/newsfirstlive-kannada/media/post_attachments/wp-content/uploads/2025/03/HVR_SWATHI.jpg)
ಕಳೆದ ಏಳೆಂಟು ದಿನಗಳ ಹಿಂದೆ ದೇಹವೊಂದು ತುಂಗಭದ್ರೆಯಲ್ಲಿ ತೇಲಾಡಿತ್ತು. ಅದು ಹೆಣ್ಣು ದೇಹ. ಹೀಗೆ ಪತ್ತೆಯಾದ ಈ ಶವಕ್ಕೆ ಲವ್ ಸ್ಟೋರಿ ಕನೆಕ್ಟ್ ಆಗಿದೆ. ಯುವತಿ ಸಾವಿನ ತನಿಖೆ ಆರಂಭಿಸಿದ ಪೊಲೀಸರಿಗೆ ಹಂತಕರ ಸುಳಿವಿನ ಜೊತೆಗೆ ಮಿಸ್ಟ್ರಿವೊಂದು ರಿವೀಲ್ ಮಾಡಿದ್ದಾರೆ.
ಜಸ್ಟ್ 22 ವರ್ಷ, ಹೆಸರು ಸ್ವಾತಿ. ಆದ್ರೆ ಆ ಹೆಸರಿನ ಉಸಿರು ನಿಂತೋಗಿದೆ. ಕಾರಣ ಯುವತಿಯ ಜೀವ ತೆಗೆಯಲಾಗಿದೆ. ರಾಣೆಬೆನ್ನೂರಿನ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಸ್ವಾತಿ, ಮಾರ್ಚ್ 6 ರಂದು ತುಂಗಭದ್ರಾ ನದಿಯಲ್ಲಿ ಜೀವ ಇಲ್ಲದೇ ಪತ್ತೆ ಆಗಿದ್ದಾಳೆ. ಅಪರಿಚಿತ ದೇಹ ಅಂತ ಪೊಲೀಸ್ರು ಅಂತ್ಯಕ್ರಿಯೆ ಮುಗಿಸಿದ್ದರು. ಆದ್ರೆ, ತನಿಖೆಗಿಳಿದ ಪೊಲೀಸರಿಗೆ ಹಂತಕರ ಸುಳಿವು ಸಿಕ್ಕಿದೆ. ಘಟನೆಯ ಹಿಂದಿನ ರಹಸ್ಯ ಬಯಲಾಗಿದೆ.
ಪ್ರೀತ್ಸೋ.. ಪ್ರೀತ್ಸೋ ಅಂತ ಪ್ರಾಣ ಕಳೆದುಕೊಂಡ ಸ್ವಾತಿ
ಹಾವೇರಿ ಜಿಲ್ಲೆ ಸ್ವಾತಿ ಕೇಸ್ಗೆ ರೋಚಕ ಟ್ವಿಸ್ಟ್ ಸಿಕ್ಕಿದೆ. ನಯಾಜ್ ಎಂಬ ಮುಸ್ಲಿಂ ಯುವಕನನ್ನ ಯುವತಿ ಪ್ರೀತಿಸುತ್ತಿದ್ದಳು. ಆದ್ರೆ ನಯಾಜ್ ಆಕೆಯ ಪ್ರೀತಿಯನ್ನ ನಿರಾಕರಿಸಿದ್ದ. ಇದರಿಂದ ರೊಚ್ಚಿಗೆದ್ದಿದ್ದ ಯುವತಿ ಜಗಳ ಆಡಿದ್ದಾಳೆ. ಯುವತಿ ಟಾರ್ಚರ್ನಿಂದ ಬೇಸತ್ತಿದ್ದ ನಯಾಜ್, ತನ್ನ ಸ್ನೇಹಿತರಾದ ವಿನಯ್, ದುರ್ಗಾಚಾರಿ ಜೊತೆ ಸೇರಿ ಯುವತಿಯನ್ನ ಮುಗಿಸಿದ್ದಾನೆ.
ಸ್ಕೆಚ್ ಹೇಗಿತ್ತು?
- ನಯಾಜ್ ಹಾಗೂ ಸ್ವಾತಿ ನಡುವೆ ಭಿನ್ನಾಭಿಪ್ರಾಯ ಮನಸ್ತಾಪ
- ನಯಾಜ್, ವಿನಯ್, ದುರ್ಗಾಚಾರಿಗೆ ಈ ವಿಚಾರ ತಿಳಿಸಿದ್ದಾನೆ
- ಸ್ವಾತಿ ಕಾಟ ಹೆಚ್ಚಾಗಿದೆ. ಆಕೆ ಕಥೆ ಮುಗಿಸಬೇಕು ಎಂದು ಸ್ಕೆಚ್
- ಸ್ಕೆಚ್ನಂತೆ ಮೂವರು ಆರೋಪಿಗಳು ಬಾಡಿಗೆ ಕಾರು ತಂದಿದ್ರು
- ಸ್ವಾತಿಯನ್ನ ಸುವರ್ಣ ಪಾರ್ಕ್ಗೆ ಕರೆದುಕೊಂಡು ಹೋಗಿದ್ದಾರೆ
- ಬಳಿಕ ಕಾರಿನಲ್ಲೇ ಟವೆಲ್ನಿಂದ ಕುತ್ತಿಗೆಗೆ ಬಿಗಿದಿದ್ದಾರೆ
- ನಂತ್ರ ಕಾರಿನಲ್ಲಿ ಸಾಗಿಸಿ ತುಂಗಭದ್ರಾ ನದಿಗೆ ಬಿಸಾಡಿದ್ದಾರೆ
ಇದನ್ನೂ ಓದಿ:ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ.. ವಿಪಕ್ಷಗಳ ವಿರೋಧ ನಡುವೆಯೂ ಸಂಪುಟ ಒಪ್ಪಿಗೆ
ಸದ್ಯ, ಸ್ವಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಯಾಜ್ನನ್ನ ಬಂಧಿಸಿದ್ದಾರೆ. ವಿನಯ್ ಹಾಗೂ ದುರ್ಗಾಚಾರಿ ಪರಾರಿಯಾಗಿದ್ದರು. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮೃತ ಸ್ವಾತಿ ಮನೆಗೆ ಬಿ.ಸಿ.ಪಾಟೀಲ್, ಮುತಾಲಿಕ್ ಭೇಟಿ
ಇನ್ನು, ಸ್ವಾತಿ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹ ಹೆಚ್ಚಾಗಿತ್ತು. ಗ್ರಾಮಸ್ಥರ ಜೊತೆಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಜಸ್ಟೀಸ್ ಫಾರ್ ಸ್ವಾತಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನಕ್ಕೆ ಮುನ್ನುಡಿ ಬರೆದಿದ್ದು, ಸ್ವಾತಿ ಮನೆಗೆ ಮಾಜಿ ಸಚಿವ ಬಿ.ಸಿ ಪಾಟೀಲ್, ಶ್ರೀರಾಮ ಸೇನೆ ಮುಖ್ಯಸ್ಥ ಮುತಾಲಿಕ್ ಭೇಟಿ ನೀಡಿ ಸಾಂತ್ವನ ಹೇಳಿದರು.
ಹಾವೇರಿಯಲ್ಲಿ ಸಂಚಲನ ಸೃಷ್ಟಿಸಿದ್ದ ಸ್ವಾತಿ ಪ್ರಕರಣದ ರಹಸ್ಯ ಬಯಲಾಗಿದೆ. ಕೇಸ್ನ ಪ್ರಮುಖ ಆರೋಪಿ ನಯಾಜ್ನನ್ನ ಈಗಾಗಲೇ ಪೊಲೀಸರು ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ