ಕ್ಯಾಪ್ಟನ್ ರೋಹಿತ್ ಶರ್ಮಾಗೆ Hats off ಎಂದ ಕಾಂಗ್ರೆಸ್ ನಾಯಕಿ.. ಇಂದು ಹೇಗೆಲ್ಲ ಬಣ್ಣಿಸಿದರು..?

author-image
Ganesh
Updated On
ಕ್ಯಾಪ್ಟನ್ ರೋಹಿತ್ ಶರ್ಮಾಗೆ Hats off ಎಂದ ಕಾಂಗ್ರೆಸ್ ನಾಯಕಿ.. ಇಂದು ಹೇಗೆಲ್ಲ ಬಣ್ಣಿಸಿದರು..?
Advertisment
  • ಡಾ.ಶಮಾ ಮೊಹ್ಮದ್ ಅಂದು ಭಾರೀ ಟೀಕೆಗೆ ಗುರಿಯಾಗಿದ್ದರು
  • ಈ ಹಿಂದೆ ರೋಹಿತ್ ಶರ್ಮಾ ಬಗ್ಗೆ ಏನ್ ಹೇಳಿದ್ದರು ಗೊತ್ತಾ?
  • ಚಾಂಪಿಯನ್ಸ್​ ಟ್ರೋಫಿ ಗೆದ್ದ ಬೆನ್ನಲ್ಲೇ ಹಾಡಿ ಹೊಗಳಿದ ಶಮಾ

ಕೋಟ್ಯಾಂತರ ಭಾರತೀಯರ ಕನಸು ಮತ್ತೊಮ್ಮೆ ನನಸಾಗಿದೆ.. ತೃತೀಯ ಬಾರಿಗೆ ಚಾಂಪಿಯನ್ಸ್​ ಟ್ರೋಫಿ ಗೆದ್ದು 140 ಕೋಟಿ ಭಾರತೀಯರ ಕನಸನ್ನು ಸಾಕಾರಗೊಳಿಸಿದೆ. ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ನ್ನು ಹೆಡೆಮುರಿಕಟ್ಟಿ ಭಾರತ ತಂಡ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ.

ಬೆನ್ನಲ್ಲೇ ರಾಷ್ಟ್ರಿಯ ಕಾಂಗ್ರೆಸ್​ ವಕ್ತಾರೆ ಡಾ.ಶಮಾ ಮೊಹ್ಮದ್ ಅವರು ಕ್ಯಾಪ್ಟನ್ ರೋಹಿತ್ ಶರ್ಮಾಗೆ ಹ್ಯಾಟ್ಸ್​ಅಪ್ ಹೇಳಿದ್ದಾರೆ. ಇತ್ತೀಚೆಗೆ ಶಾಮಾ, ರೋಹಿತ್ ಶರ್ಮಾರನ್ನು ದಢೂತಿ ಎಂದು ಕರೆದು ಸುದ್ದಿಯಾಗಿದ್ದರು. ಟೀಂ ಇಂಡಿಯಾ ಚಾಂಪಿಯನ್ಸ್​ ಟ್ರೋಫಿಗೆ ಮುತ್ತಿಡುತ್ತಿದ್ದಂತೆಯೇ, ಟ್ವೀಟ್ ಮಾಡಿರುವ ಅವರು.. ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತ ಗೆಲುವು ಸಾಧಿಸಿದ ಭಾರತ ತಂಡಕ್ಕೆ ಅಭಿನಂದನೆಗಳು. ಕ್ಯಾಪ್ಟನ್ ರೋಹಿತ್ ಶರ್ಮಾಗೆ ಹ್ಯಾಟ್ಸ್​ ಆಫ್. 76 ರನ್​​ಗಳ ಭರ್ಜರಿ ಕೊಡುಗೆ ಮೂಲಕ ತಂಡದ ಗೆಲುವಿನ ರೂವಾರಿಯಾದ್ರಿ. ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್.ರಾಹುಲ್ ನಿರ್ಣಾಯಕ ಆಟವನ್ನಾಡಿ ಗೆಲುವಿನತ್ತ ಕೊಂಡೊಯ್ದರು ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ರೋಹಿತ್ ಶರ್ಮಾ ವಿರುದ್ಧ ಕಾಂಗ್ರೆಸ್ ನಾಯಕಿ ಬಾಡಿ ಶೇಮಿಂಗ್ ಕಮೆಂಟ್; ಕ್ಯಾಪ್ಟನ್ ಬೆನ್ನಿಗೆ ನಿಂತ BCCIpublive-image

ಈ ಹಿಂದೆ ಏನ್ ಹೇಳಿದ್ದರು..?

ಶಮಾ ಮೊಹ್ಮದ್ ಅವರು, ರೋಹಿತ್ ಶರ್ಮಾ ಅವರ ಫ್ಯಾಟ್ ಬಗ್ಗೆ ಟ್ವೀಟ್ ಮಾಡಿದ್ದರು. ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ದಪ್ಪಗಿರುವ ಆಟಗಾರ. ಶರ್ಮಾ ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು. ಭಾರತದಲ್ಲಿ ಇದುವರೆಗಿನ ಆಕರ್ಷಕವಲ್ಲದ ಕ್ಯಾಪ್ಟನ್ ಅಂದ್ರೆ ಅದು ರೋಹಿತ್ ಶರ್ಮಾ ಎಂದಿದ್ದರು. ಅವರ ಹೇಳಿಕೆ ಭಾರೀ ಟೀಕೆಗೆ ಕಾರಣವಾಗಿತ್ತು.

ಇದನ್ನೂ ಓದಿ: 25 ವರ್ಷಗಳ ಹಿಂದಿನ ಸೇಡು ತೀರಿಸಿಕೊಂಡ ಭಾರತ.. ಹೃದಯಗೆದ್ದ ನಮ್ಮ ಕನ್ನಡಿಗ KL ರಾಹುಲ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment