ಬೇಸಿಗೆ ಎಂದು ಐಸ್​ಕ್ರೀಮ್​​​ ತಿನ್ನೋ ಮುನ್ನ ಎಚ್ಚರ! ಚೂರು ಯಾಮಾರಿದ್ರೂ ಆರೋಗ್ಯಕ್ಕೆ ಕುತ್ತು ಗ್ಯಾರಂಟಿ

author-image
Ganesh Nachikethu
Updated On
VIDEO: ಮೊನ್ನೆ ಕೈ ಬೆರಳು.. ಇಂದು ಜರಿ ಹುಳು; ಐಸ್​ಕ್ರೀಮ್​ ಪ್ರಿಯರು ಓದಲೇಬೇಕಾದ ಸ್ಟೋರಿ ಇದು!
Advertisment
  • ಐಸ್​ಕ್ರೀಮ್ ತಿಂದ ಮೇಲೆ ಏನೆಲ್ಲ ತಿನ್ನಬಾರದು?
  • ಅಲರ್ಜಿ ಇದ್ದವರು ಐಸ್​ ಕ್ರೀಮ್ ತಿನ್ನಲೇಬಾರದು!
  • ಬೇಸಿಗೆ ಎಂದು ಐಸ್​​ಕ್ರೀಂ ತಿನ್ನುವಾಗ ಇರಲಿ ಎಚ್ಚರ

ಉರಿ ಬಿಸಿಲಿನ ಬೇಸಿಗೆ ಆರಂಭವಾಗಿದೆ. ವಿಪರಿತ ಸೆಕೆ, ಬಾಯಾರಿಕೆ, ದಣಿವು ಆರಿಸಿಕೊಳ್ಳಲು ಜನ ಐಸ್​ ಕ್ರೀಮ್​​ ಹಾಗೂ ತಂಪು ಪಾನೀಯಗಳ ಮೊರೆ ಹೋಗ್ತಿದ್ದಾರೆ.

ಬೇಸಿಗೆಯಲ್ಲಿ ಸಾಮಾನ್ಯವಾಗಿ ಜನ ಐಸ್​​ಕ್ರೀಂಗಳನ್ನು ಹೆಚ್ಚು ಇಷ್ಟ ಪಡುತ್ತಾರೆ. ಐಸ್​ಕ್ರೀಂ ಇಷ್ಟವೆಂದು ವಿಪರೀತ ತಿನ್ನುವುದರ ಜೊತೆಗೆ ಕೆಲವು ವಸ್ತುಗಳನ್ನು ಸೇವಿಸಿದರೆ ನಿಮ್ಮ ಆರೋಗ್ಯಕ್ಕೆ ಕುತ್ತು ಬರೋದ್ರಲ್ಲಿ ಡೌಟೇ ಇಲ್ಲ. ಹೀಗಾಗಿ ನೀವು ಐಸ್​ಕ್ರೀಂಗಳನ್ನು ತಿನ್ನುವಾಗ ಮತ್ತು ತಿಂದ ನಂತರ ಹೇಗಿರಬೇಕು ಅನ್ನೋದ್ರ ವಿವರ ಇಲ್ಲಿದೆ.

publive-image

ಏನ್ಮಾಡಬಾರ್ದು?

ಐಸ್ ಕ್ರೀಂ ತಿಂದ ನಂತರ ಬಿಸಿಯಾದ ಆಹಾರ ಮತ್ತು ನೀರನ್ನು ಸೇವಿಸಬೇಡಿ. ಚಹಾ, ಕಾಫಿ, ಸೂಪ್, ಗ್ರೀನ್ ಟೀ ಇತ್ಯಾದಿ.. ಅಷ್ಟೇ ಅಲ್ಲ, ಐಸ್ ಕ್ರೀಂ ತಿಂದ ನಂತರ ಕಿತ್ತಳೆ, ನಿಂಬೆ ಪಾನಕ, ದ್ರಾಕ್ಷಿಯಂತಹ ಹಣ್ಣುಗಳನ್ನು ಸೇವಿಸುವುದರಿಂದಲೂ ದೇಹಕ್ಕೆ ಅಪಾಯ.
ಐಸ್ ಕ್ರೀಂ ತಿಂದ ನಂತರ ಮದ್ಯಪಾನ ಮಾಡಬಾರದು. ಒಂದು ವೇಳೆ ಸೇವಿಸಿದರೆ ವಾಂತಿ, ಭೇದಿ ಮತ್ತು ತಲೆತಿರುಗುವಿಕೆಯಂತಹ ಸಮಸ್ಯೆ ಶುರುವಾಗುತ್ತದೆ. ಐಸ್ ಕ್ರೀಮ್ ತಿಂದ ನಂತರ ಮಟನ್, ಬೆಣ್ಣೆ, ತುಪ್ಪ ಆಧಾರಿತ ಖಾದ್ಯಗಳು, ಬಿರಿಯಾನಿ, ಚೈನೀಸ್ ಫುಡ್, ಜಂಕ್ ಫುಡ್ ಮುಂತಾದ ಘಟ್ಟಿ ಪದಾರ್ಥ ಸೇವಿಸುವುದನ್ನು ತಪ್ಪಿಸಬೇಕು.

publive-image

ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಅತಿಯಾಗಿ ಐಸ್ ಕ್ರೀಂ ಸೇವನೆ ಮಾಡಬಾರದು. ಅದು ನಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಐಸ್ ಕ್ರೀಮ್ ತಿಂದ ನಂತರ ಕನಿಷ್ಠ 40 ನಿಮಿಷಗಳ ಕಾಲ ಏನನ್ನೂ ತಿನ್ನದಿರಲು ಪ್ರಯತ್ನಿಸಿ. ಐಸ್ ಕ್ರೀಂ ಕೆಲವರಿಗೆ ಹಾನಿಯುಂಟುಮಾಡಬಹುದು. ಇದರಿಂದ ಅಲರ್ಜಿಯಾಗಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment