newsfirstkannada.com

ಸಾವಿರಾರು ಕೋಟಿ ಹವಾಲಾ ದಂಧೆ ಆರೋಪ.. ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದ್ದೇನು?

Share :

Published January 14, 2024 at 3:38pm

Update January 14, 2024 at 3:40pm

    GM ಗ್ರೂಪ್ ಮೇಲೆ ಹವಾಲಾ ದಂಧೆ ಆರೋಪ

    ನ್ಯೂಸ್​​ಫಸ್ಟ್​ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಸಂಸದ

    ಡ್ರೈವರ್ ಸ್ವಾಮಿ ಯಾರು ಅನ್ನೋದೆ ಗೊತ್ತಿಲ್ಲ ಎಂದ ಜಿ.ಎಂ.ಸಿದ್ದೇಶ್ವರ್

ದಾವಣಗೆರೆ: ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ GM ಗ್ರೂಪ್ ಮೇಲೆ ಹವಾಲಾ ದಂಧೆ ಆರೋಪ ಕೇಳಿಬಂದಿತ್ತು. ಈ ಬಗ್ಗೆ ನ್ಯೂಸ್​ಫಸ್ಟ್ ಕನ್ನಡ ವರದಿ ಮಾಡಿತ್ತು. ಆದರೀಗ ಸಂಸದ ನ್ಯೂಸ್​​ಫಸ್ಟ್​ಗೆ ಪ್ರತಿಕ್ರಿಯೆ ನೀಡಿದ್ದು, ಆರೋಪ ಅಲ್ಲಗಳೆದಿದ್ದಾರೆ.

ಚುನಾವಣೆ ಹೊತ್ತಲ್ಲಿ ನನ್ನ ಹೆಸರು ಕೆಡಿಸಬೇಕು ಅಂತ ಈ ರೀತಿ ಮಾಡುತ್ತಿದ್ದಾರೆ. ಡ್ರೈವರ್ ಸ್ವಾಮಿ ಯಾರು ಅನ್ನೋದೆ ಗೊತ್ತಿಲ್ಲ. ನಮ್ಮ ತಮ್ಮಂದಿರು ಅಡಿಕೆ ಖರೀದಿ ಮಾಡೋದಕ್ಕೆ ಹೋಗಿದ್ದರು. ಈ ವೇಳೆ ಹಣ ಕಳ್ಳತನ‌ ಆಗಿದೆ. ಆ ಬಗ್ಗೆ ದೂರನ್ನ ಕೂಡ ಅವರು ಕೊಟ್ಟಿದ್ದಾರೆ ಅದನ್ನ ಪೊಲೀಸರು ವಸೂಲಿ ಮಾಡಿದ್ದಾರೆ ಎಂದು ಜಿ.ಎಂ.ಸಿದ್ದೇಶ್ವರ್ ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು, ಈಗ ಚುನಾವಣೆ ಸಮಯ ಸಿದ್ದೇಶ್ವರ ಗೆಲ್ತಾನೆ ಅಂತ ಈ ರೀತಿ ಮಾಡುತ್ತಿದ್ದಾರೆ. ಮುಂಚೆ 40% ಆರೋಪವನ್ನ ಮಾಡುತಿದ್ದರು. ಇದೀಗ ಇದನ್ನ ಮಾಡುತ್ತಿದ್ದಾರೆ. ಲೊಕಸಭಾ ಚುನಾವಣೆ ಬರುತಿದ್ದಂತೆ ಟಿಕೆಟ್ ತಪ್ಪಿಸಬೇಕು, ಅವರನ್ನ ಸೋಲಿಸಬೇಕು ಅಂತ ಈ ರೀತಿ ಮಾಡುತಿದ್ದಾರೆ ಎಂದು ಹೇಳಿದ್ದಾರೆ.

ಸಿದ್ದೇಶ್ವರ ಕಾಲು ತೆಗಿಬೇಕು ಟಿಕೆಟ್ ತಪ್ಪಿಸಬೇಕು ಅಂತಾರೆ. ಊಟದಲ್ಲಿ ವಿಷ ಹಾಕುಬೇಕು ಅಂದುಕೊಂಡಿದ್ದರು. ಅದಕ್ಕೆ ನಾನು ತುಂಬಾ ಹುಷಾರಾಗಿದ್ದೇನೆ. ಅದಕ್ಕೆ ಎಲ್ಲಿ ಕರೆದರು ನಾನು ಹೋಗೋದಿಲ್ಲ. ಆರೋಪ ಮಾಡಿದ ಡ್ರೈವರ್ ಯಾರು ಅಂತ ನನಗೆ ಗೊತ್ತಿಲ್ಲ. ಇದೊಂದು ಶುದ್ಧ ಸುಳ್ಳು ಆರೋಪ ಎಂದ ಸಂಸದ ಹೇಳಿದ್ದಾರೆ.

ನಾನು, ನನ್ನ ತಮ್ಮ ಹವಾಲಾ ಮಾಡ್ತೀವಿ ಅಂತ ಆರೋಪ ಮಾಡಿದ್ದಾರೆ. ಡ್ರೈವರ್ ಅವನೊಬ್ಬ ದೊಡ್ಡ ಕಳ್ಳ. ಉಮೇಶ್, ಮಲ್ಲಿಕಾರ್ಜುನ ಅಡಿಕೆ ಅಂಗಡಿ ಮಾಡಿದ್ದಾರೆ. ಡ್ರೈವರ್​ ಅಡಿಕೆ ಖರೀದಿಗೆ ಹೋದಾಗ ಅಡಿಕೆ ಸಿಕ್ಕಿಲ್ಲ. ಬೆಂಗಳೂರಿನಲ್ಲಿ ಅವರ ತಂಗಿ ಮನೆಗೆ ಹೋಗಿದ್ದಾರೆ. ಕಾರು ಎಲ್ಲೋ ಬಂದು ನಿಲ್ಲಿಸಿದಾಗ 1 ಕೋಟಿ ಲಪಟಾಯಿಸಿದ್ದಾರೆ. ಪೊಲೀಸ್ ಕಂಪ್ಲೇಂಟ್ ಕೂಡ ಆಗಿತ್ತು, 95 ಲಕ್ಷ ವಸೂಲಿ ಮಾಡಿದ್ದಾರೆ. ಈಗ ರಾಜಕೀಯವಾಗಿ ನನ್ನ ಮೇಲೆ ಆರೋಪಿಸುತ್ತಿದ್ದಾರೆ ಎಂದು ಜಿ.ಎಂ.ಸಿದ್ದೇಶ್ವರ್ ಹೇಳಿದ್ದಾರೆ.

ಈ ಹಿಂದೆ 40% ಅಂತ ಆರೋಪ ಮಾಡಿದ್ದರು. ಚುನಾವಣೆಯಲ್ಲಿ ಗೆಲ್ಲುವೆ ಅಂತ ಈ ರೀತಿ ಸೃಷ್ಟಿಸುತ್ತಿದ್ದಾರೆ. ನನ್ನ ಮೇಲೆ ಇಡಿ, ಐಟಿ ರೇಡ್​ ಆಗಬೇಕು ಅಂತಿದ್ದಾರೆ. ನನ್ನ ಮೇಲೆ ಎಲ್ಲವೂ ಆಗಿ ಹೋಗಿದೆ, ನಾನು ನಿರಪರಾಧಿ. ಅಂತಹ ಡ್ರೈವರ್ ಯಾರೂ ನಮ್ಮ ಹತ್ತಿರ ಇಲ್ಲ, ಅವ್ನು ಟ್ಯಾಕ್ಸಿ ಡ್ರೈವರ್ ಎಂದು
ದಾವಣಗೆರೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಏನಿದು ಘಟನೆ?

ಕಳೆದ ವರ್ಷ ಅಕ್ಟೋಬರ್​ ತಿಂಗಳಿನಲ್ಲಿ ಅಡಿಕೆ ಉದ್ಯಮಿಗಳಾದ ಉಮೇಶ್ ಮತ್ತು ಮಲ್ಲಿಕಾರ್ಜುನ ನೀಡಿದ ದೂರಿನ ಅನ್ವಯ 2 ಕೋಟಿ ರೂಪಾಯಿ ಹಣವನ್ನು ಸಾಗಿಸುತ್ತಿದ್ದ ಕಾರನ್ನು ಬೆಂಗಳೂರು ಉಪ್ಪಾರ ಪೊಲೀಸರು ಹಿಡಿದಿದ್ದರು. ಬಳಿಕ ಕಾರ್​ ಡ್ರೈವರ್ ಸ್ವಾಮಿ ಎಂಬಾತನನ್ನು ಬಂಧಿಸಿದ್ದರು. ಬಂಧನ ವೇಳೆ ಕಾರು ಚಾಲಕ ಜಿ.ಎಂ.ಸಿದ್ದೇಶ್ವರ್ ಅವರ ಜಿ.ಎಂ ಗ್ರೂಪ್​ಗೆ ಸೇರಿದ ಕಪ್ಪು ಹಣವೆಂದು ಹೇಳಿದ್ದನು.

ನಂತರ ಡ್ರೈವರ್​ ಸ್ವಾಮಿ ಹವಾಲಾ ದಂಧೆಯನ್ನು ಮುಚ್ಚಿಡಲು ಅಡಿಕೆ ಹಣ ಕಳ್ಳತನವಾಗಿದೆ ಎಂದು ನನ್ನ ಮೇಲೆ ಆರೋಪ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದನು. ಜೊತೆಗೆ ಕಳೆದ 7 ವರ್ಷದಿಂದ ಈ ಹವಾಲಾ ದಂಧೆ ನಡೆಯುತ್ತಿದೆ ಎಂದಿದ್ದನು. ನಾನೇ ಸಾವಿರಾರು ಕೋಟಿ ಹಣವನ್ನು ಬೇರೆ ಜಿಲ್ಲೆಗಳಿಗೆ ಸಾಗಿಸುವುದಾಗಿ ಹೇಳಿದ್ದನು. ಬಳಿಕ ಹವಾಲಾ ದಂಧೆ ಬಗ್ಗೆ ಇಡಿಗೂ ಕೂಡ ಚಾಲಕ ದೂರು ನೀಡಿದ್ದನು. ಸದ್ಯ ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾವಿರಾರು ಕೋಟಿ ಹವಾಲಾ ದಂಧೆ ಆರೋಪ.. ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದ್ದೇನು?

https://newsfirstlive.com/wp-content/uploads/2024/01/G-M-Siddeshwar.jpg

Load More