Advertisment

ಸ್ವಗ್ರಾಮಕ್ಕೆ 13 ಮೃತದೇಹಗಳ ರವಾನೆ, ಮುಗಿಲು ಮುಟ್ಟಿದ ಆಕ್ರಂದನ.. ಸರ್ಕಾರ ನೀಡಿದ ಪರಿಹಾರವೆಷ್ಟು ಗೊತ್ತಾ?

author-image
AS Harshith
Updated On
ಸಂಬಂಧಿಕರ ಹೆಸರಲ್ಲಿ ಟಿಟಿ ಖರೀದಿ.. 13 ಜನರ ಸಾವಿಗೆ ಕಾರಣವಾಯ್ತ ಫಾಸ್ಟ್​ ಡ್ರೈವಿಂಗ್​​?
Advertisment
  • ಹದಿಮೂರು ಮೃತರ ಪೋಸ್ಟ್ ಮಾರ್ಟಮ್ ಮುಕ್ತಾಯ
  • ಶಿವಮೊಗ್ಗ, ಬಿರೂರು, ಹನುಮಂತಾಪುರಕ್ಕೆ ಮೃತದೇಹಗಳ ರವಾನೆ
  • ಹೂಳುವ ಮತ್ತು ಸೂಡುವ ಸಂಪ್ರದಾಯದಂತೆ ಅಂತ್ಯಕ್ರಿಯೆ

ಇಂದು ಬೆಳಗ್ಗಿನ ಜಾವ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನ ಹಳ್ಳಿಯಲ್ಲಿಯಲ್ಲಿ ಲಾರಿಗೆ ಟಿಟಿ ವಾಹನ ಡಿಕ್ಕಿ ಹೊಡೆದಿತ್ತು. 13 ಮಂದಿ ದುರ್ಮರಣ ಹೊಂದಿದ್ದರು. ಇದೀಗ ಬಹುತೇಕ ಹದಿಮೂರು ಮೃತರ ಪೋಸ್ಟ್ ಮಾರ್ಟಮ್ ಮುಕ್ತಾಯಗೊಂಡಿದ್ದು, ವಿವಿಧ ಭಾಗಗಳಿಗೆ ಮೃತದೇಹ ಗಳನ್ನು ರವಾನಿಸಲಾಗುತ್ತಿದೆ. ಅತ್ತ ಸಂಬಂಧಿಕರ ಆಕ್ರಂದನ ಮಾತ್ರ ಮಗುಲುಮುಟ್ಟಿದೆ.

Advertisment

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮೇಹಟ್ಟಿ ಗ್ರಾಮಕ್ಕೆ 9 ಮೃತ ದೇಹಗಳು ರವಾನಿಸಲಾಗಿದೆ. ಬಿರೂರು ಗ್ರಾಮಕ್ಕೆ 3 ಮೃತದೇಹಗಳು ಕಳುಹಿಸಲಾಗಿದೆ. ಹನುಮಂತಾಪುರ ಗ್ರಾಮಕ್ಕೆ 1 ಮೃತದೇಹ ರವಾನಿಸಲಾಗಿದೆ.

ಇದನ್ನೂ ಓದಿ: ಇಂಜಿನಿಯರಿಂಗ್ ಮಾಡುವ ಕನಸು ಹೊತ್ತುಕೊಂಡಿದ್ದ ವಿದ್ಯಾರ್ಥಿನಿ ಡೆಂಘೀ ಜ್ವರಕ್ಕೆ ಬಲಿ

ಸಾವನ್ನಪ್ಪಿರುವ 13 ಜನರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ದೇವರ ದರ್ಶನಕ್ಕೆಂದು ಹೊರಟಿದ್ದರು. ಆದರೆ ನಿಂತಿದ್ದ ಲಾರಿಗೆ ಟಿಟಿ ವಾಹನ ಗುದ್ದಿ 13 ಜನರು ಸಾವನ್ನಪ್ಪಿದ್ದಾರೆ. ಇನ್ನು ಮೃತರು ಮರಾಠ ಸಂಪ್ರದಾಯ ಸೇರಿದವರಾಗಿದ್ದು, ಅದರಂತೆಯೇ ಅಂತ್ಯಕ್ರಿಯೆ ನೆರವೇರಲಿದೆ.

Advertisment

ಇದನ್ನೂ ಓದಿ: ಹಾವೇರಿ ಭೀಕರ ಅಪಘಾತದಲ್ಲಿ ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕಿ ಸಾವು.. ಅಂಧ ಬಾಲಕಿ ಕನಸೇನಾಗಿತ್ತು ಗೊತ್ತಾ?

ಮದುವೆಯಾಗಿದ್ದರೆ ಸೂಡುವ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ. ಮದುವೆಯಾಗದಿದ್ದರೆ ಹೂಳುವ ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರ ನಡೆಯಲಿಕ್ಕಿದೆ. ಈಗಾಗಲೇ ಸಂಬಂಧಿಕರು ಮೂರು ಗ್ರಾಮದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಸರ್ಕಾರ ನೀಡಿರುವ ಪರಿಹಾರವೆಷ್ಟು?

ಮೃತರ ಕುಟುಂಬಗಳಿಗೆ ಸರ್ಕಾರ ತಲಾ 2 ಲಕ್ಷ ಪರಿಹಾರ ನೀಡಿದೆ. ಸರ್ಕಾರ ನಿಡರುವ ಪರುಹಾರವನ್ನು ಸಂಬಂಧಿಕರು ಸ್ವಾಗತಿಸಿದ್ದಾರೆ. ಉಸ್ತುವಾರಿ ಸಚಿವರಿಗೆ, ಸ್ಥಳೀಯ ಶಾಸಕರಿಗೆ ಸಂಬಂಧಿಕರು ಅಭಿನಂಧನೆ ಸಲ್ಲಿಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment