newsfirstkannada.com

ವೋಟಿಂಗ್​​ ಮುಗಿಯುತ್ತಿದ್ದಂತೆ ಹೆಚ್​​​ಡಿಕೆ, ಸುಮಲತಾ ಮಧ್ಯೆ ಜಗಳ; ಮಂಡ್ಯ ರಾಜಕೀಯಕ್ಕೆ ಟ್ವಿಸ್ಟ್​​!

Share :

Published April 27, 2024 at 6:09am

    ಸಹಕಾರ ಸಿಗದಿದ್ರೂ ಮಂಡ್ಯದಲ್ಲಿ ಜೆಡಿಎಸ್​ ಗೆಲ್ಲುತ್ತೆ- ಹೆಚ್.​ಡಿ ದೇವೇಗೌಡ್ರು

    ಮಂಡ್ಯದಲ್ಲಿ ಪ್ರಚಾರಕ್ಕೆ ಇಳಿಯದ ಸುಮಲತಾ ಬಗ್ಗೆ ಗೌಡರು ಅಸಮಾಧಾನ

    ಸಂಚಲನ ಸೃಷ್ಟಿಸಿದ ಮಾಜಿ ಪ್ರಧಾನಿ ದೇವೇಗೌಡರ ಅದೊಂದು ಹೇಳಿಕೆ!

ಈವರೆಗೆ ಶಾಂತವಾಗಿದ್ದ ಮಂಡ್ಯ, ಮತದಾನದ ದಿನವೇ ಕಿಡಿಹಾರಿದೆ. ಅದು ಅಂತಿಂಥ ಕಿಡಿಯಲ್ಲ. ಐದು ವರ್ಷದಿಂದ ನಡೆಯುತ್ತಿದ್ದ ಮಾತಿನ ಮಲ್ಲಯುದ್ಧಕ್ಕೆ ಮತ್ತೆ ಚಾಲನೆ ಸಿಕ್ಕಂತೆ ಕಾಣಿಸ್ತಿದೆ. ಮಂಡ್ಯದಲ್ಲಿ ಪ್ರಚಾರಕ್ಕೆ ಇಳಿಯದ ಸುಮಲತಾ ಬಗ್ಗೆ ಗೌಡರು ಅಸಮಾಧಾನದ ಬೆನ್ನಲ್ಲೆ, ಸುಮಲತಾ ಅಂಬರೀಶ್ ಅವರು ತಮ್ಮದೇ ದಾಟಿಯಲ್ಲಿ ಟಾಂಗ್​​ ಕೊಟ್ಟಿದ್ದಾರೆ.

ಹೆಚ್​ಡಿಕೆ ಮಾತ್ರ ಬ್ಯಾಲೆನ್ಸಿಂಗ್​ ಬ್ಯಾಟಿಂಗ್​​​ ಮಾಡಿದ್ದಾರೆ. ಲೋಕಸಭೆ ಚುನಾವಣೆ ಹೊತ್ತಲ್ಲೆ ಮಾಜಿ ಪ್ರಧಾನಿ ದೇವೇಗೌಡರ ಅದೊಂದು ಹೇಳಿಕೆ ಸಂಚಲನ ಸೃಷ್ಟಿಸಿದೆ. ಹಾಸನದಲ್ಲಿ ಬಿಜೆಪಿಯ ಕೆಲವರ ಸಹಕಾರ ಸಿಗ್ತಿಲ್ಲ. ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ ಅಂತ ಹೇಳಿದ್ದಾರೆ. ಈ ಮೂಲಕ ಮೈತ್ರಿಯಲ್ಲಿ ಪೂರ್ಣ ಒಮ್ಮತ ಮೂಡದಿರುವ ಬಗ್ಗೆ ಸುಳಿವು ನೀಡಿದ್ದಾರೆ. ಇದೇ ಹೇಳಿಕೆ ಈಗ ಸುಮಲತಾ ಸಿಡಿಮಿಡಿಗೊಳ್ಳುವಂತೆ ಮಾಡಿದೆ.

ಗೌಡರ ಹೇಳಿಕೆಗೆ ಸುಮಲತಾ ಏಟು, ಹೆಚ್​ಡಿಕೆ ಎದಿರೇಟು!

ವೋಟಿಂಗ್‌ ದಿನವೇ ಎದ್ದ ಮಾತಿನ ಸಮರಕ್ಕೆ ಸುಮಲತಾ ಮತ್ತು ಕುಮಾರಸ್ವಾಮಿ ನಡುವೆಯೂ ಗುದ್ದಾಟ ನಡೆದಿದೆ. ಈ ಗುದ್ದಾಟ ಮತ್ತೆ 2019ರ ಎಲೆಕ್ಷನ್​​ ದಿನಗಳನ್ನ ನೆನಪಿಸಿದೆ. ಮಾಜಿ ಪ್ರಧಾನಿ ದೇವೇಗೌಡರು ಈ ಮಾತಿನ ಯುದ್ಧಕ್ಕೆ ಅಡಿಗಲ್ಲು ಹಾಕಿದ್ದು, ಸುಮಲತಾ ತಿರುಗೇಟು ನೀಡಿದ್ದಾರೆ. ಗೌಡ್ರು ಆಡಿದ ಇದೊಂದೇ ಮಾತಿಗೆ ಕಿಡಿಯಾದ ಸುಮಲತಾ, ದಳವನ್ನೇ ಕಟಕಟೆಯಲ್ಲಿ ನಿಲ್ಲಿಸಿದ್ದಾರೆ.

ಗೆದ್ದ ಸ್ಥಾನವನ್ನ ಬಿಟ್ಟು ಕೊಟ್ಟೆ ಅನ್ನೋ ಮೂಲಕ ತ್ಯಾಗಮಯಿ ರೂಪ ತಾಳಿದ್ದಾರೆ. ಇದೇ ವೇಳೆ, ಪ್ರಚಾರಕ್ಕೆ ತಮ್ಮನ್ನ ಹೆಚ್​ಡಿಕೆ ಕರೆದೇ ಇಲ್ಲ. ಅವರ ಹೇಳಿಕೆ ಬೇಸರ ತಂದಿದೆ ಅಂತ ಸುಮಲತಾ ಅಸಮಾಧಾನ ಹೊರ ಹಾಕಿದ್ರೆ, ಅವರ ಮನೆಗೆ ಹೋಗಿ ಸಹಕಾರ ಕೇಳಿ ಬಂದಿದ್ದೇನೆ. ಇನ್ನೇನು ಮಾಡಬೇಕಿತ್ತು ಅನ್ನೋ ಪ್ರಶ್ನೆ ಎತ್ತಿ ಮಾತಿನ ದಾಟಿ ಬದಲಿಸಿದ್ದಾರೆ.

ಇದನ್ನೂ ಓದಿ: ‘ಮಂಡ್ಯ ಬಿಟ್ಟು ಕೊಟ್ಟಿದ್ದೇ ತಪ್ಪಾಯ್ತು’- JDS ವಿರುದ್ಧ ಸಿಡಿದೆದ್ದ ಸುಮಲತಾ ಅಂಬರೀಶ್; ಅಸಲಿಗೆ ಆಗಿದ್ದೇನು?

ಸಹಕಾರ ಸಿಗದಿದ್ರೂ ಮಂಡ್ಯದಲ್ಲಿ ಜೆಡಿಎಸ್​ ಗೆಲ್ಲುತ್ತೆ ಅಂತ ದೇವೇಗೌಡ್ರು ಹೇಳಿದ್ದಾರೆ. ಆ ಹೇಳಿಕೆಗೂ ಸುಮಲತಾ, ನಮ್ಮ ವೋಟು ಅವರಿಗೆ ಲೆಕ್ಕಕ್ಕಿಲ್ವಾ ಅಂತ ಕೌಂಟರ್​ ಕೊಟ್ಟಿದ್ದಾರೆ. ಈ ವಾಗ್ಯುದ್ಧದ ಮಧ್ಯೆ ಹೆಚ್​ಡಿಕೆ ಉರಿಯುವ ಬೆಂಕಿಯನ್ನ ಆರಿಸುವ ಕೆಲಸವೂ ಮಾಡಿದ್ದಾರೆ. ಮತದಾನದ ದಿನವೇ ಸ್ವಾಭಿಮಾನಿ ಕಿಡಿಹಾರಿದೆ. ಸುಮಲತಾ ಹೇಳಿಕೆ ಡ್ಯಾಮೇಜ್​ ಆಗದಂತೆ ಹೆಚ್​ಡಿಕೆ ಬ್ಯಾಲೆನ್ಸ್​ ಮಾಡಿದ್ದಾರೆ. ಒಟ್ಟಾರೆ, ಚುನಾವಣೆಯಲ್ಲಿ ಒಳೇಟು ಬೀಳುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಮತಯಂತ್ರದಲ್ಲಿ ಭದ್ರವಾಗಿದೆ. ಜೂನ್​ 4ಕ್ಕೆ ರಿಸಲ್ಟ್​​ ರಿವೀಲ್​​ ಆಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೋಟಿಂಗ್​​ ಮುಗಿಯುತ್ತಿದ್ದಂತೆ ಹೆಚ್​​​ಡಿಕೆ, ಸುಮಲತಾ ಮಧ್ಯೆ ಜಗಳ; ಮಂಡ್ಯ ರಾಜಕೀಯಕ್ಕೆ ಟ್ವಿಸ್ಟ್​​!

https://newsfirstlive.com/wp-content/uploads/2024/04/hdk3.jpg

Load More