/newsfirstlive-kannada/media/post_attachments/wp-content/uploads/2024/06/adarsh.jpg)
ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿರೋ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನ ಹಳ್ಳಿಯಲ್ಲಿ ನಡೆದಿದೆ. ಈ ಭೀಕರ ಅಪಘಾತದಲ್ಲಿ ಒಟ್ಟು 13 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಮನೆ ದೇವರ ಪೂಜೆಗಾಗಿ ಹೋಗಿದ್ದರು.. ಒಂದು ಕುಟುಂಬದಲ್ಲಿ ಬದುಕಿದ್ದು ಓರ್ವ ಯುವತಿ ಮಾತ್ರ
ಸುಭದ್ರಬಾಯಿ (65), ಮಾನಸ (29), ಮಂಜುಳಾ (50), ಆದರ್ಶ್ (21), ಆರ್ಯ (4), ವಿಶಾಲಾಕ್ಷಿ (50), ರೂಪಾ ಬಾಯಿ (35), ನಂದನ (3), ಅಂಜಲಿ (30), ನಾಗೇಶ ರಾವ್ (51), ಅರುಣಕುಮಾರ (27), ಮಂಜುಳಾ ಬಾಯಿ (55), ಭ್ಮಾಗ್ಯಾ ಬಾಯಿ (45) ಮೃತ ದುರ್ದೈವಿಗಳು ಎಮದು ಗುರುತಿಸಲಾಗಿದೆ. ಮೃತ ದುರ್ದೈವಿಗಳು ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮದವರು.
ಇನ್ನು, ಬೆಂಗಳೂರು ಮೂಲದವರಿಂದ ಟಿಟಿ ವಾಹನ ಖರೀದಿ ಮಾಡಿ ಕಳೆದ ಮೂರು ದಿನಗಳ ಹಿಂದೆ ಕುಟುಂಬಸ್ಥರೆಲ್ಲ ಸೇರಿ ಮನೆದೇವರ ಪೂಜೆಗೆ ಹೋಗಿದ್ದರು. ಅದರಲ್ಲೂ ಕಳೆದ ಒಂದು ತಿಂಗಳ ಹಿಂದೆ ಮೃತ ಚಾಲಕ ಆದರ್ಶ್ ಸಂಬಂಧಿಕರ ಹೆಸರಿನಲ್ಲಿ ಹೊಸದಾಗಿ ಟಿಟಿಯನ್ನು ಖರೀದಿಸಿದ್ದರು. ಚಾಲಕ ಆದರ್ಶ್ ಸಾರಿಗೆ ಇಲಾಖೆಯ ನಿಯಮಗಳನ್ನು ಪಾಲಿಸಿ ರೂಲ್ಸ್ ಫಾಲೋ ಮಾಡಿದ್ದ. ಜೊತೆಗೆ ಇನ್ಸೂರೆನ್ಸ್, ಪಿಟ್ನೆಸ್ ಹಾಗೂ ಟ್ಯಾಕ್ಸ್ ಈ ಮೂರು ಕ್ಲಿಯರ್ ಇರುವ ಪ್ರತಿ ನ್ಯೂಸ್ಫಸ್ಟ್ಗೆ ಲಭ್ಯವಾಗಿದೆ. ಆದರೆ ಇಂದು ಬೆಳಗ್ಗೆ 4 ಗಂಟೆ ಸುಮಾರಿಗೆ ನಡೆದ ಅಪಘಾತದಲ್ಲಿ 13 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟಿಟಿ ಮಾಲೀಕ ನಾಗೇಶ ರಾವ್ ಕುಟುಂಬದಲ್ಲಿ ಒಟ್ಟು ನಾಲ್ಕು ಜನ ಸೇರಿದಂತೆ ಅವರ ಮನೆಯ ಇತರೆ ಸಂಬಂಧಿಕರು ಸಾವನ್ನಪ್ಪಿದ್ದಾರೆ.
ಇದೀಗ ಎಮ್ಮೆಹಟ್ಟಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಮೃತರ ಸ್ವಂತ ಗ್ರಾಮವಾದ ಹೊಳೆಹೊನ್ನೂರು ಬಳಿಯ ಎಮ್ಮೆಹಟ್ಟಿಗೆ ಸಂಬಂಧಿಕರು ದೌಡಾಯಿಸಿದ್ದು, ಇಡೀ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ. ಸಂಬಂಧಿಕರನ್ನು ನೆನೆದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಎಮ್ಮೆಹಟ್ಟಿ ಗ್ರಾಮದ ಶಾಲಾ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಮ್ಮೆಹಟ್ಟಿ ಗ್ರಾಮದ ಹಿಂದೂ ರುದ್ರಭೂಮಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ