Advertisment

ಕೆಲವ್ರಿಗೆ ನನ್ನ ನೆನಪಿಸಿಕೊಳ್ಳದಿದ್ರೆ ನಿದ್ದೆಯೂ ಬರಲ್ಲ, ತಲೆಯೂ ಓಡಲ್ಲ -ಕುಮಾರಸ್ವಾಮಿ-ಡಿಕೆಶಿ ಮಧ್ಯೆ ವಾಗ್ಯುದ್ಧ ಹೆಂಗಿದೆ ಗೊತ್ತಾ?

author-image
Bheemappa
Updated On
ರಾಮನಗರ ಜಿಲ್ಲೆ ಹೆಸರು ಬದಲಾವಣೆ.. ಡಿ.ಕೆ ಶಿವಕುಮಾರ್‌ ಕನಸಿಗೆ ಹೆಚ್‌ಡಿಕೆ ಖಡಕ್ ಸವಾಲು; ಏನಂದ್ರು?
Advertisment
  • ಮಂಡ್ಯದಲ್ಲಿ ಜನತಾ ದರ್ಶನ ಮಾಡಿದ್ರೂ ಡಿಸಿಎಂ ಟಾರ್ಗೆಟ್
  • ಚನ್ನಪಟ್ಟಣ ಕೈ ವಶ ಮಾಡಿಕೊಳ್ಳಲು ತಂತ್ರ, ಯಾರ್ ಗೆಲ್ತಾರೆ?
  • ಕೇಂದ್ರ ಸಚಿವರಿಗೆ ಡಿಚ್ಚಿ ಕೊಟ್ಟ ಡಿಸಿಎಂ ಡಿ.ಕೆ ಶಿವಕುಮಾರ್

ಡಿಸಿಎಂ ಡಿ.ಕೆ ಶಿವಕುಮಾರ್ ಮತ್ತು ಹೆಚ್.​ಡಿ ಕುಮಾರಸ್ವಾಮಿ ಮಧ್ಯೆ ರಾಜಕೀಯ ವಾಗ್ಯುದ್ಧ ಮತ್ತಷ್ಟು ತಾರಕ್ಕೇರಿದೆ. ಚನ್ನಪಟ್ಟಣ ಕೈ ವಶ ಮಾಡಿಕೊಳ್ಳಲು ತಂತ್ರ ಹಣೆದಿರುವ ಡಿ.ಕೆ ಶಿವಕುಮಾರ್​ಗೆ ಕೇಂದ್ರದ ಮಂತ್ರಿ ಹೆಚ್​ಡಿಕೆ ಪ್ರತಿತಂತ್ರ ರೂಪಿಸಿದ್ದಾರೆ. ಇದು ಇಬ್ಬರ ನಡುವೆ ಮತ್ತಷ್ಟು ವಾಕ್ಸಮರಕ್ಕೆ ಕಾರಣವಾಗಿದೆ.

Advertisment

publive-image

ಹೆಚ್​.ಡಿ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ಕ್ಷೇತ್ರವನ್ನು ಕೈ ವಶ ಮಾಡಿಕೊಳ್ಳಲು ಡಿಸಿಎಂ ಡಿ.ಕೆ ಶಿವಕುಮಾರ್ ಖುದ್ದು ತಾವೇ ಅಖಾಡಕ್ಕೆ ಇಳಿದಿದ್ದು, ಜನ ಸ್ಪಂದನಾ ಮೂಲಕ ಮತದಾರರ ಮನ ಗೆಲ್ಲಲು ಮುಂದಾಗಿದ್ದಾರೆ. ಇದಕ್ಕೆ ಕೌಂಟರ್​ ಎಂಬಂತೆ ಹೆಚ್​ಡಿಕೆ ಕೂಡ, ಮಂಡ್ಯದಲ್ಲಿ ಜನತಾ ದರ್ಶನದ ಮೂಲಕ ತಿರುಗೇಟು ನೀಡಿದ್ದಾರೆ.

ಇಬ್ಬರು ನಾಯಕರು ಜನರ ಸಮಸ್ಯೆ ಆಲಿಸಲು ಮುಂದಾಗಿದ್ದು ಉತ್ತಮ ನಡೆ.. ಆದ್ರೆ, ರಾಜಕೀಯವಾಗಿ ಜಿದ್ದಿಗೆ ಬಿದ್ದವರಂತೆ ಬಹಿರಂಗ ವಾಗ್ಯುದ್ಧಕ್ಕಿಳಿದಿದ್ದಾರೆ. ಮುಡಾ ಹಗರಣ ಬಯಲಾಗಿದ್ದರ ಹಿಂದೆ ಪರೋಕ್ಷವಾಗಿ ಡಿ.ಕೆ ಶಿವಕುಮಾರ್​​ ಕೈವಾಡ ಇದೆ ಎಂದು ಹೆಚ್​.ಡಿ ಕುಮಾರಸ್ವಾಮಿ ಆರೋಪ ಮಾಡಿದ್ರು. ಇದರಿಂದ ಕೆರಳಿ ಕೆಂಡವಾಗಿರುವ ಡಿ.ಕೆ ಶಿವಕುಮಾರ್ ಕೆಲವೊಬ್ಬರಿಗೆ ನನ್ನನ್ನು ನೆನಪಿಸಿಕೊಳ್ಳದಿದ್ದರೆ ನಿದ್ದೆಯೂ ಬರುವುದಿಲ್ಲ, ತಲೆಯೂ ಓಡುವುದಿಲ್ಲ ಎಂದು ಟಾಂಗ್​ ನೀಡಿದ್ದಾರೆ. ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಕೂಡ ಸುಮ್ಮನೇ ಇಲ್ಲ, ಹುಚ್ಚು ಹಿಡಿದಿರೋದು ನನಗಲ್ಲ ಡಿ.ಕೆ ಶಿವಕುಮಾರ್‌ಗೆ ಸಿಎಂ ಕುರ್ಚಿ ಹುಚ್ಚು ಹಿಡಿದಿದೆ ಎಂದು ತಿರುಗೇಟು ನೀಡಿದರು.

ಕೆಲವೊಬ್ಬರಿಗೆ ನನ್ನನ್ನು ನೆನಪಿಸಿಕೊಳ್ಳದಿದ್ದರೆ ನಿದ್ದೆಯೂ ಬರುವುದಿಲ್ಲ, ತಲೆಯೂ ಓಡುವುದಿಲ್ಲ

ಡಿ.ಕೆ.ಶಿವಕುಮಾರ್​, ಡಿಸಿಎಂ

ಮುಖ್ಯಮಂತ್ರಿ ಮೇಲೆ ಪ್ರಾರಂಭವಾಗಿದೆಯಲ್ಲ 50-50 ನಾನಾ ತಂದಿರೋದು..? ಇದನ್ನು ತಂದಿರೋದೇ ಈ ಹುಚ್ಚರು. ಆ ಮುಖ್ಯಮಂತ್ರಿಯ ಕುರ್ಚಿ ಬಗ್ಗೆ ಹುಚ್ಚಿಡಿದಿರೋದು ಅವರಿಗೆ, ನನಗಲ್ಲ.

ಹೆಚ್​.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

Advertisment

ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ತೀವ್ರ ವಾಗ್ದಾಳಿ

ಜನತಾ ದರ್ಶನಕ್ಕೆ ಅಧಿಕಾರಿಗಳನ್ನು ಹೋಗದಂತೆ ಸರ್ಕಾರ ಸುತ್ತೋಲೆ ಹೊರಡಿಸಿದ್ದಾರೆ ಎಂದು ಹೆಚ್​ಡಿಕೆ ಆರೋಪಿಸಿದ್ರು.. ಇದಕ್ಕೆ ತಿರುಗೇಟು ನೀಡಿದ ಡಿಸಿಎಂ ಪ್ರೋಟೋಕಾಲ್​ ಪ್ರಕಾರ ಅಧಿಕಾರಿಗಳು ನಡೆದುಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ರು. ಇದಕ್ಕೆ ಮತ್ತೆ ತಿರುಗೇಟು ನೀಡಿದ ಹೆಚ್​ಡಿಕೆ, ಡಿ.ಕೆ.ಸುರೇಶ್​ ನಡೆಸಿದ್ದ ಸಭೆಯ ಫೋಟೋವನ್ನು ಪ್ರದರ್ಶಿಸಿ, ಇವರಿಗೆ ಅಧಿಕಾರ ಕೊಟ್ಟವರು ಯಾರೆಂದು ವಾಗ್ದಾಳಿ ನಡೆಸಿದ್ರು. ಹಾಗೂ ರಾಜ್ಯ ಸರ್ಕಾರದ ಪ್ರೋಟೋಕಾಲ್​ ನಂಬಿ ನಾನು ರಾಜಕಾರಣ ಮಾಡ್ತಿಲ್ಲ ಎಂದು ಕಿಡಿಕಾರಿದ್ರು.

ಇದನ್ನೂ ಓದಿ: ಅಬ್ಬಾ.. ಅಂಬಾನಿ ಸೊಸೆ ಧರಿಸಿದ್ದ ಲೆಹೆಂಗಾವೆಲ್ಲ ಅಪ್ಪಟ ಚಿನ್ನ.. ಚಿನ್ನ; ಇದರಲ್ಲಿರೋ ಶ್ಲೋಕದ ವಿಶೇಷತೆ ಏನು?

publive-image

ಈ ಸಭೆ ಜಿಲ್ಲಾ ಉಸ್ತುವಾರಿ ಸಚಿವರು ಮಾಡುತ್ತಿದ್ದಾರಾ?. ಬೆಂಗಳೂರು ಗ್ರಾಮಾಂತರ ಸಭೆಯ ನಾಯಕತ್ವ ವಹಿಸಿಕೊಂಡಿರೋದ್ಯಾರು?. ಇವರಿಗೆ ಯಾರು ಪವರ್ ಕೊಟ್ಟಿದ್ದು?. ಈ ಫೋಟೋದಲ್ಲಿ ಇರುವರು ಯಾರು. ಇವರೇಕೆ ಸಭೆ ನಡೆಸುತ್ತಿದ್ದಾರೆ?. ಯಾವನು ಅಧಿಕಾರ ಕೊಟ್ಟಿದ್ದು?. ನನ್ನ ಕೇಳೋರೋ ಇದಕ್ಕೆ ಉತ್ತರ ಕೊಡಲಿ.

ಕರ್ನಾಟಕ ರಾಜ್ಯ ಸರ್ಕಾರದ ಬೇಡಿಕೆಗಳನ್ನ ಕಾರ್ಯರೂಪಕ್ಕೆ ತರಲು ಸಿಎಂ, ಡಿಸಿಎಂ ಸಮೇತ ದೆಹಲಿಗೆ ಬಂದಾಗ ಅರ್ಜಿ ಹಿಡಿದುಕೊಂಡು ಯಾರ ಮುಂದೆ ಬಂದೀರಿ?. ಇದು ಫೆಡರಲ್ ಸಿಸ್ಟಮ್​. ಇಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಎನ್ನುವುದು ಪ್ರಶ್ನೆ ಬರಲ್ಲ.

ಹೆಚ್​.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ

Advertisment

ಇದನ್ನೂ ಓದಿ:ವರುಣಾರ್ಭಟಕ್ಕೆ ಬೆಚ್ಚಿಬಿದ್ದ ಕರಾವಳಿ, ಮಲೆನಾಡು! ರೆಡ್​ ಅಲರ್ಟ್.. ಈ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ

ಅಧಿಕಾರಿಗಳ ಅನುಪಸ್ಥಿತಿಯ ನಡುವೆ ಕುಮಾರಸ್ವಾಮಿ ಸಂಜೆ 7 ಗಂಟೆವರೆಗೂ ಜನತಾ ದರ್ಶನ ನಡೆಸಿ, ಅಹವಾಲು ಸ್ವೀಕರಿಸಿದ್ರು. ಕೇಂದ್ರ ಸಚಿವರ ಜನತಾ ದರ್ಶನಕ್ಕೆ ಉತ್ತಮ ಸ್ಪಂದನೆಯೂ ಸಿಕ್ಕಿದೆ. ಅದೇಲೆ ಇರಲಿ. ಮಂಡ್ಯದಲ್ಲಿ ಜನತಾ ದರ್ಶನ ಮಾಡಿದ್ರೂ ದಳಪತಿ ಟಾರ್ಗೆಟ್​ ಮಾಡಿದ್ದು ಮಾತ್ರ ಡಿ.ಕೆ ಶಿವಕುಮಾರ್​​ರನ್ನೇ. ಮುಡಾ ಹಗರಣ ಬಯಲಾಗಿದ್ದೇ ಸಿಎಂ ಕುರ್ಚಿಗೆ ಟವೆಲ್​ ಹಾಕಿದವರಿಂದ ಎನ್ನುವ ಮೂಲಕ ಹೊಸ ದಾಳವನ್ನೇ ಉರುಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment