newsfirstkannada.com

‘ಸೆಕ್ಸ್​​ ವಿಡಿಯೋ ಇರೋ ಬರೋಬ್ಬರಿ 25,000 ಪೆನ್​ ಡ್ರೈವ್​ ಹಂಚಿಕೆ’- ಹೆಚ್​​​ಡಿಕೆ ಬಿಚ್ಚಿಟ್ಟ ಸ್ಫೋಟಕ ಸತ್ಯ

Share :

Published May 7, 2024 at 10:57pm

    ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ

    ವಿಡಿಯೋ ಲೀಕ್ ಪಿತೂರಿ ಕಿಂಗ್ ಪಿನ್ ಡಿಕೆಶಿ ಎಂದು ಗಂಭೀರ ಆರೋಪ

    ಸಂಪುಟದಿಂದ ಡಿಸಿಎಂ ಡಿಕೆ ಶಿವಕುಮಾರ್​​ ವಜಾಕ್ಕೆ ಹೆಚ್​​ಡಿಕೆ ಒತ್ತಾಯ!

ಬೆಂಗಳೂರು: ಹಾಸನದ ಜೆಡಿಎಸ್‌ ಅಭ್ಯರ್ಥಿಯ ಎಲೆಕ್ಷನ್ ಏಜೆಂಟ್ ಆಗಿರುವ ಪೂರ್ಣಚಂದ್ರ ಅವರು ಏಪ್ರಿಲ್ 22ನೇ ತಾರೀಕಿನಂದೇ ಹಾಸನದ ಜಿಲ್ಲಾಧಿಕಾರಿ, ಪೋಲಿಸ್ ವರಿಷ್ಠಾಧಿಕಾರಿಗೆ ಈ ಬಗ್ಗೆ ದೂರು ಕೊಟ್ಟಿದ್ದಾರೆ. ಏಪ್ರಿಲ್ 21ರ ರಾತ್ರಿ ಹಾಸನ ಸಂಸದರ ಅಶ್ಲೀಲ ವಿಡಿಯೋ ನೋಡಲು ಈ ವಾಟ್ಸಾಪ್ ಫಾಲೋ ಮಾಡಿ, ವಿಡಿಯೋ ಬಿಡುಗಡೆಗೆ ಕ್ಷಣಗಣನೆ ಎಂದು ಪೋಸ್ಟ್ ಹಾಕಿರುವ ವ್ಯಕ್ತಿಯ ಬಗ್ಗೆ ದೂರು ನೀಡಿದ್ದಾರೆ. ಆದರೆ, ದೂರು ತೆಗೆದುಕೊಂಡ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಏನೂ ಮಾಡಲಿಲ್ಲ. ವಿಡಿಯೋ ಕದ್ದು ಬೇರೊಬ್ಬರಿಗೆ ಕಳಿಸಿದ ಕಾರು ಚಾಲಕ ಕಾರ್ತಿಕ್ ಹಾಗೂ ವಿಡಿಯೋ ಕ್ಷಣಗಣನೆ ಪೋಸ್ಟ್ ಹಾಕಿ ಪೆನ್ ಡ್ರೈವ್ ಹಂಚಿಕೆ ಮಾಡಿರುವ ಸಚಿವರೊಬ್ಬರ ಆಪ್ತ ನವೀನ್ ಗೌಡ ಎಂಬುವರ ವಿರುದ್ಧ FIR ದಾಖಲಾಗಿದೆ. ಇದುವರೆಗೂ ಅವರಿವರನ್ನು ಯಾಕೆ ಬಂಧಿಸಿಲ್ಲ ಹಾಗೂ ಆ ಪ್ರಕರಣಗಳನ್ನು ಎಸ್ ಐಟಿಗೆ ಯಾಕೆ ವರ್ಗಾವಣೆ ಮಾಡಿಲ್ಲ ಎಂದು ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದರು.

ಈ ಪ್ರಕರಣದಲ್ಲಿ ಭಾಗಿಯಾದವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ, ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಆದರೆ, ಆ ವಿಡಿಯೋಗಲ್ಲಿರುವ ಮಹಿಳೆಯರನ್ನು ಬೀದಿಗೆ ತಂಡ ನೀಚರಿಗೆ ಶಿಕ್ಷೆ ಆಗಬೇಕು. ಅಶ್ಲೀಲ ವಿಡಿಯೋಗಳನ್ನು ಪೋಸ್ಟ್ ಮಾಡಿದ ನವೀನ್ ಗೌಡನಿಗೆ ಏನು ಶಿಕ್ಷೆಯಾಗಿದೆ. ಯಾರು ಇವನನ್ನು ರಕ್ಷಣೆ ಮಾಡುತ್ತಿದ್ದಾರೆ? ಪೂರ್ಣಚಂದ್ರ ಅವರು ನಾಲ್ವರ ವಿರುದ್ಧ ದೂರು ನೀಡಿದ್ದಾರೆ. ನವೀನ್ ಗೌಡ ಸೇರಿ ನಾಲ್ವರ ಮೇಲೆ ದೂರು ನೀಡಿದ್ದಾರೆ. ಇಲ್ಲಿಯವರೆಗೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಯಾವ ಧೈರ್ಯದಿಂದ ನಾನು ಸೋಲುತ್ತೇನೆ ಎಂದರು?

ಈ ಚುನಾವಣೆ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ನೂರು ಬಾರಿ ಹೇಳಿದ್ದಾರೆ. ಈ ಬಾರಿ ಕುಮಾರಸ್ವಾಮಿ ಸೇರಿದಂಥೆ ಜೆಡಿಎಸ್ ಪಕ್ಷದ ನಾಲ್ಕೂ ಅಭ್ಯರ್ಥಿಗಳು ಸೋಲುತ್ತಾರೆ ಎಂದು. ಕುಮಾರಸ್ವಾಮಿ ಸೋಲಿನ ಭಯದಿಂದ ಮಂಡ್ಯಕ್ಕೆ ಬಂದಿದ್ದಾರೆ ಎಂದು ಯಾವ ಧೈರ್ಯದಿಂದ ಹೇಳಿದ್ದಾರೆ? ಈ ಪೆನ್ ಡ್ರೈವ್ ಧೈರ್ಯದಿಂದ ಅವರು ಹೀಗೆ ಹೇಳಿದ್ದರು. ಈ ಪೆನ್ ಡ್ರೈವ್ ಹಿಂದೆ ಯಾರೆಲ್ಲ ಇದ್ದಾರೆ, ಅದರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು. ಅದುವರೆಗೂ ಇದನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ಗುಡುಗಿದರು.

25 ಸಾವಿರ ಪೆನ್ ಡ್ರೈವ್ ಹಂಚಿದ್ದಾರೆ ಎಂದ ಹೆಚ್​​​ಡಿಕೆ

ಹಾಸನ ಜಿಲ್ಲೆಯ ಡಿಸಿ, ಎಸ್ಪಿ ಅವರಿಗೆ ಪೂರ್ಣಚಂದ್ರ ತೇಜಸ್ವಿ ಅವರು ನೀಡಿದ ದೂರಿಗೆ ಪ್ರತಿಯಾಗಿ ಅವರು ಹಿಂಬರಹ ನೀಡಿದ್ದಾರೆ. ಅಂದ ಮೇಲೆ ಈ ವಿಷಯ ಸರ್ಕಾರದ ಗಮನಕ್ಕೆ ಹೊಯ್ತು ಎಂದು ಅರ್ಥ ಅಲ್ಲವೇ? ಅಲ್ಲಿನ ಸೆನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಯಿತು. ಹಾಸನ ನಗರದಾದ್ಯಂತ ಸುಮಾರು 25 ಸಾವಿರ ಪೆನ್ ಡ್ರೈವ್ ಹಂಚಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ದೂರು ದಾಖಲಿಸಿದ ಬಳಿಕವೂ ಯಾವುದೇ ಕ್ರಮ ಕೈಗೊಂಡಿಲ್ಲ. ಯಾರಾದರೊಬ್ಬರು ಯಾರ ವಿರುದ್ಧವಾದರೂ ಒಂದು ಅವಹೇಳನಕಾರಿ ಪೋಸ್ಟ್ ಹಾಕಿದರೆ ಪೊಲೀಸರು ತಕ್ಷಣ ಹುಡುಕಿಕೊಂಡು ಅವನ ಮನೆ ಬಾಗಿಲಿಗೆ ಹೋಗುತ್ತಾರೆ. ಆದರೆ, ಈ ಪ್ರಕರಣದಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಿಡಿಕಿಡಿಯಾದರು.

ಮೊದಲು ಹೊಳೇನರಸೀಪುರದಲ್ಲಿ ಒಂದು ಕೇಸ್ ದಾಖಲು ಮಾಡಿದ್ದರು. ನಂತರ ಗನ್ ಪಾಯಿಂಟ್ ನಲ್ಲಿ ಅತ್ಯಾಚಾರ ಎಸಗಿದರು ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಒಬ್ಬರಿಂದ ದೂರು ಕೊಡಿಸಿದ್ದಾರೆ. ಆದರೆ, ಗನ್ ಪಾಯಿಂಟ್ ನಲ್ಲಿ ಅತ್ಯಾಚಾರಕ್ಕೆ ಒಳಗಾದ ಆ ಮಹಿಳೆ ಆ ಘಟನೆ ನಡೆದ ಮರುದಿನವೇ ಆರೋಪಿತ ವ್ಯಕ್ತಿಯ ಜತೆಯೇ ವೇದಿಕೆ ಹಂಚಿಕೊಂಡು ಅವರ ಪಕ್ಕದಲ್ಲಿಯೇ ಅಸೀನರಾಗಿದ್ದಾರೆ. ಮೊದಲ ಪೆನ್ ಡ್ರೈವ್ ನಲ್ಲಿದ್ದ ಮಹಿಳೆ ಏಪ್ರಿಲ್ 22ರಂದು ಚುನಾವಣೆಯ ಪ್ರಚಾರದಲ್ಲಿ ಪ್ರಜ್ವಲ್ ಜತೆ ಇದ್ದಾರೆ. ಅದೇ ಏಪ್ರಿಲ್ 28ರಂದು ಆ ಮಹಿಳೆಯಿಂದ ದೂರು ಕೊಡಿಸಿದ್ದಾರೆ. ಈ ಮಾಹಿತಿಗಳೆಲ್ಲ ಸೋರಿಕೆ ಮಾಡಿದವರು ಯಾರು? ಇಂಥ ಅಧಿಕಾರಿಗಳಿಂದ ಸರಿಯಾದ ತನಿಖೆ ಆಗುತ್ತದೆಯೇ? ಎಂದು ಅವರು ಪ್ರಶ್ನಿಸಿದರು.
ಎಷ್ಟು ಸೂಕ್ಷ್ಮ ಪ್ರಕರಣದ ತನಿಖೆಯ ಮಾಹಿತಿಯನ್ನು ಯಾರು ಹೊರಗೆ ಬಿಟ್ಟರು? ಯಾರೋ ಅತ್ಯಂತ ವ್ಯವಸ್ಥಿತವಾಗಿ, ಉದ್ದೇಶಪೂರ್ವಕವಾಗಿಯೇ ಮಾಹಿತಿ ಸೋರಿಕೆ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನ ಸ್ಪಷ್ಟ ಆದೇಶವೇ ಇದೆ, ತನಿಖೆಯ ಮಾಹಿತಿ ಹೊರಗೆ ಬರಬಾರದು ಎಂದು. ಆದರೆ, ನ್ಯಾಯಾಲಯದ ಆದೇಶ ಇಲ್ಲಿ ಉಲ್ಲಂಘನೆ ಆಗುತ್ತಿದೆ ಎಂದು ಅವರು ಆರೋಪಿಸಿದರು.

ಈ ಸಮಯದವರೆಗೂ ರೇವಣ್ಣ ವಿರುದ್ಧ ಯಾರು ದೂರು ನೀಡಿಲ್ಲ. ಕಿಡ್ನಾಪ್ ಪ್ರಕರಣ ಹಾಕಿದ್ದಾರೆ. ಆ ಹೆಣ್ಣುಮಗಳನ್ನು ಯಾರು ಕಂಡು ಹಿಡಿದರು? ಯಾರು ಆ ಹೆಣ್ಣುಮಗಳನ್ನ ಕಳೆದುಕೊಂಡು ಬಂದರು? 24 ಗಂಟೆಗಳ ಕಾಲ ನಿಮ್ಮ ಕಚೇರಿಯಲ್ಲಿ ಕೂರಿಸಿಕೊಂಡಿರಿ! ಇಲ್ಲಿಯವರೆಗೂ ಆ ಹೆಣ್ಣು ಮಗಳನ್ನು ನ್ಯಾಯಮೂರ್ತಿಗಳ ಮುಂದೆ ಯಾಕೆ ಕರೆದುಕೊಂಡು ಹೋಗಿಲ್ಲ? ರೇವಣ್ಣ ಸಹಕಾರ ಕೊಡುತ್ತಿಲ್ಲ ಎಂದು ಮಾಹಿತಿ ನೀಡುತ್ತಾರೆ. ರೇವಣ್ಣ ಇವರಿಗೆ ಬೇಕಾದ ಹಾಗೆ ಹೇಳಿಕೆ ಬರೆದುಕೊಡಲು ಆಗುತ್ತಾ? ಅದಕ್ಕೆ ಹೇಳಿದ್ದು ಇದು ಶಿವಕುಮಾರ್ ಟೀಮ್ ತನಿಖೆ ಎಂದು ಎಂದು ಅವರು ಕಿಡಿಕಾರಿದರು.

ಇದನ್ನೂ ಓದಿ: ‘ಹಾಸನ ಸೆಕ್ಸ್​​ ವಿಡಿಯೋ ಪೆನ್​ಡ್ರೈವ್​​ಗೆ ತುಂಬಿ ಹಂಚಿದ್ದು ಇವರೇ’- ಇಂಚಿಂಚೂ ಮಾಹಿತಿ ಬಿಚ್ಚಿಟ್ಟ HDK

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಸೆಕ್ಸ್​​ ವಿಡಿಯೋ ಇರೋ ಬರೋಬ್ಬರಿ 25,000 ಪೆನ್​ ಡ್ರೈವ್​ ಹಂಚಿಕೆ’- ಹೆಚ್​​​ಡಿಕೆ ಬಿಚ್ಚಿಟ್ಟ ಸ್ಫೋಟಕ ಸತ್ಯ

https://newsfirstlive.com/wp-content/uploads/2024/05/HDK.jpg

Load More