VIDEO: ಹಾಸನದಲ್ಲಿ ಮೊಮ್ಮಗನ ಮೇಲೆ ಸಿಟ್ಟಿಗೆದ್ದ ದೊಡ್ಡಗೌಡ್ರು; ಈ ಉಗ್ರ ರೂಪಕ್ಕೆ ಕಾರಣವೇನು?

author-image
admin
Updated On
VIDEO: ಹಾಸನದಲ್ಲಿ ಮೊಮ್ಮಗನ ಮೇಲೆ ಸಿಟ್ಟಿಗೆದ್ದ ದೊಡ್ಡಗೌಡ್ರು; ಈ ಉಗ್ರ ರೂಪಕ್ಕೆ ಕಾರಣವೇನು?
Advertisment
  • ಪ್ರಜ್ವಲ್​ ರೇವಣ್ಣ ಪರ ಮತಯಾಚಿಸುತ್ತಿದ್ದಾಗ ಗದರಿದ ದೇವೇಗೌಡರು
  • ಗುಡುಗಿದ ದೇವೇಗೌಡರನ್ನು ನೋಡಿ ತಬ್ಬಿಬ್ಬಾಗಿ ನಿಂತ ಜೆಡಿಎಸ್‌ ನಾಯಕರು
  • ಮಂಡ್ಯ, ಕೋಲಾರ, ಹಾಸನ ಗೆದ್ದು ಜೆಡಿಎಸ್ ಎಲ್ಲಿ ಅನ್ನೋರಿಗೆ ಉತ್ತರ ಎಂದ HDD

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಇವತ್ತು ಜೆಡಿಎಸ್ ನಾಯಕರು ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಸುವುದರ ಜೊತೆಗೆ ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು ಕಾಂಗ್ರೆಸ್ ವಿರುದ್ಧ ಅಬ್ಬರದ ಮಾತುಗಳನ್ನಾಡಿದ್ದಾರೆ. ಪ್ರಜ್ವಲ್ ರೇವಣ್ಣ ಪರ ಱಲಿ ಮಾಡುವಾಗ ಮೊಮ್ಮಗನ ಮೇಲೆ ದೇವೇಗೌಡರು ಕೆಂಡಾಮಂಡಲರಾದ ಘಟನೆ ನಡೆದಿದೆ.

ಪ್ರಜ್ವಲ್​ ರೇವಣ್ಣ ಪರ ಮತಯಾಚಿಸುತ್ತಿದ್ದ ಹೆಚ್​.ಡಿ ದೇವೇಗೌಡರು ಪ್ರಚಾರದ ವಾಹನದ ಮೇಲೆ ಸಿಕ್ಕಾಪಟ್ಟೆ ಗರಂ ಆದರು. ಡಿ.ಜೆ ಸೌಂಡ್​ ನಿಲ್ಲಿಸುವಂತೆ ಎಷ್ಟೇ ಹೇಳಿದರು ಕಾರ್ಯಕರ್ತರು ಆಫ್​ ಮಾಡಲಿಲ್ಲ. ಇದರಿಂದ ಗರಂ ಆದ ಗೌಡ್ರು ಪಕ್ಕದಲ್ಲಿ ನಿಂತಿದ್ದ ಪ್ರಜ್ವಲ್​ಗೆ ಕೈ ಎತ್ತಿ ಗದರಿದರು. ಒಂದು ಕ್ಷಣ ತಾಳ್ಮೆ ಕಳೆದುಕೊಂಡು ಡಿ.ಜೆ ಸೌಂಡ್ ನಿಲ್ಲಿಸಲು ಗದರಿದರು. ದೇವೇಗೌಡರ ಉಗ್ರರೂಪಕ್ಕೆ ಜೆಡಿಎಸ್‌ ನಾಯಕರು ತಬ್ಬಿಬ್ಬಾಗಿ ನಿಂತರು.

publive-image

ಱಲಿಯಲ್ಲಿ ಮಾತನಾಡಿದ ಹೆಚ್‌.ಡಿ ದೇವೇಗೌಡರು, ಇದು ನನ್ನ ನಾಯಕತ್ವದಲ್ಲಿ ನಡೆಯುವ ಚುನಾವಣೆ ಅಲ್ಲ. ಮೋದಿ ನಾಯಕತ್ವದಲ್ಲಿ ನಡೆಯುವ ಚುನಾವಣೆ. ಕೇವಲ ಹಾಸನದಲ್ಲಷ್ಟೇ ಅಲ್ಲ ಮಂಡ್ಯ, ಕೋಲಾರದಲ್ಲೂ ಜೆಡಿಎಸ್ ಸ್ಪರ್ಧೆ ಮಾಡಿದೆ. ಈ ಜೆಡಿಎಸ್ ಮುಗಿಸುತ್ತಾನೆ ಎಂದು ಕಾಂಗ್ರೆಸ್‌ವರು ಹೇಳಿದ್ದಾರೆ. ಮುಖ್ಯಮಂತ್ರಿ ಜೆಡಿಎಸ್ ಎಲ್ಲಿದೆ, ಜೆಡಿಎಸ್ ಇಲ್ಲ ಅಂತಾರೆ. ಅವರಿಗೆ ಎಲ್ಲಿದೆ ಅಂತ ತೋರಿಸಬೇಕು ಎಂದು ಗುಡುಗಿದ್ದಾರೆ.

ಇದನ್ನೂ ಓದಿ: ಹೇಮಾ ಮಾಲಿನಿ ಬಗ್ಗೆ ‘ಸೆಕ್ಸಿ’ ಕಾಮೆಂಟ್.. ಸುರ್ಜೇವಾಲಾ ಮೇಲೆ ಮುಗಿಬಿದ್ದ ಬಿಜೆಪಿ; ಅಸಲಿಗೆ ಆಗಿದ್ದೇನು?

ಎಲ್ಲಿ ಮೂರು ಕಡೆ ಜೆಡಿಎಸ್ ಸ್ಪರ್ಧೆ ಮಾಡಿದೆಯೋ ಅಲ್ಲಿ ಕಾಂಗ್ರೆಸ್‌ ಪಕ್ಷವನ್ನು ನೆಲಸಮ ಮಾಡುತ್ತೇವೆ. ಆರ್‌ಆರ್‌ಎಸ್ ಹಿನ್ನೆಲೆಯಿಂದ ಬಂದಿರುವ ಬಿಜೆಪಿ ಕಾರ್ಯಕರ್ತರು ಹಣಕ್ಕೆ ಕೆಲಸ ಮಾಡಲ್ಲ. ಈ ದೇಶಕ್ಕಾಗಿ ಕೆಲಸ ಮಾಡುತ್ತಾರೆ, ಈ ದೇಶದ ರಕ್ಷಣೆಗೆ ಹೋರಾಟ ಮಾಡುತ್ತಾರೆ. ಕುಮಾರಸ್ವಾಮಿ, ಪ್ರಜ್ವಲ್‌ರೇವಣ್ಣ, ಮಲ್ಲೇಶ್ ಬಾಬು ಈ ಮೂರು ಜನರನ್ನು ತೆಗೆದೆರೆ ಜೆಡಿಎಸ್ ಮುಗಿಯುತ್ತೆ ಅಂದುಕೊಂಡಿದ್ದಾರೆ. ಮೂರು ಸ್ಥಾನವನ್ನು ಗೆದ್ದು ನರೇಂದ್ರಮೋದಿಯವರಿಗೆ ಶಕ್ತಿ ನೀಡುತ್ತೇವೆ ಎಂದು ದೇವೇಗೌಡರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment