newsfirstkannada.com

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಆಸ್ಪತ್ರೆಯಿಂದ ಡಿಸ್ಚಾರ್ಜ್‌; ಆರೋಗ್ಯ ಈಗ ಹೇಗಿದೆ?

Share :

Published February 18, 2024 at 4:20pm

Update February 18, 2024 at 4:21pm

  ಮಣಿಪಾಲ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಹೆಚ್​.ಡಿ.ದೇವೇಗೌಡ

  ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಹೆಚ್​ಡಿಡಿ

  ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ಮಾಜಿ ಪ್ರಧಾನಿಗೆ ವಿಶ್ರಾಂತಿ

ಬೆಂಗಳೂರು: ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ. ಸಂಸತ್ ಅಧಿವೇಶನಕ್ಕೆ ಹೋಗಿ ಬಂದ ಬಳಿಕ ಶೀತ, ಕೆಮ್ಮು, ಜ್ವರದಿಂದ ಬಳಲುತ್ತಿರೋ ಹೆಚ್​.ಡಿ ದೇವೇಗೌಡರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಇದನ್ನು ಓದಿ: ದೇವೇಗೌಡರಿಗೆ ಉಸಿರಾಟದ ಸಮಸ್ಯೆ; ಮಣಿಪಾಲ್ ಆಸ್ಪತ್ರೆ ವೈದ್ಯರು ಹೇಳಿದ್ದೇನು..?

ಸದ್ಯ ಹೆಚ್​.ಡಿ ದೇವೇಗೌಡರನ್ನು ಇಂದು ಮಧ್ಯಾಹ್ನ 3:30ಕ್ಕೆ ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ. ಕಳೆದು ಮೂರು ದಿನಗಳಿಂದ ಹಿರಿಯ ವೈದ್ಯ ಡಾ. ಸತ್ಯನಾರಾಯಣ ಮೈಸೂರು ನೇತೃತ್ವದಲ್ಲಿ ಹೆಚ್​.ಡಿ ದೇವೇಗೌಡರು ಚಿಕಿತ್ಸೆ  ಪಡೆಯುತ್ತಿದ್ದರು. ಸದ್ಯ ಪದ್ಮನಾಭನಗರದ ನಿವಾಸಕ್ಕೆ ಹೆಚ್‌.ಡಿ ದೇವೇಗೌಡರನ್ನು ಕಳುಹಿಸಲಾಗಿದೆ.

ದೆಹಲಿಗೆ ಪ್ರಯಾಣಿಸಿದ ಬಳಿಕ ವಿಪರೀತ ಚಳಿಯ ಕಾರಣ ದೇವೇಗೌಡರ ಆರೋಗ್ಯದಲ್ಲಿ ಏರುಪೇರಾಗಿದ್ದು ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆದಿದ್ದರು. ಕಳೆದ 3 ದಿನಗಳಿಂದ ಶೀತ, ಕೆಮ್ಮು, ಜ್ವರದಿಂದ ಬಳಲುತ್ತಿದ್ದ ಗೌಡರಿಗೆ ಅತಿಯಾದ ಕೆಮ್ಮಿನಿಂದ ಶ್ವಾಸಕೋಶದಲ್ಲಿ ಇನ್ಫೆಂಕ್ಷನ್ ಆಗಿತ್ತು. ಉಸಿರಾಟದ ಸಮಸ್ಯೆ ಇರುವ ಕಾರಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.. ಸದ್ಯ ದೇವೇಗೌಡರ ಆರೋಗ್ಯ ಸ್ಥಿರವಾಗಿದ್ದು ಅವರನ್ನು ಮಣಿಪಾಲ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಆಸ್ಪತ್ರೆಯಿಂದ ಡಿಸ್ಚಾರ್ಜ್‌; ಆರೋಗ್ಯ ಈಗ ಹೇಗಿದೆ?

https://newsfirstlive.com/wp-content/uploads/2023/08/HDD_DKS_1.jpg

Load More