newsfirstkannada.com

ಸುಮಲತಾ ಜೊತೆ ನಡೆದ ಮಾತುಕತೆ ಏನು? ಈ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ?

Share :

Published March 31, 2024 at 5:50pm

  ರಾಜ್ಯದಲ್ಲಿ ಕಾವೇರಿದ 2024ರ ಲೋಕಸಭಾ ಚುನಾವಣೆ

  ಅದರಲ್ಲೂ ಮಂಡ್ಯ ಲೋಕಸಭಾ ಕ್ಷೇತ್ರದ್ದೇ ಭಾರೀ ಸದ್ದು

  ಮಾಜಿ ಸಿಎಂ ಕುಮಾರಸ್ವಾಮಿ, ಸುಮಲತಾ ಮನೆಗೆ ಭೇಟಿ

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಾವು ಜೋರಾಗಿದೆ. ಹೇಗಾದ್ರೂ ಮಾಡಿ ಕರ್ನಾಟಕದಲ್ಲಿ ಕಾಂಗ್ರೆಸ್ಸನ್ನು ಸೋಲಿಸಲು ಬಿಜೆಪಿ, ಜೆಡಿಎಸ್​​ ಮೈತ್ರಿ ಮಾಡಿಕೊಂಡಿವೆ. ಬಿಜೆಪಿ 25 ಕ್ಷೇತ್ರಗಳಲ್ಲಿ ಕಂಟೆಸ್ಟ್​ ಮಾಡುತ್ತಿದ್ದು, ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿದೆ. ಮಂಡ್ಯದಲ್ಲಿ ಜೆಡಿಎಸ್​ನಿಂದ ಖುದ್ದು ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಅವರೇ ಕಣಕ್ಕಿಳಿಯುತ್ತಿದ್ದಾರೆ.

ಇನ್ನು, ಸಂಸದೆ ಸುಮಲತಾ ಅಂಬರೀಶ್​​ ಕೂಡ ಮಂಡ್ಯದ ಜನರಿಗೆ ನೋಯಿಸೋ ತೀರ್ಮಾನ ಮಾಡಲ್ಲ. ನಾನು ಮಂಡ್ಯದಿಂದ ಚುನಾವಣೆಗೆ ನಿಂತೇ ನಿಲ್ಲುತ್ತೇನೆ ಎಂದು ಪಣತೊಟ್ಟಿದ್ದಾರೆ. ಈ ಮಧ್ಯೆ ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ, ಜೆಪಿ ನಗರದಲ್ಲಿರೋ ಸಂಸದೆ ಸುಮಲತಾ ಅಂಬರೀಶ್​ ಅವರ ಮನೆಗೆ ಭೇಟಿ ನೀಡಿದ್ದಾರೆ.

ಸುಮಲತಾ, ಹೆಚ್​​ಡಿಕೆ ಮಧ್ಯೆ ನಡೆದ ಮಾತುಕತೆ ಏನು?

ಈ ಬಗ್ಗೆ ಮಾತಾಡಿದ ಹೆಚ್​​ಡಿಕೆ, ಇದೊಂದು ಸೌಹಾರ್ದಯುತ ಭೇಟಿ. ನಾನು 4ನೇ ತಾರೀಕು ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ. ಇದಕ್ಕೆ ಸಹಕಾರ ಕೇಳಲು ಬಂದಿದ್ದೇನೆ. ಸುಮಲತಾ ಅವರಿಗೆ ಬಿಜೆಪಿಯೊಂದಿಗೆ ಉತ್ತಮ ಸಂಬಂಧ ಇದೆ ಎಂದರು.

ನಿನ್ನೆಯಷ್ಟೇ ಸುಮಲತಾ ಅವರು ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದಾರೆ. ಮಂಡ್ಯಕ್ಕೆ ಭೇಟಿ ನೀಡಿದ ಬಳಿಕ ಈ ಬಗ್ಗೆ ಒಂದು ತೀರ್ಮಾನಕ್ಕೆ ಬರಲಿದ್ದಾರೆ. ಎಲ್ಲಾ ಮುಕ್ತವಾಗಿ ಚರ್ಚಿಸಿದ್ದೇವೆ. 3ನೇ ತಾರೀಕು ಈ ಬಗ್ಗೆ ತೀರ್ಮಾನ ಮಾಡ್ತಾರೆ. ನಾವು ಏನು ಚರ್ಚೆ ಮಾಡಿದೀವಿ ಎಂದು ಇಲ್ಲಿ ಹೇಳಲು ಆಗಲ್ಲ ಎಂದರು.

ಇದನ್ನೂ ಓದಿ: BREAKING: ಸುಮಲತಾ ಮನೆಗೆ ಮಾಜಿ ಸಿಎಂ ಕುಮಾರಸ್ವಾಮಿ ದಿಢೀರ್​ ಭೇಟಿ; ಮಹತ್ವದ ಮಾತುಕತೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸುಮಲತಾ ಜೊತೆ ನಡೆದ ಮಾತುಕತೆ ಏನು? ಈ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ?

https://newsfirstlive.com/wp-content/uploads/2024/03/HDK_Sumalatha_1.jpg

Load More