ದೇವರ ದರ್ಶನ ಬಳಿಕ ಸೆಲ್ಫಿ ಫೋಟೋ ಹಾಕಿದ್ದ.. ಕರುಣಾಜನಕ ಕತೆ ಹೇಳ್ತಿದೆ 13 ಜನರ ಬಲಿ ಪಡೆದ ಅಪಘಾತ

author-image
Ganesh
Updated On
ದೇವರ ದರ್ಶನ ಬಳಿಕ ಸೆಲ್ಫಿ ಫೋಟೋ ಹಾಕಿದ್ದ.. ಕರುಣಾಜನಕ ಕತೆ ಹೇಳ್ತಿದೆ 13 ಜನರ ಬಲಿ ಪಡೆದ ಅಪಘಾತ
Advertisment
  • ಮನೆ ಕಟ್ಟಿಸಿ ಮದುವೆ ಆಗುವ ಯೋಚನೆಯಲ್ಲಿದ್ದ ಡ್ರೈವರ್
  • ಇಂದು ಬೆಳಗ್ಗೆ 4 ಗಂಟೆಗೆ ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ
  • ಒಂದೇ ಕುಟುಂಬದ 13 ಮಂದಿ ದಾರುಣ ಸಾವನ್ನಪ್ಪಿದ್ದಾರೆ

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನ ಹಳ್ಳಿಯಲ್ಲಿ ಟಿಟಿ ಮತ್ತು ಲಾರಿ ಅಪಘಾತದ ಪ್ರಕರಣದಲ್ಲಿ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ. ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮದವರಾಗಿದ್ದಾರೆ.

ಕುಟುಂಬಸ್ಥರೆಲ್ಲ ಸೇರಿ ಮನೆದೇವರ ದರ್ಶನಕ್ಕಾಗಿ ಕಳೆದ ಮೂರು ದಿನಗಳ ಹಿಂದೆ ಪ್ರವಾಸಕ್ಕೆ ಹೊರಟಿದ್ದರು. ದುರಾದೃಷ್ಟ ಒಕ್ಕರಿಸಿ ಬಂದ ಪರಿಣಾಮ 13 ಮಂದಿ ಜೀವ ಕಳೆದುಕೊಂಡಿದ್ದಾರೆ. ಜೀವ ಕಳೆದುಕೊಂಡವರ ಒಬ್ಬರ ಕತೆಯೂ ಒಂದೊಂದು ಕರುಣಾಜನಕ ಕತೆಯನ್ನು ಹೇಳ್ತಿದೆ.

ಇದನ್ನೂ ಓದಿ:ಹಾವೇರಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ.. ದೇವರ ದರ್ಶನಕ್ಕೆ ತೆರಳಿದ್ದ 13 ಭಕ್ತರು ದಾರುಣ ಸಾವು

publive-image

13 ಜನರ ಸಾವಿಗೆ ಕಾರಣವಾಗಿದ್ದು ಟಿಟಿ ವಾಹನ ಚಾಲಕ ಆದರ್ಶ ಎಂಬ ಮಾತುಗಳು ಇದೆ. ಅಂದ್ಹಾಗೆ ಈ ಆದರ್ಶಗೆ ಕೇವಲ 21 ವರ್ಷ. ಮನೆಯ ಹಿರಿಯ ಮಗನಾಗಿದ್ದ. ಮನೆಯಲ್ಲಿ ಮದುವೆ ಆಗುವಂತೆ ಒತ್ತಾಯ ಇತ್ತು. ಆದರೆ ಮನೆ ಕಟ್ಟಿಸಿ ಮದುವೆ ಆಗಬೇಕು ಅನ್ಕೊಂಡಿದ್ದ. ಕುಟುಂಬಸ್ಥರೆಲ್ಲರನ್ನೂ ಸೇರಿ ತೀರ್ಥಯಾತ್ರೆಗೆ ಕರೆದುಕೊಂಡು ಹೋಗಿದ್ದ.

ಮೊನ್ನೆಯ ದಿನ ಮಹಾರಾಷ್ಟ್ರದಲ್ಲಿನ ತುಳಜಾಭವಾನಿ ದೇವಸ್ಥಾನದಲ್ಲಿ ಸೆಲ್ಫಿ ಸ್ಟೇಟಸ್ ಹಾಕಿದ್ದ. ನಿನ್ನೆ ಸಂಜೆ ಸವದತ್ತಿಗೆ ತೆರಳಿ ಚಿಂಚೊಳ್ಳಿ ಮಾಯಮ್ಮಳ ದರ್ಶನವನ್ನು ಮಾಡಿಸಿದ್ದ. ಆದರೆ ಇಂದು ಬೆಳಗ್ಗೆ 13 ಮಂದಿ ಅಪಘಾತಕ್ಕೆ ಬಲಿಯಾಗಿರೋದು ತುಂಬಾ ದುಃಖದ ವಿಚಾರವಾಗಿದೆ.

ಇದನ್ನೂ ಓದಿ:‘ಮಗು ಅಮ್ಮಾ, ಅಮ್ಮಾ ಅಂತಾ ನರಳುತ್ತಿತ್ತು..’ ಹಾವೇರಿ ಅಪಘಾತದ ನರಕ ಬಿಚ್ಚಿಟ್ಟ ಆ್ಯಂಬುಲೆನ್ಸ್ ಡ್ರೈವರ್..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment