ಚಲುವರಾಯಸ್ವಾಮಿ ಜೀವದ ಜೊತೆ ಚೆಲ್ಲಾಟ ಆಡ್ತಿದ್ದಾರೆ -ಆತ್ಮಹತ್ಯೆಗೆ ಯತ್ನಿಸಿದ್ದ ಚಾಲಕನ ಆರೋಗ್ಯ ವಿಚಾರಿಸಿ ಕುಮಾರಸ್ವಾಮಿ ಆಕ್ರೋಶ

author-image
Ganesh
Updated On
ಚಲುವರಾಯಸ್ವಾಮಿ ಜೀವದ ಜೊತೆ ಚೆಲ್ಲಾಟ ಆಡ್ತಿದ್ದಾರೆ -ಆತ್ಮಹತ್ಯೆಗೆ ಯತ್ನಿಸಿದ್ದ ಚಾಲಕನ ಆರೋಗ್ಯ ವಿಚಾರಿಸಿ ಕುಮಾರಸ್ವಾಮಿ ಆಕ್ರೋಶ
Advertisment
  • ‘ಇನ್ನೂ ಸತ್ತಿಲ್ಲ, ಅದ್ಕೆ FIR ಹಾಕಿಲ್ಲ’ ಅಂದ್ರಂತೆ ಅಧಿಕಾರಿಗಳು
  • ಚಲುವರಾಯಸ್ವಾಮಿ ವಿರುದ್ಧ ಕುಮಾರಸ್ವಾಮಿ ಆರೋಪ ಏನು?
  • KSRTC ಚಾಲಕ ಆತ್ಮಹತ್ಯೆ ಯತ್ನಕ್ಕೆ ಸಚಿವರೇ ಕಾರಣನಾ..?

ಮೈಸೂರು: ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಆರೋಪ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಮಂಡ್ಯದ KSRTC ಬಸ್ ಚಾಲಕ ಜಗದೀಶ್ ಸ್ಥಿತಿ ಚಿಂತಾಜನಕವಾಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಜಗದೀಶ್ ಅವರ ಆರೋಗ್ಯವನ್ನು ಮಾಜಿ ಮುಖ್ಯಮಂತ್ರಿ ಹೆಚ್​​ಡಿ ಕುಮಾರಸ್ವಾಮಿ ವಿಚಾರಿಸಿದರು.

publive-image

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಕುಮಾರಸ್ವಾಮಿ, ಜಗದೀಶ್ ವೆಂಟಿಲೇಟರ್​ನಲ್ಲಿದ್ದಾರೆ. ಸರ್ಕಾರ ಬಂದು ಐವತ್ತು ದಿನ ಕೂಡ ಆಗಿಲ್ಲ, ಆಗಲೇ ವರ್ಗಾವಣೆ ದಂಧೆ ಶುರುವಾಗಿದೆ. ವರ್ಗಾವಣೆ ಮಾಡಿಕೊಳ್ಳುವುದಾದರೆ ಮಾಡಿಕೊಳ್ಳಲಿ, ಈ ರೀತಿ ಮಾಡುವುದು ಸರಿಯಲ್ಲ. ಊರಿನಲ್ಲಿರುವ ರೌಡಿ, ಚೇಲಾ‌ ಮಹದೇವ ಎಂಬಾತ ಇವರ ಕುಟುಂಬಕ್ಕೆ ಕಿರುಕುಳ ನೀಡಿದ್ದಾನೆ. ಹೆಣ್ಣು ಮಗಳು ಜೆಡಿಎಸ್ ಪಕ್ಷ ಬಿಡುವಂತೆ, ಕಾಂಗ್ರೆಸ್ ಸೇರುವಂತೆ ಒತ್ತಡ ಹೇರಿದ್ದಾನೆ ಎಂದು ಆರೋಪಿಸಿದರು.

publive-image

ಮತ್ತೊಂದೆಡೆ ಜಗದೀಶ್​​ಗೆ ಅಧಿಕಾರಿಗಳ ಮೂಲಕ‌ ಕಿರುಕುಳ ಕೊಡಲಾಗಿದೆ. ಡೆತ್​ನೋಟ್‌ನಲ್ಲಿ‌ ಜಗದೀಶ್ ಅವರು ಸ್ಪಷ್ಟವಾಗಿ ಬರೆದಿದ್ದಾರೆ. ಸಚಿವರ ಆದೇಶ ಇದೆ, ಒತ್ತಡ ಇದೆ ಎಂದು ಅಧಿಕಾರಿಗಳು‌ ಹೇಳಿದ್ದಾರೆ ಅಂತಾ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಅವರನ್ನ ಮಂತ್ರಿ ಸ್ಥಾನದಿಂದ ಕೆಳಗಿಳಿಸಿ. ಮಂತ್ರಿ ಸ್ಥಾನ ಏನು ಶಾಶ್ವತನಾ? ಎಂದು ಪ್ರಶ್ನಿಸಿದ್ದಾರೆ.

ಇನ್ನೂ ಸತ್ತಿಲ್ಲ, ಅದ್ಕೆ FIR ಹಾಕಿಲ್ಲ ಅಂತಾರೆ

ಘಟನೆ ಸಂಬಂಧ ಅಧಿಕಾರಿಗಳನ್ನು ಕೇಳಿದರೆ ಇನ್ನೂ ವ್ಯಕ್ತಿ ಸತ್ತಿಲ್ಲ. ಆ ಕಾರಣಕ್ಕೆ ಎಫ್‌ಐಆರ್ ಹಾಕಿಲ್ಲ ಅಂತಾರೆ. ಇವರಿಗೆ ಮತ ಹಾಕಿದ್ದು ಜನರ ಜೀವದ ಜೊತೆ ಚೆಲ್ಲಾಟವಾಡಲು ಅಲ್ಲ. ನಿನ್ನೆ ಅವರ ಕುಟುಂಬಕ್ಕೆ ಕರೆ ಮಾಡಿದಾಗ ಕುಟುಂಬದವರು ಕಣ್ಣೀರಿಟ್ಟರು. ರಾತ್ರಿ 1.30ಕ್ಕೆ ಮೈಸೂರಿಗೆ ಶಿಫ್ಟ್ ಮಾಡಿದ್ದಾರೆ. ವೈದ್ಯರು ತಮ್ಮ ಕೈಯಲ್ಲಿ ಆದ ಪಯತ್ನವನ್ನು ಮಾಡುತ್ತೇನೆ ಎಂದಿದ್ದಾರೆ.

publive-image

ಮುಖ್ಯಮಂತ್ರಿಗಳು ತಕ್ಷಣ ಈ ಮಂತ್ರಿಯನ್ನು ವಜಾ ಮಾಡಬೇಕು. ಸರಿಯಾದ ತನಿಖೆ ನಡೆಸಿ. ಕೀಳು ಮಟ್ಟದ ರಾಜಕಾರಣ ಮಾಡ್ತಿದ್ದಾರೆ. ನನ್ನ ಕ್ಷೇತ್ರ ಚನ್ನಪಟ್ಟಣದಲ್ಲಿ ಅಧಿಕಾರಿರದ ಅವಧಿಯಲ್ಲಿ ಒಂದೇ ಒಂದು ಅಧಿಕಾರಿಯನ್ನು ವರ್ಗಾವಣೆ ಮಾಡಿಲ್ಲ. ಚಲುವರಾಯಸ್ವಾಮಿ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ವಿಧಾನಸೌಧದಲ್ಲಿ ಈ ವಿಚಾರವನ್ನೇ ಪ್ರಶ್ನೆ ಎತ್ತುತ್ತೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment