/newsfirstlive-kannada/media/post_attachments/wp-content/uploads/2024/11/1-Rupee-Note.jpg)
ನಿಮಗೆ ಹಳೆ ಕರೆನ್ಸಿ ನೋಟು ಹಾಗೂ ಕ್ವಾಯಿನ್​ಗಳನ್ನು ಸಂಗ್ರಹಿಸುವ ರೂಢಿ ಇದೆಯಾ. ನಿಮ್ಮ ಬಳಿ ಸಾಕಷ್ಟು ಹಳೆಯ ಒಂದು ರೂಪಾಯಿ ಎರಡು ರೂಪಾಯಿಯ ಕರೆನ್ಸಿ ನೋಟುಗಳಿವೆಯಾ? ಹಾಗಿದ್ದರೆ ನಿಮ್ಮ ಲಕ್​ ಚೇಂಜ್ ಆಗಹುದು. ಲಕ್ಷ ಲಕ್ಷ ರೂಪಾಯಿ ನಿಮ್ಮದಾಗಹುದು. ಅರೇ ಒಂದು ರೂಪಾಯಿ ಎರಡು ರೂಪಾಯಿ ನೋಟ್​ಗಳಿಂದ ಈದು ಹೇಗೆ ಸಾಧ್ಯ ಅಂತ ನೀವು ಅಚ್ಚರಿಪಡಬಹುದು ಅದು ಸಾಧ್ಯವಿದೆ. ನಿಮ್ಮ ಹಳೆಯ ಒಂದು ರೂಪಾಯಿ ನೋಟ್​ನಿಂದ ನೀವು 7 ಲಕ್ಷ ರೂಪಾಯಿ ಎಣಿಸಬಹುದು. ಆನ್​ಲೈನ್​ನಲ್ಲಿ ನಿಮ್ಮ ನೋಟನ್ನು ಹರಾಜು ಹಾಕುವ ಮೂಲಕ ನೀವು ಲಕ್ಷ ಲಕ್ಷ ಗಳಿಸಬಹುದು.
ಆನ್​ಲೈನ್ ವೇದಿಕೆಗಳಾದ ಕ್ವಾಯಿನ್ ಬಜಾರ್​ ಹಳೆಯ ನೋಟುಗಳನ್ನು ಸಂಗ್ರಹಿಸುತ್ತದೆ. ಕೆಲವು ಸಮಯ ಈ ಒಂದು ರೂಪಾಯಿ ಹಾಗೂ ಎರಡು ರೂಪಾಯಿ ನೋಟುಗಳನ್ನು ಕೂಡ ದೊಡ್ಡ ಮೊತ್ತಕ್ಕೆ ಖರೀದಿ ಮಾಡುತ್ತವೆ. ಇದು ಹಳೆಯ ಒಂದು ರೂಪಾಯಿ ಎರಡು ರೂಪಾಯಿ ನೋಟುಗಳನ್ನು ಸಂಗ್ರಹಿಸಿಟ್ಟುಕೊಂಡವರಿಗೆ ದೊಡ್ಡ ಲಾಭ ತಂದುಕೊಡಲಿದೆ. ಉದಾಹರಣೆ ಒಂದು ರೂಪಾಯಿ ಹಳೆಯ ಕರೆನ್ಸಿ ನೋಟು ನಿಮಗೆ ಸುಮಾರು 7 ಲಕ್ಷ ರೂಪಾಯಿವರೆಗೆ ಆನ್​ಲೈನ್ ಹರಾಜಿನಲ್ಲಿ ಲಾಭ ತಂದುಕೊಡಬಹುದು.
/newsfirstlive-kannada/media/post_attachments/wp-content/uploads/2024/11/1-Rupee-Note-1.jpg)
ನಿಮಗೆ ಈಗಲೂ ಆಶ್ಚರ್ಯವಾಗಬಹುದು. ಆನ್​ಲೈನ್ ಹರಾಜಿನಲ್ಲಿ 1 ರೂಪಾಯಿ ಹಾಗೂ 2 ರೂಪಾಯಿ ಹಳೆಯ ಕರೆನ್ಸಿ ನೋಟುಗಳಿಗೆ ದೊಡ್ಡ ಡಿಮ್ಯಾಂಡ್ ಇದೆ. ಇದಕ್ಕೆ ಕಾರಣ, ಐತಿಹಾಸಿಕ ಕಾರಣ. ಭಾರತ ಸರ್ಕಾರ 29 ವರ್ಷಗಳ ಹಿಂದೆ 1 ರೂಪಾಯಿ ಹಾಗೂ 2 ರೂಪಾಯಿ ನೋಟುಗಳ ಮುದ್ರಣವನ್ನು ಬಂದ್ ಮಾಡಿತ್ತು. 2015ರಲ್ಲಿ ನರೇಂದ್ರ ಮೋದಿ ಸರ್ಕಾರ ಮರಳಿ 1 ಹಾಗೂ 2 ರೂಪಾಯಿ ನೋಟುಗಳನ್ನು ಮರು ಪರಿಚಯಿಸಿದರೂ ಕೂಡ ಸ್ವಾತಂತ್ರ್ಯಕ್ಕೂ ಮುನ್ನ ಇದ್ದ 1 ರೂಪಾಯಿ ಹಾಗೂ ಎರಡು ರೂಪಾಯಿ ನೋಟುಗಳಿಗೆ ದೊಡ್ಡ ಡಿಮ್ಯಾಂಡ್ ಇದೆ .
ಇದನ್ನೂ ಓದಿ: ಒಂದೇ ಸಾಲಿನಲ್ಲಿ ರಜೆ ಕೇಳಿದ ಇ-ಮೇಲ್ ನೋಡಿ ಬಾಸ್‌ಗೆ ಬಿಗ್ ಶಾಕ್; ಫೋಟೋ ಫುಲ್ ವೈರಲ್!
80 ವರ್ಷಗಳ ಹಿಂದೆ ಅಂದ್ರೆ 1935ರಲ್ಲಿ ಅಂದಿನ ಗವರ್ನರ್ ಜೆಕೆ ಕೆಲ್ಲಿ ಸಹಿ ಇರುವ ಹಳೆಯ ನೋಟುಗಳು ಈಗ ಸಿಗುವುದು ಅಪರೂಪ ಅಂತಹ ನೋಟುಗಳು ನಿಮ್ಮ ಬಳಿ ಇದ್ದಲ್ಲಿ ನಿಮಗೆ 7 ಲಕ್ಷ ರೂಪಾಯಿಯನ್ನು ನೀಡಿ ಆ ನೋಟನ್ನು ಸಂಗ್ರಹಿಸಿಕೊಳ್ಳುತ್ತವೇ ಆನ್​ಲೈನ್​ನಲ್ಲಿರುವ ವೇದಿಕೆಗಳು. ಹೀಗೆ ನಿಮ್ಮ ಬಳಿ ಏನಾದರೂ ಹಳೆಯ 1 ಹಾಗೂ 2 ರೂಪಾಯಿ ನೋಟುಗಳಿದ್ದರೆ ಅವುಗಳನ್ನು ನೀವು ಕ್ವಾಯಿನ್ ಬಜಾರ್ ಹಾಗೂ ಕ್ವಿಕರ್​ ವೇದಿಕೆಗಳಲ್ಲಿ ಸರಳವಾಗಿ ಮಾರಬಹುದು. ಆದರೆ ಒಂದು ನೆನಪಿರಲಿ ಭಾರತೀಯ ರಿಸರ್ವ್​ ಬ್ಯಾಂಕ್ ಈ ರೀತಿಯ ನೋಟುಗಳ ಮಾರಾಟಕ್ಕೆ ಹಾಗೂ ಖರೀದಿಗೆ ಯಾವುದೇ ರೀತಿಯ ಅನುಮತಿಯನ್ನು ನೀಡಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us