newsfirstkannada.com

ಕುತೂಹಲ ಮೂಡಿಸಿದ ದಳಪತಿಗಳ ದೆಹಲಿ ಭೇಟಿ.. ಮೋದಿ ಜೊತೆ ‘ಲೋಕ’ ಕ್ಷೇತ್ರಗಳ ಬಗ್ಗೆ ಚರ್ಚೆ ಮಾಡ್ತಾರಾ ದೇವೇಗೌಡರು?

Share :

Published December 21, 2023 at 5:59am

    ಬಿಜೆಪಿ ಚಾಣಕ್ಯ ಅಮಿತ್​ ಶಾ ಜೊತೆ ದಳಪತಿ ಅಂತಿಮ ಮಾತುಕತೆ

    ಪ್ರಧಾನಿ ಮೋದಿರನ್ನ ಭೇಟಿ ಮಾಡಿ ಏನನ್ನು ಚರ್ಚೆ ಮಾಡುವರು..?

    ಸದ್ಯ ಕತೂಹಲ ಮೂಡಿಸಿರುವ ಜೆಡಿಎಸ್​ ನಾಯಕರ ದೆಹಲಿ ಭೇಟಿ

ರಾಜ್ಯದಲ್ಲಿ ಹೊಂದಾಣಿಕೆ ಮೂಲಕ ಸಂಸತ್​ ಸಮರಕ್ಕೆ ಕಮಲ-ದಳ ಅಡಿ ಇಟ್ಟಿದೆ. ಇನ್ನೇನಿದ್ದರೂ, ಅಖಾಡಗಳ ಆಯ್ಕೆ ಬಾಕಿದ್ದು, ಕ್ಷೇತ್ರ ಹಂಚಿಕೆಗೆ ಮುಹೂರ್ತ ಫಿಕ್ಸ್​ ಆಗಿದೆ. ದಿಢೀರ್​ ದೆಹಲಿಗೆ ಹೋಗಿರುವ ದಳಪತಿ ಅಮಿತ್​ ಶಾ ಜೊತೆ ಸೀಟು ಹಂಚಿಕೆ ಬಗ್ಗೆ ಅಂತಿಮ ಮಾತುಕತೆ ನಡೆಸಲಿದ್ದಾರೆ. ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಲೋಕ ಸಮರ ಗೆಲ್ಲಲು ರಾಜ್ಯ ಪ್ರವಾಸಕ್ಕೆ ಹಣಿಯಾಗಿದ್ದಾರೆ.

ಕಮಲ-ದಳ ನಡುವೆ ಕ್ಷೇತ್ರ ಹಂಚಿಕೆಗೆ ಕೂಡಿಬಂತ ಕಾಲ!

ಕರ್ನಾಟಕದ ಅಸೆಂಬ್ಲಿ ಅಖಾಡದಲ್ಲಿ ಕಾಂಗ್ರೆಸ್​ನ ಗ್ಯಾರೆಂಟಿ ಮುಂದೆ ಸೋತು ಸುಣ್ಣವಾಗಿದ್ದ ಬಿಜೆಪಿ- ಜೆಡಿಎಸ್​, ಲೋಕಸಭೆ ಚುನಾವಣೆಗೆ ಪುಟಿದೇಳಲು ಮೈತ್ರಿ ಮಾಡಿಕೊಂಡಿವೆ. ಈಗಾಗಲೇ ಈ ಬಗ್ಗೆ ದಳಪತಿಗಳು ಕೂಡ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಆದ್ರೆ, ಸೀಟು ಹಂಚಿಕೆ ಬಗ್ಗೆ ಯಾವುದೂ ಫೈನಲ್​ ಆಗಿರಲಿಲ್ಲ. ಇದೀಗ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಕೇಸರಿ ಪಡೆಯಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಇದೀಗ ಕರ್ನಾಟಕದಲ್ಲಿ ಬಿಜೆಪಿ ಜತೆ ಸೀಟು ಹಂಚಿಕೆ ವಿಚಾರವಾಗಿ ದಳಪತಿ ಕುಮಾರಸ್ವಾಮಿ, ಬಿಜೆಪಿ ಹೈಕಮಾಂಡ್​ ಜೊತೆ ಚರ್ಚಿಸಲು ದಿಢೀರ್​ ದೆಹಲಿಗೆ ದೌಡಾಯಿಸಿದ್ದಾರೆ.

ಹಳೆ ಮೈಸೂರು ಭಾಗದ 5 ರಿಂದ 7 ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ದಳಪತಿ, ಕಮಲಾದಪತಿಗಳ ಜೊತೆ ಚೌಕಾಸಿ ಮಾಡಿದ್ರು. ಇದೀಗ ಕಮಲ-ದಳ ನಡುವೆ ಕ್ಷೇತ್ರ ಹಂಚಿಕೆಗೆ ಕಾಲ ಕೂಡಿ ಬಂದಂತೆ ಕಾಣ್ತಿದೆ. ಹೀಗಾಗಿ ಅಮಿತ್​ ಶಾ ಜೊತೆ ಅಂತಿಮ ಮಾತುಕತೆ ನಡೆಸಲು ಹೆಚ್​.ಡಿ.ಕುಮಾರಸ್ವಾಮಿ ದೆಹಲಿಗೆ ಹೋಗಿದ್ದಾರೆ. ಹಾಗಾದ್ರೆ ಕುಮಾರಸ್ವಾಮಿ ಕಣ್ಣಿಟ್ಟಿರು ಕ್ಷೇತ್ರಗಳು ಯಾವುವು ಅಂದ್ರೆ.

ಕುಮಾರಸ್ವಾಮಿ ಕಣ್ಣಿಟ್ಟ ‘ಕ್ಷೇತ್ರ’ಗಳು!

1. ಮಂಡ್ಯ
2. ಹಾಸನ
3. ಕೋಲಾರ
4. ಮೈಸೂರು-ಕೊಡಗು
5. ಚಿಕ್ಕಬಳ್ಳಾಪುರ
6. ತುಮಕೂರು

ಈ 6 ಕ್ಷೇತ್ರಗಳ ಪೈಕಿ ದಳಪತಿ ಕುಮಾರಸ್ವಾಮಿ 5 ಕ್ಷೇತ್ರ ಪಡೆದುಕೊಳ್ಳುವ ಚಿಂತನೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಮಿತ್​ ಶಾರನ್ನು ಭೇಟಿಯಾಗಿ ಮಾತುಕತೆ ನಡೆಸುವ ಸಾಧ್ಯತೆ ಇದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಯಾವುದೇ ಸೀಟು ಹಂಚಿಕೆ ಕುರಿತು ಚರ್ಚೆಗೆ ಹೋಗ್ತಿಲ್ಲ. ಬದಲಾಗಿ ವೈಯಕ್ತಿಕ ಕೆಲಸದ ನಿಮಿತ್ತ ಹೋಗುತ್ತಿದ್ದೇನೆ ಎಂದು ಮಾತು ಬದಲಿಸಿದ್ದಾರೆ.

ಯಾವುದೇ ಕ್ಷೇತ್ರದ ಸೀಟು ಹಂಚಿಕೆಗೆ ಹೋಗುತ್ತಿಲ್ಲ. ನಾನು ಡೆಲ್ಲಿಗೆ ಹೋಗೋದು ವಿಶೇಷನಾ?. ಅಲ್ಲಿಗೆ ಹೋಗುತ್ತಿರುವುದು ಯಾವುದೇ ವಿಶೇಷವಿಲ್ಲ. ನನ್ನ ವೈಯಕ್ತಿಕ ಕೆಲಸದ ಮೇಲೆ ಹೋಗುತ್ತಿದ್ದೇನೆ.

ಹೆಚ್​.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

ಹೆಚ್​ಡಿಕೆ ಹೇಳಿಕೆ ಸಮರ್ಥಿಸಿಕೊಂಡ ಆರ್​.ಅಶೋಕ್​

ಇನ್ನು ವಿಪಕ್ಷ ನಾಯಕ ಆರ್​.ಅಶೋಕ್​, ಲೋಕಸಭೆ ಚುನಾವಣೆ ಬಳಿ ಸರ್ಕಾರ ಇರಲ್ಲ ಎಂಬ ಹೆಚ್​ಡಿಕೆ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾವು ಸರ್ಕಾರ ಕೆಡವಲ್ಲ. ಅದಾಗಿಯೇ ಸರ್ಕಾರ ಬಿದ್ದು ಹೋಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.

ಮುಂದಿನ ವಾರದಿಂದ ವಿಜಯೇಂದ್ರ ರಾಜ್ಯ ಪ್ರವಾಸ

ರಾಜ್ಯದಲ್ಲಿ 28 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಅದಕ್ಕಗಾಗಿ ರಣತಂತ್ರ ರೂಪಿಸಲು ಮುಂದಾಗಿದ್ದಾರೆ. ಮುಂದಿನ ವಾರದಿಂದ ರಾಜ್ಯದ 28 ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದು, ಸ್ಥಳೀಯ ನಾಯಕರ ಅಭಿಪ್ರಾಯ ಕಲೆ ಹಾಕುವ ಲೆಕ್ಕಾಚಾರ ಹಾಕಿದ್ದಾರೆ. ಈ ಮೂಲಕ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಲೋಕಸಭೆ ಟಿಕೆಟ್​ ಹಂಚಿಕೆ ವೇಳೆ ಯಾವುದೇ ಗೊಂದಲ ಆಗದಂತೆ ಎಚ್ಚರಿಕೆ ವಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ತಕ್ಕ ಬುದ್ಧಿ ಕಲಿಸಲೇಬೇಕೆಂದು, ಬಿಜೆಪಿ ಮತ್ತು ಜೆಡಿಎಸ್​ ಜೋಡೆತ್ತಿನಂತೆ ಸಮರಭ್ಯಾಸ ಶುರು ಮಾಡಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುತೂಹಲ ಮೂಡಿಸಿದ ದಳಪತಿಗಳ ದೆಹಲಿ ಭೇಟಿ.. ಮೋದಿ ಜೊತೆ ‘ಲೋಕ’ ಕ್ಷೇತ್ರಗಳ ಬಗ್ಗೆ ಚರ್ಚೆ ಮಾಡ್ತಾರಾ ದೇವೇಗೌಡರು?

https://newsfirstlive.com/wp-content/uploads/2023/12/HDD_MODI.jpg

Load More