ನೀವು ಕುಡಿದ ಅತ್ಯಂತ ದುಬಾರಿ ಟೀ ಯಾವುದು? 1 ಲಕ್ಷ ರೂಪಾಯಿ ‘ಗೋಲ್ಡ್‌ ಚಹಾ’ ವಿಶೇಷತೆ ಏನು ಗೊತ್ತಾ?

author-image
Gopal Kulkarni
Updated On
ನೀವು ಕುಡಿದ ಅತ್ಯಂತ ದುಬಾರಿ ಟೀ ಯಾವುದು? 1 ಲಕ್ಷ ರೂಪಾಯಿ ‘ಗೋಲ್ಡ್‌ ಚಹಾ’ ವಿಶೇಷತೆ ಏನು ಗೊತ್ತಾ?
Advertisment
  • ದುಬೈನಲ್ಲಿ ನಮ್ಮ, ನಿಮ್ಮ ಜೇಬಿಗೆ ನಿಲುಕದ ಚಹಾ ಒಂದಿದೆ ಗೊತ್ತಾ?
  • ಇದರ ಬೆಲೆ ಕೇಳಿದವರು ಚಹಾಗಾಗಿ ಇಎಂಐ ಕಟ್ಟಲಾರೆ ಎನ್ನುತ್ತಿದ್ದಾರೆ!
  • ಭಾರತೀಯ ಮೂಲದ ಉದ್ಯಮಿಯಿಂದ ಸಿದ್ಧಗೊಂಡಿದೆ ವಿಶೇಷ ಟೀ

ಚಹಾ ಅಥವಾ ಟೀ.. ಇದು ಭಾರತೀಯರ ಅತ್ಯಂತ ಪ್ರೀತಿಯ ಪೇಯ. ಭಾರತೀಯರ ಬದುಕಿನ ಒಂದು ಭಾಗವಾಗಿಯೇ ಈ ಚಹಾ ಗುರುತಿಸಿಕೊಂಡಿದೆ. ಆದ್ರೆ ಒಂದು ಚಹಾಗೆ ನೀವು ಅಬ್ಬಬ್ಬಾ ಅಂದ್ರೆ ಎಷ್ಟು ಕೊಡ್ತೀರಿ? 10 ರೂಪಾಯಿ, 20 ರೂಪಾಯಿ ಇನ್ನೂ ದುಬಾರಿ ಅಂದ್ರೆ 500 ರೂಪಾಯಿ ಅದು ಫೈವ್ ಸ್ಟಾರ್ ಹೋಟೆಲ್​ನಲ್ಲಿ. ಆದ್ರೆ ಇತ್ತೀಚೆಗೆ ದುಬೈನಲ್ಲಿ ಭಾರತೀಯ ಮೂಲದವರೊಬ್ಬರು ಇಂಡಿಯನ್ ಕೆಫೆ ಶುರು ಮಾಡಿದ್ದಾರೆ. ಅವರು ಅಲ್ಲಿ ನೀಡುವ ಒಂದು ವಿಶೇಷ ಚಹಾದ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿ ಅಂದ್ರೆ ನೀವು ನಂಬಲೇಬೇಕು.

ಗೋಲ್ಡ್ ಕರಕ್ ಟೀ ಎಂಬ ಕುತೂಹಲ ಹಾಗೂ ವಿವಾದ
ದುಬೈ ಮೂಲದ ಕೆಫೆ ಇದು. ಇದನ್ನು ಭಾರತೀಯ ಮೂಲದ ಉದ್ಯಮಿಯಾದ ಸುಚೇತಾ ಶರ್ಮಾ ಎಂಬುವವರು ನಡೆಸುತ್ತಾರೆ. ಅವರು ತಮ್ಮ ಕೆಫೆಯಲ್ಲಿ ನೀಡುತ್ತಿರುವ 1 ಲಕ್ಷ ರೂಪಾಯಿಯ ಬೆಲಯ ಚಹಾ ಈಗ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಆ ಚಹಾದ ಹೆಸರು ಗೋಲ್ಡ್ ಕರಕ್ ಚಹಾ ಅಂತ ಅದು ಯುನೈಟೆಡ್ ಅರಬ್ ಎಮಿರೆಟ್ಸ್ ಕರೆನ್ಸಿಯಲ್ಲಿ 5000 ದಿರ್ಹಾಮ್​ ಅಂದ್ರೆ ಭಾರತದ ಕರೆನ್ಸಿಯಲ್ಲಿ ಅದರ ಬೆಲೆ ಬರೋಬ್ಬರಿ 1.14 ಲಕ್ಷ ರೂಪಾಯಿ.

publive-image

ಡಿಐಎಫ್​ಸಿಎಸ್​ ಎಮಿರೆಟ್ಸ್​ ಫೈನಾನ್ಸಿಯಲ್ ಟವರ್​ನಲ್ಲಿ ಹೊಸದಾಗಿ ಶುರುವಾಗಿರುವ ಈ ಕೆಫೆಯಲ್ಲಿ ಈ ವಿಶೇಷ ಟೀಯನ್ನು ನೀಡಲಾಗುತ್ತದೆ. ಈ ಟೀಯನ್ನು ಬೆಳ್ಳಿಯ ಕಪ್​ನಲ್ಲಿ 24 ಕ್ಯಾರೆಟ್​ ಬಂಗಾರದ ಎಲೆಯೊಂದಿಗೆ ಅಲಂಕಾರ ಮಾಡಿ ನೀಡಲಾಗುತ್ತದೆ. ಇದು ಈಗ ವಿಶ್ವದಲ್ಲಿ ಕುತೂಹಲಕ್ಕೆ ಸೃಷ್ಟಿಯಾದಂತೆ ವಿವಾದಕ್ಕೂ ಕೂಡ ಕಾರಣವಾಗಿದೆ.

ಸ್ಥಳೀಯ ಖಲೀಜ ಟೈಮ್ಸ್ ವರದಿ ಮಾಡಿರುವ ಪ್ರಕಾರ ಈ ಒಂದು ಕೆಫೆ ಒಟ್ಟು ಎರಡು ಮೇನುಗಳನ್ನು ಒಳಗೊಂಡಿದೆ. ಒಂದು ಇಂಡಿಯನ್​ ಸ್ಟ್ರೀಟ್ ಫುಡ್​ ಮತ್ತೊಂದು ಮೇಲ್ವರ್ಗದ ವ್ಯಕ್ತಿಗಳಿಗೆ ಅಂತಲೇ ವೈಭೋಗದ ಫುಡ್​ಗಳು. ಕೆಫೆಗೆ ಭೇಟಿ ನೀಡುವವರು ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಬಗ್ಗೆ ಖಲೀಜ್ ಟೈಮ್ಸ್ ಜೊತೆ ಮಾತನಾಡಿರುವ ಕೆಫೆಯ ಮಾಲೀಕರಾದ ಸುಚೇತಾ ಶರ್ಮಾ. ವೈಭವದ ಬದುಕನ್ನು ಬದುಕುವವರಿಗಾಗಿಯೇ ಒಂದು ವಿಶೇಷ ಪಾನೀಯ ಸಿದ್ಧಗೊಳಿಸುವುದು ನಮ್ಮ ಉದ್ದೇಶವಾಗಿತ್ತು. ಹೀಗಾಗಿಯೇ ಈ ಕರಕ್ ಚಹಾವನ್ನು ಪರಿಚಯಿಸಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಹಿಂದೂಗಳ ಹಕ್ಕಿಗಾಗಿ ಹೋರಾಟ ಮಾಡಿದ್ದೇ ತಪ್ಪಾಯ್ತಾ? ಬಾಂಗ್ಲಾದೇಶದಲ್ಲಿ ಸ್ವಾಮಿ ಚಿನ್ಮೋಯ್​ ಬಂಧನ!

ಈ ಒಂದು ಲಕ್ಷ ರೂಪಾಯಿ ಚಹಾವನ್ನು ನಾವು ಬೆಳ್ಳಿ ಕಪ್​ನಲ್ಲಿ ನೀಡುತ್ತೇವೆ. ಅದನ್ನು ಗಿರಾಕಿಗಳು ಮನೆಗೆ ಕೂಡ ತೆಗೆದುಕೊಂಡು ಹೋಗಬಹುದು. ಇದರೊಂದಿಗೆ ಬಂಗಾರದ ಎಲೆಯಿಂದ ಅದನ್ನು ಅಲಂಕಾರ ಮಾಡಿರುತ್ತೇವೆ ಹೀಗಾಗಿ ಒಂದು ಕಪ್​ನ ಚಹಾದ ಬೆಲೆ ನಮಗೆ 4761 ದಿರ್ಹಾಮ್ ಆಗುತ್ತದೆ (1.9 ಲಕ್ಷ ರೂಪಾಯಿ) ನಾವು ಒಂದು ಟೀಯನ್ನು 5000 ದಿರ್ಹಾಮ್​ಗೆ ಮಾರುತ್ತೇವೆ. ಕೇವಲ ಚಹಾ ಒಂದೇ ಅಲ್ಲ ನಾವು ಚಹಾದ ಜೊತೆ ಗೋಲ್ಡ್​ ರಸ್ಟೆಡ್​ ಕ್ರೊಯಿಸ್ಸಂಟ್, ಗೋಲ್ಡ್ ವಾಟರ್, ಗೋಲ್ಡ್ ಬರ್ಗರ್ ಹಾಗೂ ಗೋಲ್ಡ್ ಐಸ್​ಕ್ರೀಮ್ ಕೂಡ ನೀಡುತ್ತೇವೆ ಎಂದು ಸುಚಿತಾ ಹೇಳಿದ್ದಾರೆ.

ಇದನ್ನೂ ಓದಿ:ರಷ್ಯಾ ಅಧ್ಯಕ್ಷನ ಆಸ್ತಿ ಎಷ್ಟು? ಅಂತಾ ಕೇಳಿದ್ರೆ ಶಾಕ್​​ ಆಗ್ತೀರಾ; ಪುಟಿನ್​​​ ಎಷ್ಟು ಕೋಟಿ ಒಡೆಯ?

ಇತ್ತೀಚೆಗೆ ಫುಡ್ ಬ್ಲಾಗರ್ ಒಬ್ಬರು ಈ ಕೆಫೆಯ ವಿಚಾರವನ್ನು ತಮ್ಮ ವಿಡಿಯೋದಲ್ಲಿ ವಿವರಿಸಿದ್ದರು. ಗೋಲ್ಡ್ ಟೀ ಹಾಗೂ ಕಾಫಿ ಬಗ್ಗೆಯೂ ವಿವರಿಸಿದ್ದರು. ಇದು ಸೋಷಿಯಲ್ ಮೀಡಿಯಾದ ಗಮನವನ್ನು ಸೆಳೆದಿತ್ತು. ಇದರ ಬಗ್ಗೆ ಪರ ವಿರೋಧದ ಪ್ರತಿಕ್ರಿಯೆಗಳು ಕೂಡ ಬಂದಿದ್ದವು. ಇದೊಂದು ಅಪ್ಪಟ ರಾಜತಾಂತ್ರಿಕ ದರೋಡೆ ಎಂದು ಕೆಲವರು ಹೇಳಿದ್ದರೆ. ಇನ್ನು ಕೆಲವರು ನಾನು ನನ್ನ ಜೀವನದಲ್ಲಿ ಚಹಾ ಕುಡಿಯುವುದಕ್ಕಾಗಿಯೇ ಎಂದಿಗೂ ಕೂಡ ಇಎಂಐ ಕಟ್ಟಲಾರೆ ಎಂದು ಹೇಳಿದ್ದಾರೆ. ಈಗಾಗಲೇ ಹೇಳಿದಂತೆ ದುಬೈ ಮೂಲದ ಈ ಒಂದು ಬೊಹೊ ಕೆಫೆ ತನ್ನ ವಿಶೇಷವಾದ ಚಹಾ ಮೂಲಕ ಕುತೂಹಲದೊಂದಿಗೆ ವಿವಾದವನ್ನು ಕೂಡ ಸೃಷ್ಟಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment