Advertisment

ಹಾವೇರಿ ಅಪಘಾತದಲ್ಲಿ ಅಮ್ಮನ ಎದುರೇ ಪ್ರಾಣಬಿಟ್ಟ ಅವಳಿ ಮಕ್ಕಳು.. ದೃಶ್ಯ ಕಂಡು ಗಳಗಳನೇ ಕಣ್ಣೀರಿಟ್ಟ ಆ್ಯಂಬುಲೆನ್ಸ್ ಸಿಬ್ಬಂದಿ

author-image
Ganesh
Updated On
‘ಅಪ್ಪ, ದೊಡ್ಡಪ್ಪ ಸೇರಿ ಕುಟುಂಬದಲ್ಲಿದ್ದ 16 ಜನ ಹೋಗಿದ್ವಿ..’ 13 ಮಂದಿ ತನ್ನವರ ಕಳ್ಕೊಂಡು ಬಾಲಕಿ ನರಳಾಟ..
Advertisment
  • ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಹೃದಯ ವಿದ್ರಾವಕ ಘಟನೆ
  • ಹೆತ್ತ ತಾಯಿಯ ಎದುರೇ ಉಸಿರು ಚೆಲ್ಲಿದ ಇಬ್ಬರು ಮಕ್ಕಳು
  • ಅಪಘಾತದ ಬಗ್ಗೆ ಮಾಹಿತಿ ನೀಡಿದ ಎಸ್​ಪಿ

ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೆನಹಳ್ಳಿ ಕ್ರಾಸ್ ಘೋರ ದುರಂತ ಸಂಭವಿಸಿದ್ದು, ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿಯಾಗಿ 13 ಭಕ್ತರ ಸಾವನ್ನಪ್ಪಿದ್ದಾರೆ. ಭೀಕರ ದುರ್ಘಟನೆಯ ನಂತರ ಹೃದಯ ವಿದ್ರಾವಕ ಕ್ಷಣಗಳಿಗೆ ಕೆಟ್ಟ ಘಳಿಗೆ ಸಾಕ್ಷಿಯಾಗಿದೆ.

Advertisment

ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಆತಂಕದ ನಡುವೆ ಮೃತ 13 ಭಕ್ತರಲ್ಲಿ ಇಬ್ಬರು ಅವಳಿ ಮಕ್ಕಳೂ ಸೇರಿದ್ದಾರೆ. ದುರಂತ ಹಾಗೂ ನೋವಿನ ಸಂಗತಿ ಏನೆಂದರೆ ಹೆತ್ತ ತಾಯಿಯ ಎದರೇ ಅವಳಿ ಮಕ್ಕಳು ಕಣ್ಮುಚ್ಚಿವೆ. ರಕ್ಷಣೆಗೆ ಬಂದಿದ್ದ ಆ್ಯಂಬುಲೆನ್ಸ್ ಸಿಬ್ಬಂದಿ ಇದನ್ನು ಕಣ್ಣಾರೆ ಕಂಡು ಕಣ್ಣೀರು ಇಟ್ಟಿದ್ದಾರೆ.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕದ 13 ಮಂದಿ ಸಾವು.. ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ತೆರಳಿದ್ದ ಭಕ್ತರು

ಇನ್ನು ಮೃತ ಮಕ್ಕಳಿಬ್ಬರ ತಾಯಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಆತಂಕ ಎದುರಾಗಿದ್ದು, ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡುವ ಕೆಲಸಗಳು ನಡೆಯುತ್ತಿವೆ.

Advertisment

ಅಪಘಾತದ ಬಗ್ಗೆ ಮಾತನಾಡಿರುವ ಎಸ್​ಪಿ ಅಂಶು ಕುಮಾರ್ ರಿಯಾಕಡ.. ಹಾವೇರಿ ಬಳಿ ಭೀಕರ ಅಪಘಾತದಲ್ಲಿ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ. ಮೃತರೆಲ್ಲ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹೊಳೆ ಹೊನ್ನೂರು ಬಳಿಯ ಎಮ್ಮಿಹಟ್ಟಿ ಗ್ರಾಮದವರು. ಚಿಂಚೊಳ್ಳಿ ಮಾಯಮ್ಮನ ದರ್ಶನ ಮಾಡಿಕೊಂಡು ಸ್ವಗ್ರಾಮಕ್ಕೆ ವಾಪಾಸ್ ಆಗುವ ವೇಳೆ ದುರಂತ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಹಾವೇರಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ.. ದೇವರ ದರ್ಶನಕ್ಕೆ ತೆರಳಿದ್ದ 15 ಭಕ್ತರು ದಾರುಣ ಸಾವು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment