Advertisment

ಮನೆ ದೇವರ ಪೂಜೆಗಾಗಿ ಹೋಗಿದ್ದರು.. ಒಂದು ಕುಟುಂಬದಲ್ಲಿ ಬದುಕಿದ್ದು ಓರ್ವ ಯುವತಿ ಮಾತ್ರ

author-image
Ganesh
Updated On
ಮನೆ ದೇವರ ಪೂಜೆಗಾಗಿ ಹೋಗಿದ್ದರು.. ಒಂದು ಕುಟುಂಬದಲ್ಲಿ ಬದುಕಿದ್ದು ಓರ್ವ ಯುವತಿ ಮಾತ್ರ
Advertisment
  • ಹಾವೇರಿಯ ಬ್ಯಾಡಗಿ ತಾಲೂಕಿನಲ್ಲಿ ಭೀಕರ ಅಪಘಾತ
  • 11 ಮಂದಿ ಸ್ಥಳದಲ್ಲೇ ಸಾವು, ಮೂವರು ಆಸ್ಪತ್ರೆಯಲ್ಲಿ ನಿಧನ
  • ಕುಟುಂಬಸ್ಥರ ಕಳೆದುಕೊಂಡು ಕಣ್ಣೀರಲ್ಲಿ ಮುಳುಗಿದ ಸಂಬಂಧಿಕರು

ಶಿವಮೊಗ್ಗ: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನ ಹಳ್ಳಿಯಲ್ಲಿ ಟಿಟಿ ಮತ್ತು ಲಾರಿ ಅಪಘಾತದ ಪ್ರಕರಣದಲ್ಲಿ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ. ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮದವರು ಎಂದು ತಿಳಿದುಬಂದಿದೆ.

Advertisment

ಮೃತರು..

  • ಸುಭದ್ರಬಾಯಿ (65)
  • ಮಾನಸ (29)
  • ಮಂಜುಳಾ (50)
  • ಆದರ್ಶ (21)
  • ಆರ್ಯ (4)
  • ವಿಶಾಲಾಕ್ಷಿ (50)
  • ರೂಪಾ ಬಾಯಿ 35)
  • ನಂದನ (3)
  • ಅಂಜಲಿ (30)
  • ನಾಗೇಶ ರಾವ್ (51)
  • ಅರುಣಕುಮಾರ (27)
  • ಮಂಜುಳಾ ಬಾಯಿ (55)
  • ಭ್ಮಾಗ್ಯಾ ಬಾಯಿ (45)

ಒಂದೇ ಕುಟುಂಬದ 16 ಮಂದಿ
ಮೃತರು ಕಳೆದ ಮೂರು ದಿನಗಳ ಹಿಂದೆ ಕುಟುಂಬಸ್ಥರೆಲ್ಲ ಸೇರಿ ಮನೆದೇವರ ಪೂಜೆಗೆ ಹೋಗಿದ್ದರು. ಆದರೆ ಇಂದು ಬೆಳಗ್ಗೆ 4 ಗಂಟೆ ಸುಮಾರಿಗೆ ನಡೆದ ಅಪಘಾತದಲ್ಲಿ 11 ಮಂದಿ ಸ್ಥಳದಲ್ಲೇ ಸಾವನ್ನಪ್ಪಿ ಒಟ್ಟು 13 ಪ್ರಯಾಣಿಕರು ಮೃತಪಟ್ಟಿದ್ದಾರೆ.
ಟಿಟಿ ಮಾಲಿಕ ನಾಗೇಶ ರಾವ್ ಕುಟುಂಬದಲ್ಲಿ ಒಟ್ಟು ನಾಲ್ಕು ಜನ ಸೇರಿದಂತೆ ಅವರ ಮನೆಯ ಇತರೆ ಸಂಬಂಧಿಕರು ಸಾವನ್ನಪ್ಪಿದ್ದಾರೆ. ಟಿಟಿ ವಾಹನದ ಮಾಲೀಕ ನಾಗೇಶ್ ತಾಯಿ ವಿಶಾಲಾಕ್ಷಿ. ಇವರು ಆಶಾ ಕಾರ್ಯಕರ್ತೆ. ವಿಶಾಲಾಕ್ಷಿ ಮನೆಯ ಅಷ್ಟೂ ಕುಟುಂಬಸ್ಥರು ಪ್ರವಾಸಕ್ಕೆ ತೆರಳಿದ್ದರು.

ಇದನ್ನೂ ಓದಿ:ಹಾವೇರಿ ಅಪಘಾತದಲ್ಲಿ ಅಮ್ಮನ ಎದುರೇ ಪ್ರಾಣಬಿಟ್ಟ ಅವಳಿ ಮಕ್ಕಳು.. ದೃಶ್ಯ ಕಂಡು ಗಳಗಳನೇ ಕಣ್ಣೀರಿಟ್ಟ ಆ್ಯಂಬುಲೆನ್ಸ್ ಸಿಬ್ಬಂದಿ

Advertisment

publive-image

ಆಶಾ ಕಾರ್ಯಕರ್ತೆ ವಿಶಾಲಾಕ್ಷಿ ಮನೆಯಲ್ಲಿ ವಿಕಲ ಚೇತನ ಯುವತಿ ಬಿಟ್ಟು ಇನ್ನುಳಿದವರೆಲ್ಲ ಸಾವನ್ನಪ್ಪಿದ್ದಾರೆ. ವಿಶಾಲಾಕ್ಷಿ ಪುತ್ರಿ ಹುಟ್ಟಿನಿಂದ ಪೋಲಿಯೋ ರೋಗಕ್ಕೆ ತುತ್ತಾಗಿದ್ದಳು. ಎಮ್ಮೆಹಟ್ಟಿಯ ಒಟ್ಟು ನಾಲ್ಕು ಕುಟುಂಬಗಳು ಪ್ರವಾಸ ಕೈಗೊಂಡಿದ್ದವು. ಪ್ರತಿ ವರ್ಷದಂತೆ ಈ ಬಾರಿಯೂ ಮನೆದೇವರ ಪೂಜೆಗೆ ಹೋಗಿತ್ತು. ಚಿಂಚೊಳ್ಳಿ ಮಾಯಾಮ್ಮ ದೇವರ ದರ್ಶನ ಮುಗಿಸಿ ವಾಪಸ್ ಆಗುತ್ತಿದ್ದಾಗ ದುರ್ಘಟನೆ ನಡೆದಿದೆ.

ಇದನ್ನೂ ಓದಿ:ಹಾವೇರಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ.. ದೇವರ ದರ್ಶನಕ್ಕೆ ತೆರಳಿದ್ದ 13 ಭಕ್ತರು ದಾರುಣ ಸಾವು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment