/newsfirstlive-kannada/media/post_attachments/wp-content/uploads/2024/12/VIRAT-ROHIT.jpg)
ಭಾರತ ತಂಡದ ಟೆಸ್ಟ್ ಕ್ರಿಕೆಟ್ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಇಡೀ ಪಂದ್ಯವನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡು ದಡ ಮುಟ್ಟಿಸಿದ ಆಟಗಳು ನೂರಾರು ಇವೆ. ದಶಕಗಳಿಗಿಂತ ಹೆಚ್ಚು ವರ್ಷಗಳ ಕಾಲ ಈ ಜೋಡಿ ಅದೇ ರೀತಿಯಾಗಿ ಆಡಿದೆ. ಕಟ್ಟ ಕಡೆಯ ವಿಕೆಟ್ ಇದ್ದಾಗಲೂ ಆ ಬದಿ ರೋಹಿತ್ ಇಲ್ಲವೇ ವಿರಾಟ್ ಇದ್ರೆ, ಇವರಿದ್ದಾರೆ ಬಿಡು ಭಯ ಇಲ್ಲ ಎನ್ನುವ ಮಾತುಗಳು ಕ್ರಿಕೆಟ್ ಅಭಿಮಾನಿಗಳ ಬಾಯಲ್ಲಿ ಬರುತ್ತಿದ್ದವು. ಆದರೆ ಕ್ರಿಕೆಟ್ ಜಗತ್ತಿನ ಈ ಎರಡು ಅದ್ಭುತಗಳು ದೀರ್ಘಕಾಲಿಕ ಕ್ರಿಕೆಟ್ನಲ್ಲಿ ಕೊನೆಯ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿದ್ದಾರಾ ಅನ್ನೋ ಅನುಮಾನಗಳು ಕಾಡುತ್ತಿವೆ.
ಇದನ್ನೂ ಓದಿ: IND vs AUS ರೋಚಕ ಘಟ್ಟ ತಲುಪಿದ ಟೆಸ್ಟ್; ಗೆಲುವಿನ ಭರವಸೆ ಮೂಡಿಸಿದ ಯಶಸ್ವಿ ಜೈಸ್ವಾಲ್..!
ಸೋಮವಾರ ದಿನವೇ ಈ ವಿಶ್ವ ದಿಗ್ಗಜರ ಆಟವನ್ನು ಕಂಡು ದೇಶದ ಕ್ರಿಕೆಟ್ ಅಭಿಮಾನಿಗಳು ನಿಜಕ್ಕೂ ನಿರಾಶರಾಗಿದ್ದಾರೆ. ಅದು ಜಗತ್ತಿನ ಸರ್ವಶ್ರೇಷ್ಠ ಕ್ರೀಡಾಂಗಣದಲ್ಲಿ ಈ ಕ್ರಿಕೆಟ್ ದ್ರುವತಾರೆಗಳು ತೋರಿಸಿದ ನೀರಸ ಪ್ರದರ್ಶನ ನೋಡಿ ನಿಜಕ್ಕೂ ಎಲ್ಲರಿಗೂ ಬೇಸರವಾಗಿದೆ.
ಕೆಲವು ದಿನಗಳ ಹಿಂದೆ ಬ್ರಿಸ್ಬೇನ್ ಅಂಗಳದಲ್ಲಿ ಭಾರತದ ಸ್ಪಿನ್ ಮಾಂತ್ರಿಕ ನಿವೃತ್ತಿ ಘೋಷಿಸಿದದು ಎಲ್ಲರಿಗೂ ತಿಳಿದೆ ಇದೆ. ಒಂದು ವೇಳೆ ಈ ಟೆಸ್ಟ್ ಸೋತು ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆಯದೇ ಹೋದಲ್ಲಿ, ರೋಹಿತ್ ಹಾಗೂ ವಿರಾಟ್ ಕೊಹ್ಲಿ ವೃತ್ತಿ ಜೀವನದ ಕಟ್ಟ ಕಡೆಯ ಟೆಸ್ಟ್ ಟೂರ್ ಆಸ್ಟ್ರೇಲಿಯಾವೇ ಆಗಲಿದೆ ಎನ್ನುವ ಗುಸುಗುಸು ಬಿಸಿಸಿಐ ಅಂಗಳದಲ್ಲಿ ಕೇಳಿ ಬರುತ್ತಿದೆ
ಈ ವರ್ಷದ ಇಬ್ಬರು ಅನುಭವಿ ಬ್ಯಾಟ್ಸಮನ್ಗಳು ಗಳಿಸಿದ ರನ್ಗಳ ಲೆಕ್ಕ ಹಾಕಿದ್ರೆ, ವಿಶ್ವ ದಿಗ್ಗಜ ಬೌಲರ್ಗಳನ್ನು ಬೆಂಡೆತ್ತಿ ಸೈ ಎನಿಸಿಕೊಳ್ಳುತ್ತಿದ್ದ ಭಾರತೀಯ ಹೆಮ್ಮೆಯ ಬ್ಯಾಟ್ಸಮನ್ಗಳು ಇವರೇನಾ ಎನ್ನುವ ಅನುಮಾನ ಸರಳವಾಗಿ ಮೂಡುತ್ತದೆ.
2024 ವರ್ಷದಲ್ಲಿ ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಲ್ಲಿ ದಾಖಲಿಸಿದ ರನ್ ಕೇವಲ 164 ಅಂದ್ರೆ ಒಟ್ಟು ಸರಾಸರಿ 11 ರಷ್ಟಿದೆ. ಬಾಕ್ಸಿಂಗ್ ಡೇನ ಟೆಸ್ಟ್ ಪಂದ್ಯದಲ್ಲಿಯೂ ಸಹ ರೋಹಿತ್ ನೀರಸ ಪ್ರದರ್ಶನ ಮುಂದುವರಿದೆ. ಎರಡನೇ ಇನ್ಸಿಂಗ್ಸ್ನಲ್ಲಿ ರೋಹಿತ್ ಎದುರಿಸಿದ್ದು 40 ಎಸೆತಗಳಲ್ಲಿ ಗಳಿಸಿದ್ದು ಜಸ್ಟ್ 9 ರನ್ಗಳು ಮಾತ್ರ 5 ಇನ್ನಿಂಗ್ಸ್ನಲ್ಲಿ ರೋಹತ್ ಬ್ಯಾಟ್ನಿಂದ ಹರಿದು ಬಂದಿದ್ದು ಕೇವಲ ಅಂದ್ರೆ ಕೇವಲ 31 ರನ್ಗಳು.
ಇನ್ನು ಇತ್ತ ವಿರಾಟ್ ಕೊಹ್ಲಿ ಕೂಡ ಪರ್ತ್ನಲ್ಲಿ ಸೆಂಚುರಿ ಗಳಿಸಿದ್ದು ಬಿಟ್ಟರೆ ಉಳಿದ ಎಲ್ಲಾ ಇನ್ಸಿಂಗ್ಸ್ನಲ್ಲೂ ಕಳಪೆ ಪ್ರದರ್ಶನ ನೀಡಿದ್ದಾರೆ. ನಾಲ್ಕನೇ ಟೆಸ್ಟ್ನ ಕೊನೆಯ ದಿನವಾದ ಇಂದು 29 ಎಸೆತಗಳನ್ನು ಎದುರಿಸಿ ಗಳಿಸಿದ್ದು ಕೇವಲ 5 ರನ್ಗಳು. ಕಳೆದ 7 ಇನ್ಸಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ಗಳಿಸಿದ್ದು ಕೇವಲ 167 ರನ್. ಇದರಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಈ 167 ರನ್ಗಳಲ್ಲಿ ಒಂದು ಶತಕವೂ ಕೂಡ ದಾಖಲಾಗಿದೆ. ಹೀಗೆ ಉಭಯ ಆಟಗಾರರ ಇತ್ತೀಚಿನ ಆಟವನ್ನು ನೋಡಿದರಲ್ಲಿ ಅವರಲ್ಲಿರುವ ಆಟ ಮುಗಿದು ಹೋಗಿದೆ ಎಂದು ಸ್ಪಷ್ಟವಾಗಿ ಕಾಣುತ್ತಿದೆ.
ಇದನ್ನೂ ಓದಿ:ಗೆಲ್ಲೋ ಅವಕಾಶ ಇದ್ರೂ ಜವಾಬ್ದಾರಿ ಮರೆತ ಸೀನಿಯರ್ಸ್.. ಕೊಹ್ಲಿ, ರೋಹಿತ್, ರಾಹುಲ್ ವಿರುದ್ಧ ಆಕ್ರೋಶ..!
ಹಲವು ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಬಿಸಿಸಿಐ ಆಟಗಾರರ ಆಯ್ಕೆ ಸಮಿತಿಯ ಚೇರ್ಮೆನ್ ಅಜಿತ್ ಅಗರ್ಕರ್, ಇಬ್ಬರು ಆಟಗಾರರನ್ನು ಕರೆದು ಮಾತನಾಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಒಂದು ವೇಳೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಭಾರತ ತಂಡ ಆಯ್ಕೆಯಾಗದೆ ಅನರ್ಹವಾಗಿ ಉಳಿದಲ್ಲಿ ರೋಹಿತ್ ಶರ್ಮಾ ಹೊಣೆಗಾರಿಕೆಯನ್ನು ಹೊತ್ತು ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂಬ ಸುದ್ದಿಯೂ ಕೂಡ ಹರಿದಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ