Advertisment

ಕಾನ್ಸ್​​ಟೇಬಲ್ ಮೇಲೆ ಮಾರಣಾಂತಿಕ ಹಲ್ಲೆ; ಏನಿದು ಕಾಂಗ್ರೆಸ್ ಮುಖಂಡನ ಸಹೋದರರ ಮೇಲೆ ಗಂಭೀರ ಆರೋಪ?

author-image
Gopal Kulkarni
Updated On
ಕಾನ್ಸ್​​ಟೇಬಲ್ ಮೇಲೆ ಮಾರಣಾಂತಿಕ ಹಲ್ಲೆ; ಏನಿದು ಕಾಂಗ್ರೆಸ್ ಮುಖಂಡನ ಸಹೋದರರ ಮೇಲೆ ಗಂಭೀರ ಆರೋಪ?
Advertisment
  • ಕಾರ್ ರೋಡ್ ಮಧ್ಯ ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ವಿಚಾರವಾಗಿ ಹಲ್ಲೆ
  • ಧಾರವಾಡದಲ್ಲಿ ಅಟ್ಟಹಾಸ ಮೆರೆದ ಕೈ ಮುಖಂಡನ ಸಹೋದರರು
  • ಮೂವರನ್ನು ವಶಕ್ಕೆ ಪಡೆದ ಪೊಲೀಸರಿಂದ ಮುಂದುವರಿದ ತನಿಖೆ

ನಾನು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತೇನೆ ಅಂತ ಹೇಳಿದರೂ ಕೂಡ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ವಿದ್ಯಾನಗರಿ ಧಾರವಾಡದಲ್ಲಿ ನಡೆದಿದೆ. ಸಶಸ್ತ್ರ ಮೀಸಲು ಪಡೆಯಲ್ಲಿ ಕಾನ್ಸ್​ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಸವರಾಜ ಕಮತ ಎಂಬುವವರ ಮೇಲೆ ಕಾಂಗ್ರೆಸ್ ಮುಖಂಡನ ಸಹೋದದರರಾದ ಇಕ್ಬಾಲ್, ಅಮೀರ್ ಹಾಗೂ ಸಹಚ ಅಜಮತ್ ಮುಲ್ಲಾ ಮಾರಣಾಂತಿಕ ಹಲ್ಲೆ ನಡೆಸಿದಿದ್ದಾರೆ

Advertisment

ಕಾರ್ ರೋಡ್ ಮಧ್ಯ ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ವಿಚಾರವಾಗಿ ಹಲ್ಲೆ

10ನೇ ತಾರೀಕು ಸಾಯಂಕಾಲ 6 ಗಂಟೆಯ ಸುಮಾರಿಗೆ ಸವದತ್ತಿಯಿಂದ ಟೇಲರ್ ಒಬ್ಬರ ಬಳಿ ಬಸವರಾಜ ಕಮತ ಎಂಬುವವರು ತಮ್ಮ ಸ್ನೇಹಿತನ ಜೊತೆ ಹೊರಟಿದ್ದರು. ಈ ವೇಳೆ ತಮಟಗಾರ ಅವರ ಸಹೋದರರೆಂಬ ಪುಂಡರ ಪಡೆ ದಾರಿ ಮಧ್ಯೆ ಕಾರನ್ನು ನಿಲ್ಲಿಸಿರುತ್ತಾರೆ. ಅದು ಅಲ್ಲದೇ ಬಲಗಡೆ ಬಾಗಿಲನ್ನೂ ಕೂಡ ತೆಗೆದಿರುತ್ತಾರೆ. ಇದನ್ನು ಕಾನ್ಸ್​ಟೇಬಲ್ ಬಸವರಾಜ್ ಪ್ರಶ್ನಿಸಿದ್ದಾರೆ. ಹೀಗೆ ಮಾಡುವುದು ಎಷ್ಟು ಸರಿ ಎಂದು ಕೇಳಿದ್ದಾರೆ. ಇಷ್ಟಕ್ಕೆ ನಮ್ಮನ್ನು ಯಾರು ಅಂತ ತಿಳಿದುಕೊಂಡಿದ್ದೀಯಾ ಎಂದು ಏಕಾಏಕಿ ಮೂವರು ಸೇರಿ ಬಸವರಾಜ್ ಮೇಲೆ ಹಲ್ಲೆ ಮಾಡಿ ಬ್ಲೇಡ್​ನಿಂದ ಮುಖವನ್ನು ಕೊಯ್ದಿದ್ದಾರೆ. ಆರೋಪಿಗಳನ್ನು ಕಾಂಗ್ರೆಸ್ ಮುಖಂಡ‌ ಇಸ್ಮಾಯಿಲ್ ತಮಟಗಾರ ಸಹೋದರರಾದ ಇಕ್ಬಾಲ್, ಅಮೀರ್​ ಹಾಗೂ ಆತನ ಸಹಚರ ಅಜಮತ್ ಮುಲ್ಲಾ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:ಬೆಂಗಳೂರು ಏರ್​ಪೋರ್ಟ್​​ ರಸ್ತೆಯಲ್ಲಿ ಸರಣಿ ಅಪಘಾತ; ಇಬ್ಬರ ಸಾ*ವಿಗೆ ಕಾರಣವಾಯ್ತು ಜಗಳ

publive-image

ಈ ಬಗ್ಗೆ ನ್ಯೂಸ್​ಫಸ್ಟ್​ನೊಂದಿಗೆ ಮಾತನಾಡಿರುವ ಬಸವರಾಜ್​,ಹೀಗೆಲ್ಲಾ ಮಾಡಬಾರದು ಎಂದು ಹೇಳಿ ನಾವು ನಮ್ಮ ಪಾಡಿಗೆ ನಾವು ಬೈಕ್ ಮೇಲೆ ಹೊರಟಿದ್ದೇವು. ಆದರೂ ಕೂಡ ಕಾರ್​ ಚಲಾಯಿಸಿಕೊಂಡು ಬಂದು ನಮ್ಮನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. ಕೊನೆಗೆ ಮುಖಕ್ಕೆ ಬ್ಲೇಡಿನಿಂದ ಬೀಸಿದರು. ನಾನು ಮುಖವನ್ನು ಕಳೆಗೆ ಮಾಡಿದ್ದರಿಂದ ಮುಖಕ್ಕೆ ಬೀಳಬೇಕಾಗಿದ್ದ ಬ್ಲೇಡ್, ಕಣ್ಣಿನ ಪಕ್ಕದಿಂದ ಜಾರಿಕೊಂಡು ಹೋಗಿದೆ. ಎಂದು ಹೇಳಿದ್ದಾರೆ.

Advertisment

ಇನ್ನು ಹಲ್ಲೆಗೆ ಒಳಗಾದ ಬಸವರಾಜ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಉಪನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಮೂವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ‌ಬಸವರಾಜ ಮೇಲೆ ಬ್ಲೇಡ್‌ನಿಂದ ಹಲ್ಲೆ ನಡೆಸಿರುವ ಆರೋಪಿಗಳ ವಿರುದ್ಧ ಧಾರವಾಡ ಉಪನಗರ ಠಾಣೆಯಲ್ಲಿ 307 ಅಡಿ ದೂರು ದಾಖಲಾಗಿದೆ. ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಆರೋಪಿಗಳನ್ನು ಜೈಲು ಪಾಲಾಗುವಂತೆ ಮಾಡಿದೆ.

ಇದನ್ನೂ ಓದಿ: ಪ್ರಯಾಣಿಕರೇ ಅಲರ್ಟ್, ಏರ್‌ಪೋರ್ಟಲ್ಲಿ ನಕಲಿ ಓಲಾ ಕ್ಯಾಬ್ ! ನಡು ರಾತ್ರಿಯಲ್ಲಿ ಆ ಯುವತಿ ಬಚಾವ್ ಆಗಿದ್ದೇ ರೋಚಕ

ಮಾಡಿದುಣ್ಣೋ ಮಾರಾಯ ಎನ್ನುವ ಹಾಗೆ ಪೊಲೀಸ್​ ಕಾನ್ಸ್​ಟೇಬಲ್​ ಮೇಲೆ ಹಲ್ಲೆ ಮಾಡಿದ ಮೂವರು ಜೈಲು ಸೇರಿದ್ದಾರೆ.ಆದರೆ ಈ ಘಟನೆ ಮೂಲಕ ಧಾರವಾಡದಲ್ಲಿ ಜನರನ್ನ ರಕ್ಷಣೆ ಮಾಡೋ ಆರಕ್ಷಕರಿಗೆ ರಕ್ಷಣೆ ಇಲ್ವಾ ಅನ್ನೋ ಪ್ರಶ್ನೆಯೊಂದಂತೂ ಮೂಡಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment