/newsfirstlive-kannada/media/post_attachments/wp-content/uploads/2024/10/haveri-Child-Missing.jpg)
ಹಾವೇರಿ: ನಿನ್ನೆಯಿಂದ ಭಾರೀ ಮಳೆ ಸುರಿಯುತ್ತಿದ್ದು, 12 ವರ್ಷದ ಬಾಲಕನೋರ್ವ ಮಳೆ ನೀರಿಗೆ ಚರಂಡಿಯಲ್ಲಿ ಕೊಚ್ಚಿ ಹೋದ ಘಟನೆ ಹಾವೇರಿ ನಗರದ ಎಸ್ಪಿ ಕಚೇರಿ ಮುಂಭಾಗ ನಡೆದಿದೆ.
ವೇದು ಗುಡಗೇರಿ ಕಣ್ಮರೆಯಾದ ಬಾಲಕ. ಶಿವಾಜಿನಗರದ ನಿವಾಸಿ ಎಂದು ತಿಳಿದುಬಂದಿದೆ. ರಭಸವಾಗಿ ಹರಿಯುತ್ತಿದ್ದ ರಾಜಕಾಲುವೆಯ ನೀರಿನಲ್ಲಿ ಈತ ಕೊಚ್ಚಿ ಹೋಗಿದ್ದಾನೆ. ಸದ್ಯ ಕಣ್ಮರೆಯಾದ ಹುಡುಗನಿಗೆ ಹುಡುಕಾಟ ನಡೆದಿದೆ.
ಇದನ್ನೂ ಓದಿ: ಬೈಕ್, ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ.. ಸ್ಥಳದಲ್ಲೇ ಜೀವಬಿಟ್ಟ ನಾಲ್ವರು
ವೇದು ಸ್ನೇಹಿತರೊಂದಿಗೆ ಸೇರಿಕೊಂಡು ಮಳೆ ನೀರಿನಲ್ಲಿ ಆಟವಾಡುತ್ತಿದ್ದನು. ಈ ವೇಳೆ ಚರಂಡಿ ನೀರಿನಲ್ಲಿ ಸಿಲುಕಿ ಕಣ್ಮರೆಯಾಗಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೋಲಿಸ್ ದೌಡಾಯಿಸಿದ್ದಾರೆ.
ಬಾಲಕನಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಬಾಲಕ ಬದುಕಿ ಬರಲಿ ಎಂದು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಪ್ರಾರ್ಥನೆ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us