಿ ಶಿವಣ್ಣನ ಬಿಳ್ಕೋಡಲಾಗಿತ್ತು. ಚಿಕಿತ್ಸೆಗೆ ತೆರಳುವಾಗ ಎಲ್ಲರ ಹೃದಯ ಭಾರವಾಗಿತ್ತು. ಇಡೀ ರಾಜ್ಯ ಅದೇ ನಗು, ಅದೇ ಎನಿರ್ಜಿ ಜೊತೆಗೆ ಶಿವಣ್ಣ ಮರಳಿ ಬರಲಿ ಎಂದು ಹಾರೈಸಿದ್ರು. ಕೋಟ್ಯಾಂತರ ಅಭಿಮಾನಿಗಳ ಹಾರೈಕೆ ಫಲ ಕೊಟ್ಟಿದೆ. ಇದೀಗ ಮತ್ತೆ ಧೂಳ್ ಎಬ್ಬಿಸೋಕೆ ಮರಳಿದ್ದಾರೆ ಎನರ್ಜಿ ಕಿಂಗ್.
ಈ ವಾರ ಸರಿಗಮಪ ವೇದಿಕೆಯಲ್ಲಿ ಶಿವಣ್ಣನ ಸಂಭ್ರಮಿಸಲಾಗ್ತಿದೆ. ಇಷ್ಟು ದಿನ ಶಿವಣ್ಣನ ಡ್ಯಾನ್ಸ್ ಮಿಸ್ ಮಾಡಿಕೊಳ್ಳುತ್ತಿದ್ದ ವೇದಿಕೆ, ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಹಾಡಿ, ಕುಣಿದು ನಕ್ಕು ನಲಿಸಿರೋ ಶಿವರಾಜೋತ್ಸವವನ್ನ ನೋಡದನ್ನ ಮಿಸ್ ಮಾಡಿಕೊಳ್ಳಬೇಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ