Advertisment

ದರ್ಶನ್​ ವಿಚಾರಣೆಗಾಗಿ ಪೊಲೀಸ್​ ಠಾಣೆಗೆ ಶಾಮಿಯಾನ ಅಳವಡಿಕೆ.. HDK, ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಹೀಗಂದ್ರಾ!

author-image
AS Harshith
Updated On
ದರ್ಶನ್​ ವಿಚಾರಣೆಗಾಗಿ ಪೊಲೀಸ್​ ಠಾಣೆಗೆ ಶಾಮಿಯಾನ ಅಳವಡಿಕೆ.. HDK, ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಹೀಗಂದ್ರಾ!
Advertisment
  • ರೇನುಕಾಸ್ವಾಮಿ ಕೊಲೆ ಪ್ರಕರಣ.. ದರ್ಶನ್​ ಆ್ಯಂಡ್​​ ಟೀಂ ಅರೆಸ್ಟ್​
  • ವಿಚಾರಣೆಗಾಗಿ ಇಡೀ ಪೊಲೀಸ್ ಠಾಣೆಗೆ ಶಾಮಿಯಾನ ಅಳವಡಿಕೆ
  • ಶಾಮಿಯಾನ ತೆಗೆಯುವಂತೆ ಸಂಘಟನೆಗಳಿಂದ ಆಗ್ರಹ!

ಅದೊಂದು ಆಶ್ಲೀಲ ಮೆಸೇಜ್. ಕೋಪದ ಕೈಗೆ ಬುದ್ಧಿ ಕೊಟ್ಟಿದ್ದ ದರ್ಶನ್ ಅಂಡ್ ಗ್ಯಾಂಗ್​​​ ಜೈಲು ಪಾಲಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಚಕ್ರವ್ಯೂಹದಲ್ಲಿ ಸಿಲುಕಿ ದರ್ಶನ್ ವಿಲವಿಲ ಒದ್ದಾಡುವಂತಾಗಿದೆ. ಈ ಮಧ್ಯೆ ಪ್ರಕರಣದ ತನಿಖೆ ಮಾಡ್ತಿರೋ ಪೊಲೀಸರ ನಡೆಯೇ ಪ್ರಶ್ನೆಯನ್ನ ಹುಟ್ಟುಹಾಕಿದೆ. ಇಡೀ ಠಾಣೆಗೆ ಶಾಮಿಯಾನ ಹಾಕಿರೋದು ರಾಜಕೀಯ ನಾಯಕರ ವಿರೋಧಕ್ಕೂ ಕಾರಣವಾಗಿದೆ.

Advertisment

ಚಾಲೆಂಜಿಂಗ್ ಸ್ಟಾರ್ ದರ್ಶನ್​​ ಅಂಡ್ ಗ್ಯಾಂಗ್​ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸದ್ಯ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸ್ತಿದೆ. ಈ ಮಧ್ಯೆ ಇಡೀ ಪೊಲೀಸ್ ಠಾಣೆಗೆ ಶಾಮಿಯಾನ ಅಳವಡಿಕೆ, 144 ಸೆಕ್ಷನ್ ಜಾರಿ ಮಾಡಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಸಾಲು ಸಾಲು ಆನೆಗಳ ಸಾವು.. ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಹೈಕೋರ್ಟ್; ಹೇಳಿದ್ದೇನು?

ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿದ್ದಕ್ಕೆ ವಿರೋಧ!

ದರ್ಶನ್ ಅಂಡ್ ಗ್ಯಾಂಗ್‌ ಇರೋ ಅನ್ನಪೂರ್ಣೇಶ್ವರಿನಗರ ಪೋಲಿಸ್ ಸ್ಟೇಷನ್‌ಗೆ ಶಾಮಿಯಾನ ಅಳವಡಿಕೆ ಮಾಡಿರೋದು ಹಲವು ಸಂಘಟನೆಗಳ ಕೆಂಗಣ್ಣಿಗೂ ಗುರಿಯಾಗಿದೆ. ಇದೀಗ ಠಾಣೆಗೆ ಹಾಕಿದ ಶಾಮಿಯಾನ ತೆರವಿಗೆ ವಂದೇ ಮಾತರಂ ಸಂಘಟನೆ ಒತ್ತಾಯಿಸಿದೆ. ಸಂಘಟನೆ ರಾಜ್ಯಾಧ್ಯಕ್ಷ ಶಿವಕುಮಾರ್ ನಾಯಕ್ ನೇತ್ರತ್ವದಲ್ಲಿ ಠಾಣೆಯ ಇನ್ಸ್‌ಪೆಕ್ಟರ್‌ಗೆ ಮನವಿ ಸಲ್ಲಿಸಿದ್ದಾರೆ.

Advertisment

ಇದನ್ನೂ ಓದಿ: ಧಾರಾಕಾರವಾಗಿ ಸುರಿಯುತ್ತಿರೋ ಮಳೆ, 6 ಜನ ಸಾವು.. ಭೂಕುಸಿತದಿಂದ ಸಿಲುಕಿಕೊಂಡ 1,500 ಪ್ರವಾಸಿಗರು

ಶಾಮಿಯಾನ ಘಟನೆ ‌ಇತಿಹಾಸದಲ್ಲೇ ಆಗಿಲ್ಲ ಎಂದ ಹೆಚ್‌ಡಿಕೆ

ರೇಣುಕಾಸ್ವಾಮಿ ಕೊಲೆ ಕೇಸ್‌ ಬಗ್ಗೆ ಕೇಂದ್ರ ಸಚಿವರೂ ವಿರೋಧ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಠಾಣೆಗೆ ಶಾಮಿಯಾನ ಹಾಕುವಂತ ಘಟನೆ ‌ಇತಿಹಾದಲ್ಲೇ ಆಗಿರಲಿಲ್ಲ ಅಂತ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಇತ್ತ ಯಾರ ಪ್ರಭಾವಕ್ಕೂ ಒಳಗಾಗದೇ ಪೊಲೀಸರು ಕಟ್ಟುನಿಟ್ಟಿನ ತನಿಖೆ ಮಾಡ್ಬೇಕು ಅಂತ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿಗೆ ಕೆಂಪೇಗೌಡರ ಬೆಳ್ಳಿ ಪ್ರತಿಮೆ ನೀಡಿದ ಎಂಎಲ್‌ಸಿ ಟಿ.ಎ.ಶರವಣ

Advertisment

ಯಾವ ಕಾರಣಕ್ಕೆ ಶಾಮಿಯಾನ ಹಾಕಿದ್ದಾರೆ ಗೊತ್ತಿಲ್ಲ ಎಂದ ಸಿಎಂ

ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿರೋ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಯಾವ ಕಾರಣಕ್ಕೆ ಠಾಣೆಗೆ ಶಾಮಿಯಾನ ಹಾಕಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ. ಜೊತೆಗೆ ಕೊಲೆ ಕೇಸ್‌ನಲ್ಲಿ ಯಾವುದೇ ಪ್ರಭಾವ ಬೀರುವ ಕೆಲಸ ನಡೆದಿಲ್ಲ ಎಂಬ ಮಾತನ್ನಾಡಿದ್ದಾರೆ.

ಒಟ್ಟಾರೆ, ದರ್ಶನ್‌ ಕೇಸ್‌ನಲ್ಲಿ ಪೊಲೀಸರು ತೋರುತ್ತಿರೋ ನಡೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆದ್ರೆ, ಯಾವುದೇ ಒತ್ತಡಕ್ಕೆ ಮಣಿಯದೇ ಸ್ಟಾರ್ ನಟ ಎಂಬ ಮುಲಾಜು ನೋಡದೇ ಆರೋಪಿಗಳಿಗೆ ಶಿಕ್ಷೆಯಾಗಬೇಕಿದೆ. ಎಲ್ಲರಿಗೂ ಕಾನೂನು ಒಂದೇ ಎಂಬ ಸಂದೇಶ ನೀಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment