ಅಪಘಾತದಲ್ಲಿ 13 ಮಂದಿ ದಾರುಣ ಸಾವು.. ಹೃದಯ ವಿದ್ರಾವಕ ಘಳಿಗೆಗೆ ಸಾಕ್ಷಿಯಾದ ಎಮ್ಮೆಹಟ್ಟಿ ಇಡೀ ಗ್ರಾಮ..

author-image
Ganesh
Updated On
ಸಂಬಂಧಿಕರ ಹೆಸರಲ್ಲಿ ಟಿಟಿ ಖರೀದಿ.. 13 ಜನರ ಸಾವಿಗೆ ಕಾರಣವಾಯ್ತ ಫಾಸ್ಟ್​ ಡ್ರೈವಿಂಗ್​​?
Advertisment
  • ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ಭೀಕರ ಅಪಘಾತ
  • ಸಂಬಂಧಿಕರೆಲ್ಲ ಸೇರಿ ಮನೆ ದೇವರ ದರ್ಶನಕ್ಕೆ ಹೋಗಿದ್ದರು
  • 15 ದಿನದ ಹಿಂದಷ್ಟೇ ಆದರ್ಶ ಟಿಟಿ ವಾಹನ ಖರೀದಿ

ಶಿವಮೊಗ್ಗ: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಒಟ್ಟು 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರೆಲ್ಲರೂ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದವರು.

ಇದೀಗ ಎಮ್ಮೆಹಟ್ಟಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಮೃತರ ಸ್ವಂತ ಗ್ರಾಮವಾದ ಹೊಳೆಹೊನ್ನೂರು ಬಳಿಯ ಎಮ್ಮೆಹಟ್ಟಿಗೆ ಸಂಬಂಧಿಕರು ದೌಡಾಯಿಸಿದ್ದು, ಇಡೀ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ. ಸಂಬಂಧಿಕರನ್ನು ನೆನೆದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಎಮ್ಮೆಹಟ್ಟಿ ಗ್ರಾಮದ ಶಾಲಾ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಮ್ಮೆಹಟ್ಟಿ ಗ್ರಾಮದ ಹಿಂದೂ ರುದ್ರಭೂಮಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆದಿದೆ.

ಇದನ್ನೂ ಓದಿ:ದೇವರ ದರ್ಶನ ಬಳಿಕ ಸೆಲ್ಫಿ ಫೋಟೋ ಹಾಕಿದ್ದ.. ಕರುಣಾಜನಕ ಕತೆ ಹೇಳ್ತಿದೆ 13 ಜನರ ಬಲಿ ಪಡೆದ ಅಪಘಾತ

publive-image

ಟಿಟಿ ಚಾಲಕ ಆದರ್ಶ, ನೀರುಗಂಟಿ ಕೆಲಸ ಮಾಡುತ್ತಿದ್ದ ತಂದೆ ನಾಗೇಶ್, ಅಂಗನವಾಡಿ ಕಾರ್ಯಕರ್ತೆ ವಿಶಾಲಾಕ್ಷಮ್ಮ, ಸಂಬಂಧಿಕರಾದ ಭಾಗ್ಯ, ಮಾನಸ, ಸುಭದ್ರತಾಯಿ, ಶಿವಮೊಗ್ಗ ನಗರದ ಹಾಲ್ಕೋಳ ನಿವಾಸಿ ಪರಶುರಾಮ್, ರೂಪಾ ದಂಪತಿ, ಭದ್ರಾವತಿ ತಾಲೂಕಿನ ಕಲ್ಲಿಹಾಳ್​ನ ಸರ್ಕಲ್ ಮಂಜುಳಬಾಯಿ, ಮಂಜುಳಾ ಹಾಗೂ ಕಡೂರು ತಾಲೂಕಿನ ಬೀರೂರು ನಿವಾಸಿ ಅಂಜು, ಭದ್ರಾವತಿ ತಾಲೂಕಿನ ಮಾಚೇನಹಳ್ಳಿ ಹಾಲಿನ ಡೈರಿ ಗ್ರಾಮದ ನಿವಾಸಿ ಪುಣ್ಯ ಬಾಯಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಮನೆ ದೇವರ ಪೂಜೆಗಾಗಿ ಹೋಗಿದ್ದರು.. ಒಂದು ಕುಟುಂಬದಲ್ಲಿ ಬದುಕಿದ್ದು ಓರ್ವ ಯುವತಿ ಮಾತ್ರ

publive-image

15 ದಿನದ ಹಿಂದಷ್ಟೇ ಆದರ್ಶ ಟಿಟಿ ವಾಹನ ಖರೀದಿ ಮಾಡಿದ್ದ. ಈ ಹಿನ್ನೆಲೆಯಲ್ಲಿ ತಂದೆ- ತಾಯಿ ಹಾಗೂ ಕುಟುಂಬಸ್ಥರೊಂದಿಗೆ ದೇವರ ದರ್ಶನಕ್ಕೆ ತೆರಳಿದ್ದ. ಆದರ್ಶ ಮತ್ತು ಅವರ ಕುಟುಂಬದವರು ಸಂಪ್ರದಾಯದಂತೆ ಪ್ರತಿ ವರ್ಷವೂ ಮನೆದೇವರ ದರ್ಶನಕ್ಕೆ ಪ್ರವಾಸ ಹೋಗುತ್ತಿತ್ತು ಎಂದು ತಿಳಿದುಬಂದಿದೆ.

ಇದನ್ನೂ ಓದಿ:KRS ಡ್ಯಾಮ್​​ನಲ್ಲಿ ಒಂದೇ ದಿನ ಭರ್ಜರಿ ಒಳಹರಿವು.. ನಿರೀಕ್ಷೆಗೂ ಮೀರಿ ಭರ್ತಿ ಆಗ್ತಿದೆ ಡ್ಯಾಮ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment