newsfirstkannada.com

ಅಯೋಧ್ಯೆಯಲ್ಲಿ ರಾಮನಿಗೆ ಮುಸ್ಲಿಮರಿಂದ ಹೂವಿನ ಸುರಿಮಳೆ; ಮಾಜಿ ಪ್ರಧಾನಿ ದೇವೇಗೌಡ

Share :

Published January 21, 2024 at 3:55pm

Update January 21, 2024 at 3:58pm

  ನಾಳೆ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ!

  ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್​​.ಡಿ ದೇವೇಗೌಡ ಭಾಗಿ

  ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ್ರು ಹೇಳಿದ್ದೇನು ಗೊತ್ತಾ..?

ಬೆಂಗಳೂರು: ನಾಳೆ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ದೇಶದ ಹಲವು ರಾಜ್ಯಗಳಲ್ಲಿ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಆದರೆ, ಕರ್ನಾಟಕದಲ್ಲಿ ಸರ್ಕಾರಿ ರಜೆ ಘೋಷಣೆ ಮಾಡದ ಬಗ್ಗೆ ಮಾಜಿ ಪ್ರಧಾನಿ ಹೆಚ್​​.ಡಿ ದೇವೇಗೌಡ ಅವರು ಮಾತಾಡಿದ್ದಾರೆ.

ನಾಳೆ ರಜೆ ಘೋಷಣೆ ಮಾಡಿ ಎಂದು ನಾನು ಚರ್ಚೆ ಮಾಡಲ್ಲ. ಅದರ ಸಹವಾಸವೇ ನನಗೆ ಬೇಡ. ರಾಜಕೀಯದಲ್ಲಿ ನಾವು ಲಾಭ ನಷ್ಟದ ಬಗ್ಗೆ ಯೋಚನೆ ಮಾಡಬಾರದು. ಯಾವುದೇ ಕಾರಣಕ್ಕೂ ದ್ವೇಷ, ಅಸೂಯೆ ಮಾಡಬಾರದು ಎಂದರು.

ಅಯೋಧ್ಯೆಯಲ್ಲಿ ನಡೆಯೋ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಕಾಶ್ಮೀರದ ಮುಸ್ಲಿಮರು ಹೂವು ಕಳಿಸಿದ್ದಾರೆ. ಪಶ್ಚಿಮ ಬಂಗಾಳದ ಜನ ಕೂಡ ಹೂವಿನ ಮಾಲೆ ಕಟ್ಟಿಕೊಟ್ಟಿದ್ದಾರೆ. ಅನೇಕ ರಾಜ್ಯಗಳಿಂದ ಅಯೋಧ್ಯೆಗೆ ವಿಶೇಷ ಉಡುಗೊರೆಗಳು ಬಂದಿವೆ. ಹಿಂದೂಗಳು ಬಿಡಿ, ಮುಸ್ಲಿಮರೇ ಹೂವು ಮಳೆ ಸುರಿಸುತ್ತಿದ್ದಾರೆ. ಎಲ್ಲರೂ ಎಲ್ಲವನ್ನೂ ಅರ್ಥ ಮಾಡಿಕೊಳ್ಳಬೇಕಿದೆ. ಯಾರಿಗೆ ಯಾರು ಪ್ರೇರಣೆ ಮಾಡಲ್ಲ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆಯಲ್ಲಿ ರಾಮನಿಗೆ ಮುಸ್ಲಿಮರಿಂದ ಹೂವಿನ ಸುರಿಮಳೆ; ಮಾಜಿ ಪ್ರಧಾನಿ ದೇವೇಗೌಡ

https://newsfirstlive.com/wp-content/uploads/2023/11/HD_DEVEGOWDA.jpg

Load More