Advertisment

ಸುಮಲತಾ ಮನೆಗೆ HDK ಭೇಟಿ.. ಅಲ್ಲಿ ಏನೆಲ್ಲಾ ಚರ್ಚೆ ಆಯ್ತು? ಶತ್ರುತ್ವಕ್ಕೆ ತಿಲಾಂಜಲಿ ಹಾಡಿದ್ರಾ? ಕಂಪ್ಲೀಟ್​ ಡಿಟೇಲ್ಸ್​ ಇಲ್ಲಿದೆ

author-image
AS Harshith
Updated On
ಮಂಡ್ಯ ರಾಜಕೀಯಕ್ಕೆ ಹೊಸ ಟ್ವಿಸ್ಟ್​​ ಕೊಟ್ಟ ಸುಮಲತಾ ಅಂಬರೀಶ್; ಮತದಾನಕ್ಕೂ ಮುನ್ನ ಹೇಳಿದ್ದೇನು?
Advertisment
  • ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ದ.. ಬದಲಾಗುತ್ತಾ ರಣಕಣ?
  • ಸ್ವಾಭಿಮಾನದ ವಿರುದ್ಧ ಪ್ರಯೋಗಿಸಿದ ಭಾವನಾತ್ಮಕ ಅಸ್ತ್ರ
  • 1 ಗಂಟೆಗೂ ಹೆಚ್ಚು ಕಾಲ ಹೆಚ್​ಡಿಕೆ ಮತ್ತು ಸುಮಲತಾ ಚರ್ಚೆ

ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಒಂದಾಗುವ ಸಮಯ ಬಂದಿದೆ. ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಖಚಿತವಾಗಿದೆ. ಈ ಬೆನ್ನಲ್ಲೆ ಆಪ್ತರ ಜೊತೆ ಸಭೆಯನ್ನ ಮಾಡಿದ್ದ ಸುಮಲತಾ ನಡೆ ಬಗ್ಗೆ ಬಿಜೆಪಿಗೆ ಟೆನ್ಷನ್ ಇತ್ತು. ಈಗ ಸ್ವತಃ ಕುಮಾರಸ್ವಾಮಿಯೇ ಅಖಾಡಕ್ಕೆ ಇಳಿದಿದ್ದು, ಮಂಡ್ಯ ರಣರಂಗದ ಚಿತ್ರವೇ ಬದಲಾಯಿಸಿದೆ. ಅಷ್ಟಕ್ಕೂ ಅಂಬಿ ನಿವಾಸದಲ್ಲಿ ಏನೆಲ್ಲಾ ಚರ್ಚೆ ಆಗಿದೆ? ಈ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ.

Advertisment

ಇದು ಶಸ್ತ್ರತ್ಯಾಗವಲ್ಲ. ಶರಣಾಗತಿಯೂ ಅಲ್ಲ. ಸಾಮ ದಂಡ, ಭೇದ. ಈ ಮೂರಕ್ಕೂ ಮೀರಿದ ದಾಳ. ಅದು ಸ್ವಾಭಿಮಾನದ ವಿರುದ್ಧ ಪ್ರಯೋಗಿಸಿದ ಭಾವನಾತ್ಮಕ ಅಸ್ತ್ರ. ಇದರ ಆಳ ಅಗಲ ಬಲ್ಲವರೇ ಬಲ್ಲರು. ರಾಜಕೀಯದಲ್ಲಿ ನೂರಿತ ಈಜುಪಟುಗೆ ಮಾತ್ರ ಇದರ ಸತ್ಯಾನ್ವೇಷಣೆಯ ಅಸಲೀ ಸತ್ಯ ದರ್ಶನ ಸಾಧ್ಯ. ಸದ್ಯಕ್ಕೆ ಮಂಡ್ಯದ ರಣಾಂಗಣ ಪ್ರವೇಶಕ್ಕೆ ಸಜ್ಜಾಗಿರುವ ದಳಪತಿ, ಚಕ್ರವ್ಯೂಹ ಪ್ರವೇಶಕ್ಕೂ ಮುನ್ನವೇ ಸ್ವಾಭಿಮಾನಿಯ ಗೃಹಪ್ರವೇಶ ಮಾಡಿ ಸಂಧಾನಕ್ಕೆ ಮುನ್ನುಡಿ ಬರೆದಿದ್ದಾರೆ.

ಹೆಚ್​ಡಿಕೆ ಹೂಡಿದ ಮಿತ್ರತ್ವ ಅಸ್ತ್ರಕ್ಕೆ ಬೆಚ್ಚಿಬಿದ್ದ ವಿರೋಧಿಪಡೆ!

ಇದು ಮಂಡ್ಯ. ಇಲ್ಲಿ ಉರುಳಿದ ದಾಳದಷ್ಟು ಬೇರೆಲ್ಲೂ ಉರುಳದು. ಇಲ್ಲಿನ ರಾಜಕೀಯ ಚೆಸ್​ಬೋರ್ಡ್​​​ ಅರಿಯೋ ಹೊತ್ತಿಗೆ ರಿಸಲ್ಟ್​​ ಅರಿದು ಆಟ ಮುಗಿಸಿರುತ್ತೆ. 2019ರಲ್ಲಿ ಬಿದ್ದ ಅಸ್ತಿತ್ವದ ಪೆಟ್ಟಿಗೆ ವಿಧಾನಸಭೆಯಲ್ಲಿ ದಳವನ್ನ ನಾಮವಶೇಷಕ್ಕೆ ತಳ್ಳಿದೆ. ಗಾಯಗೊಂಡ ಸಿಂಹನಂತೆ ಏದುಸಿರುವ ಬಿಡ್ತಿರುವ ಹೆಚ್​ಡಿಕೆ, ಧೂಳಿನಿಂದ ದಳ ಮೇಲೆತ್ತಲು ಮಂಡ್ಯ ಕಣದಲ್ಲಿ ಧೂಳೆಬ್ಬಿಸಬೇಕಿದೆ. ಇದಕ್ಕಾಗಿ ಸ್ವಾಭಿಮಾನಿ ಸುಮಲತಾ ಮನೆಗೆ ಭೇಟಿ ಕೊಟ್ಟು ಶತ್ರುತ್ವಕ್ಕೆ ತಿಲಾಂಜಲಿ ನೀಡಿದ್ದಾರೆ.. ಜೆ.ಪಿ.ನಗರದ ಅಂಬಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.. 1 ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದಾರೆ.

ಹೆಚ್​​.ಡಿ.ಕುಮಾರಸ್ವಾಮಿ : ನೋಡಿ ಸುಮಲತಾ ಅವರೇ ಹಳೇದೆಲ್ಲಾ ಆಗಿದ್ದಾಯ್ತು. ಈಗ ಅದೆನ್ನೆಲ್ಲಾ ಮರೆಯುವ ಸಮಯ.
ಸುಮಲತಾ : ಹೌದು ಜಗಳ ಗಲಾಟೆ ಸಾಕಾಗಿದೆ.
ಹೆಚ್​​.ಡಿ.ಕುಮಾರಸ್ವಾಮಿ : ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಕೈಬಲ ಪಡಿಸಬೇಕಿದೆ. ಏನಂತಿರಿ.
ಸುಮಲತಾ : ಮೊದಲಿನಿಂದಲೂ ನಾನು ಅದನ್ನೇ ಹೇಳ್ತಿರೋದು.
ಹೆಚ್​​.ಡಿ.ಕುಮಾರಸ್ವಾಮಿ : ಅದಕ್ಕೆ ಈ ಸಲ ನಾವೆಲ್ಲಾ ಮೈತ್ರಿಧರ್ಮ ಪಾಲನೆ ಮಾಡಬೇಕಿದೆ. ನಮ್ಮ ಅಸಮಧಾನದಿಂದ ಕಾಂಗ್ರೆಸ್​ಗೆ ವರದಾನ ಆಗೋದು ಬೇಡ.
ಸುಮಲತಾ : ಅದು ನಿಜ, ಆದ್ರೆ ನಮ್ಮ ಪರಿಸ್ಥಿತಿ, ಬೆಂಬಲಿಗರ ಗತಿ ಬಗ್ಗೆ ವಿಚಾರ ಮಾಡ್ಬೇಕಲ್ಲ.
ಹೆಚ್​​.ಡಿ.ಕುಮಾರಸ್ವಾಮಿ : ಇಲ್ಲ, ನಾವೆಲ್ಲರು ನಿಮ್ಮ ಜೊತೆ ಇರುತ್ತೇವೆ. ಎಲ್ಲರು ಸೇರಿ ಒಗ್ಗಟ್ಟಾಗಿ ಎಲೆಕ್ಷನ್​​ ಗೆಲ್ಲಬೇಕಿದೆ.
ಸುಮಲತಾ : ಕುಮಾರಸ್ವಾಮಿ ಅವರೇ ನಾನು ಮೊದಲೇ ಹೇಳಿದ್ದೀನಿ. ಏಪ್ರಿಲ್​ 3ರಂದು ನಿರ್ಧಾರ ಬೆಂಬಲಿಗರ ಜೊತೆ ಸಭೆ ಇದೆ. ಸಭೆ ಬಳಿಕವೇ ಮಂಡ್ಯದಲ್ಲಿ ಈ ಬಗ್ಗೆ ಘೋಷಣೆ ಮಾಡ್ತೀನಿ.
ಹೆಚ್​​.ಡಿ.ಕುಮಾರಸ್ವಾಮಿ : ಸರಿ ನಿಮ್ಮ ನಿರ್ಧಾರ ಸಕಾರಾತ್ಮಕವಾಗಿ ತಗೊಳ್ತೀರಿ ಅನ್ನೋ ನಂಬಿಕೆ ಇದೆ.
ಸುಮಲತಾ : ಬೇರೆ ಬೇರೆ ಭಿನ್ನಾಭಿಪ್ರಾಯ ಆಗಿತ್ತು ಮನಸ್ಸಿನಲ್ಲಿಟ್ಟುಕೊಳ್ಳಬೇಡಿ. ನಾಡಿದ್ದು ನನ್ನ ತೀರ್ಮಾನ ಏನು ಅನ್ನೋದು ನಿಮಗೂ ತಿಳಿಯಲಿದೆ.

Advertisment

ಹೀಗೆ ಸುಮಲತಾ ನಿವಾಸದಲ್ಲಿ ಒಂದು ಗಂಟೆ ಚರ್ಚೆ ನಡೆದಿದೆ.. ಬಳಿಕ ಮಾತ್ನಾಡಿದ ಹೆಚ್​​ಡಿಕೆ, ಏಪ್ರಿಲ್ ನಾಲ್ಕರಂದು ನಾಮಪತ್ರ ಸಲ್ಲಿಸ್ತೇನೆ ಅಂತ ತಿಳಿಸಿದ್ರು.. ಇತ್ತ, ಇದೊಂದು ಆರೋಗ್ಯಕರ ಚರ್ಚೆ ಎಲ್ಲವನ್ನ ಮುಕ್ತವಾಗಿ ಹಂಚಿಕೊಂಡು ಚರ್ಚೆ ಮಾಡಿದ್ದೇವೆ ಸುಮಲತಾ ಹೇಳಿದ್ರು.

ಇದನ್ನೂ ಓದಿ: ಇಂದು ಶಿವಕುಮಾರ ಸ್ವಾಮೀಜಿಯವರ 117ನೇ ಜಯಂತ್ಯೋತ್ಸವ; ಮಕ್ಕಳಿಗೆ ಶ್ರೀಗಳ ಹೆಸರು ನಾಮಕರಣ

ಒಟ್ನಲ್ಲಿ ಕಳೆದ ಲೋಕಸಭಾ ಚುನಾವಣೆಯಿಂದ ರಾಜಕೀಯ ವಲಯದಲ್ಲಿ ವೈರತ್ವ ಕಟ್ಟಿಕೊಂಡಿದ್ದಕ್ಕೆ ದಳಪತಿಗಳು ಫುಲ್ ಸ್ಟಾಪ್ ಹಾಕೊದಕ್ಕೆ ಮುಂದಾಗಿದ್ದಾರೆ.. ಆದ್ರೆ, ನಾಡಿದ್ದು ಸುಮಲತಾ ಕೈಗೊಳ್ಳುವ ನಿರ್ಧಾರದ ಮೇಲೆ ಅವಲಂಬಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment