ಹಾವೇರಿಯಲ್ಲಿ ಘೋರ ದುರಂತ.. ಕಳಸಾರೋಹಣ ವೇಳೆ ಕ್ರೇನ್ ಬಕೆಟ್ ಕಳಚಿ ಬಿದ್ದು ದೊಡ್ಡ ಅನಾಹುತ

author-image
Bheemappa
Updated On
ಹಾವೇರಿಯಲ್ಲಿ ಘೋರ ದುರಂತ.. ಕಳಸಾರೋಹಣ ವೇಳೆ ಕ್ರೇನ್ ಬಕೆಟ್ ಕಳಚಿ ಬಿದ್ದು ದೊಡ್ಡ ಅನಾಹುತ
Advertisment
  • ತಾಲೂಕು ಆಸ್ಪತ್ರೆಗೆ ಗಾಯಾಳು ದಾಖಲು, ಮುಂದುವರೆದ ಚಿಕಿತ್ಸೆ
  • ದೇವಸ್ಥಾನದ ಗೋಪುರದ ಹತ್ತಿರ ಹೋಗುತ್ತಿದ್ದಂತೆ ಏನಾಯಿತು?
  • ಇದು ಅಪಶಕುನನಾ, ದುರಂತದ ಮುನ್ಸೂಚನೆನಾ? ಭಕ್ತರಲ್ಲಿ ಚರ್ಚೆ

ಹಾವೇರಿ: ಗಂಗಾಪರಮೇಶ್ವರಿಯ ಹೊಸ ದೇವಸ್ಥಾನಕ್ಕೆ ಕಳಸಾರೋಹಣ ಮಾಡುವಾಗ ಕ್ರೇನ್​ ಬಕೆಟ್ ಕಳಚಿ ಬಿದ್ದು ಓರ್ವ ವ್ಯಕ್ತಿ ಕಣ್ಮುಚ್ಚಿರುವ ಘಟನೆ ಹಾನಗಲ್ ತಾಲೂಕಿನ ಶೇಷಗಿರಿಯಲ್ಲಿ ನಡೆದಿದೆ.

ಗ್ರಾಮದ ಹಿರಿಯ ನಿವಾಸಿ ಮಂಜು ಪಾಟೀಲ್​ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಜೊತೆಗೆ ಕ್ರೇನ್​ ಬಕೆಟ್​ನಲ್ಲಿದ್ದ ಜ್ಯೋತಿರ್ಲಿಂಗ ಸ್ವಾಮೀಜಿ ಹಾಗೂ ಇನ್ನೊಬ್ಬ ಗ್ರಾಮಸ್ಥ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಹಾನಗಲ್ ತಾಲೂಕಿನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಿನ್ನೆ ಸಂಭ್ರಮದಿಂದ ಕುಂಭ ನೆರವೇರಿತ್ತು. ಇಂದು ಕಳಸವನ್ನು ದೇವಾಲಯದ ಮೇಲೆ ಇಡಲು ಕ್ರೇನ್ ಅನ್ನು ಬಳಸಿದಾಗ ಈ ಅವಘಡ ನಡೆದಿದೆ.

ಇದನ್ನೂ ಓದಿ:CM ಸಿದ್ದರಾಮಯ್ಯಗೆ ಶಿಕ್ಷೆ ಕೊಡಿಸುವ ಎಲ್ಲ ಅವಕಾಶ ನನಗಿವೆ.. ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್

publive-image

ಕಳೆದ 8 ವರ್ಷಗಳಿಂದ ಗಂಗಾಪರಮೇಶ್ವರಿಯ ಹೊಸ ದೇವಸ್ಥಾನವನ್ನು ನಿರ್ಮಾಣ ಮಾಡಿಕೊಂಡು ಬರಲಾಗಿತ್ತು. ದೇವಾಲಯದ ಎಲ್ಲ ಕೆಲಸಗಳು ಮುಗಿದಿದ್ದು ದೇವತೆಯ ಪ್ರತಿಷ್ಠಾಪನೆ ಮಾಡಿ ಕುಂಭವನ್ನು ಸಂಭ್ರಮದಿಂದ ನೆರವೇರಿಸಲಾಗಿತ್ತು. ದೇವಾಲಯದ ಮೇಲೆ ಕಳಸವನ್ನು ಇಡುವುದು ಒಂದು ಬಾಕಿ ಇತ್ತು. ಅದನ್ನು ಇಂದು ಕ್ರೇನ್ ಮೂಲಕ ಇಡಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿತ್ತು.

ದೇವಾಲಯದ ಪೂಜೆ ಬಳಿಕ ಕ್ರೇನ್​ನ ಬಕೆಟ್​ನಲ್ಲಿ 7 ರಿಂದ 8 ಜನ ಎತ್ತುವಂತಹ ಕಳಸ ಹಾಗೂ ಮಂಜು ಪಾಟೀಲ್, ಜ್ಯೋತಿರ್ಲಿಂಗ ಸ್ವಾಮೀಜಿ ಹಾಗೂ ಇನ್ನೊಬ್ಬ ಗ್ರಾಮಸ್ಥ ಇದ್ದರು. ಕ್ರೇನ್ ಬಕೆಟ್​ ಅನ್ನು ಮೇಲಕ್ಕೆ ತೆಗೆದುಕೊಂಡು ಹೋಗುವಾಗ ಏಕಾಏಕಿ ಬಕೆಟ್ ಕಳಚಿ ಕೆಳಕ್ಕೆ ಬಿದ್ದಿದೆ. ಇದರ ಪರಿಣಾಮ ಬಕೆಟ್​​ನಲ್ಲಿದ್ದ ಮೂವರ ಪೈಕಿ, ಮಂಜು ಪಾಟೀಲ್ ಎದೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಜೀವ ಕಳೆದುಕೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment