/newsfirstlive-kannada/media/post_attachments/wp-content/uploads/2024/10/30-Grams-Protein.jpg)
ನೀವು ತೂಕವನ್ನು ಇಳಿಸಿಕೊಳ್ಳಲು ಒದ್ದಾಡುತ್ತಿದ್ದೀರಾ.? ಹಾಗಿದ್ರೆ ನಿಮ್ಮ ನಿತ್ಯ ಆಹಾರದಲ್ಲಿ ನೀವು ಏನು ಸೇವಿಸುತ್ತಿದ್ದೀರಾ ಎನ್ನುವುದರ ಕಡೆ ಗಮನವಿರಲಿ. ಅದರಲ್ಲೂ ಪ್ರಮುಖವಾಗಿ ನಿಮ್ಮ ಉಪಹಾರದ ಬಗ್ಗೆ ಹೆಚ್ಚು ಗಮನವಹಿಸಬೇಕು. ಪ್ರೊಟೀನ್ ದೇಹಕ್ಕೆ ತುಂಬಾ ಪರಿಣಾಮಕಾರಿಯಾದ ಆಹಾರ. ಅದು ನಿತ್ಯ 30 ಗ್ರಾಂಗಿಂತ ಕಡಿಮೆಯಾದ್ರೆ ಸಾಕಾಗಲ್ಲ. ನಿತ್ಯ 30 ಗ್ರಾಂಗಿಂತಲೂ ಹೆಚ್ಚು ಪ್ರೋಟಿನ್ ನಾವು ನಮ್ಮ ನಿತ್ಯದ ಬ್ರೇಕ್ಫಾಸ್ಟ್ನಲ್ಲಿ ತೆಗೆದುಕೊಳ್ಳಬೇಕು ಅಂದಲ್ಲಿ ಮಾತ್ರ ನಮಗೆ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ.
ಇದನ್ನೂ ಓದಿ:ಹಗಲಲ್ಲಿ ಎಷ್ಟು ಹೊತ್ತು ಮಲಗಬೇಕು? ಮಧ್ಯಾಹ್ನ ನಿದ್ರೆ ಮಾಡೋದು ಒಳ್ಳೆಯದೋ? ಕೆಟ್ಟದ್ದೋ?
ನಿತ್ಯ ಎರಡು ಮೊಟ್ಟೆಗಳ ಜೊತೆ ನೀವು ಒಂದು ಕಪ್ ಎಗ್ವೈಟ್ನ್ನು ತಿನ್ನಬೇಕು. ಇಲ್ಲವೇ, ಎರಡು ಮೊಟ್ಟೆಗಳ ಜೊತೆ ಎರಡು ಚಿಕನ್ ಸಾಸೇಜಸ್ ಸೇವಿಸಬೇಕು ಇದನ್ನು ಹೊರತುಪಡಿಸಿದರೆ ಎರಡು ಮೊಟ್ಟೆ ಹಾಗೂ 2 ಗ್ರೀಕ್ ಯೋಗಹರ್ಟ್ ಸೇವಿಸಬೇಕು. ಇದನ್ನು ನಿತ್ಯ ಉಪಹಾರದಲ್ಲಿ ನೀವು ಸೇವಿಸಿದರೆ ನಿಮ್ಮ ದೇಹಕ್ಕೆ ಹೆಚ್ಚು ಹೆಚ್ಚು ಪ್ರೊಟೀನ್ ಸಿಗುತ್ತದೆ.
ಇದನ್ನೂ ಓದಿ:ವಡಾ ಪಾವ್ ಮಾರಿ ತಿಂಗಳಿಗೆ 2 ಲಕ್ಷ ದುಡಿತಾನೆ ಈ ವ್ಯಕ್ತಿ! MBA ಪದವೀಧರನಿಗಿಂತ ಈತನ ಆದಾಯವೇ ಜಾಸ್ತಿ!
ಇನ್ನು ಹೆಚ್ಚು ಇದರ ಬಗ್ಗೆ ನಾವು ತಿಳಿಯಬೇಕಾದಲ್ಲಿ ನೀವು ಮುಂಬೈನ ಜ್ಯುನೆವಾ ಶಲ್ಬಿ ಆಸ್ಪತ್ರೆಯ ಡಿಯಟಿಷನ್ ಜಿನಾಲ್ ಪಟೇಲ್ ಅವರ ಮಾತುಗಳನ್ನು ಕೇಳಬೇಕು. ಅವರು ಹೇಳುವ ಪ್ರಕಾರ ಪ್ರೊಟೀನ್ ಶ್ರಿಮಂತಿಕೆ ಹೊಂದಿರುವ ಆಹಾರಗಳನ್ನು ಹೆಚ್ಚು ಹೆಚ್ಚು ನಾವು ಸೇವಿಸುವುದರಿಂದ ನಮ್ಮ ಆರೋಗ್ಯದಲ್ಲಿ ಹೆಚ್ಚು ಸದೃಢತೆ ಸೃಷ್ಟಿಯಾಗುತ್ತದೆ. ಅದು ಮಾತ್ರವಲ್ಲ ಪ್ರೊಟೀನ್ ದೇಹದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹಾಯಕವಾಗಿ ನಿಲ್ಲಲಿದೆ ಎಂದು ಹೇಳುತ್ತಾರೆ.
ಪ್ರೊಟೀನ್ ನಮ್ಮ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ದೇಹದಲ್ಲಿ ಪ್ರತಿ ಅಂಗಾಗಳಿಗೂ ಶಕ್ತಿ ತುಂಬುದತ್ತದೆ ಹೀಗಾಗಿ ನಿತ್ಯ ನಿಮ್ಮ ಉಪಹಾರದಲ್ಲಿ ಹೆಚ್ಚು ಪ್ರೊಟೀನ್ ಅಂಶಗಳಿರುವ ಆಹಾರವನ್ನು ಸೇವಿಸುವುದರಿಂದ ಅನೇಕ ಸಮಸ್ಯೆಗಳಿಂದ ದೂರ ಇರಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ