newsfirstkannada.com

VIDEO: ಕಾಂಗ್ರೆಸ್‌ ಮಹಾನಾಯಕ ಬಾರಪ್ಪಾ ನಮ್ಮ ತೋಟದ ಮನೆಗೆ.. ಡಿಕೆಗೆ ಕುಮಾರಸ್ವಾಮಿ ಸವಾಲು!

Share :

Published May 3, 2024 at 5:57pm

Update May 3, 2024 at 5:58pm

  ನಾನೇ ಪೆನ್‌ಡ್ರೈವ್ ಬಿಡುಗಡೆ ಮಾಡಿದ್ದೀನಿ ಅಂತ ಹೇಳ್ತಾರೆ - HDK

  ನನ್ನ ಹಾಗೂ ದೇವೇಗೌಡರ ವರ್ಚಸ್ಸು ಕಡಿಮೆ ಮಾಡೋಕೆ ಆಗಲ್ಲ

  ಮೇ7ನೇ ತಾರೀಖು‌ ಮತದಾನದ ನಂತರ ಏನು ಮಾಡುತ್ತೀರಿ ನೋಡೋಣ

ರಾಯಚೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಜಿದ್ದಾಜಿದ್ದಿನ ವಾಕ್ಸಮರ ತಾರಕಕ್ಕೇರಿದೆ. ಮತ್ತೆ ಡಿ.ಕೆ ಶಿವಕುಮಾರ್ ವಿರುದ್ಧ ಕಿಡಿಕಾರಿರುವ ಹೆಚ್‌ಡಿಕೆ ಸಂತ್ರಸ್ತ ಮಹಿಳೆಯನ್ನು ತೋಟದ ಮನೆಯಲ್ಲಿ ಬಚ್ಚಿಟ್ಟಿದ್ದಾರೆ ಅನ್ನೋ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಹೆಚ್‌.ಡಿ ಕುಮಾರಸ್ವಾಮಿ ಅವರು, ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ನಮಗೂ ಸಂಬಂಧ ಇಲ್ಲ. ಆದರೂ ನಮ್ಮ ಸುತ್ತಲೇ ಮಾಧ್ಯಮಗಳು ಸುತ್ತುತ್ತಿವೆ. ನಾನು ಮೊದಲ ಬಾರಿಗೆ ಉಪ್ಪು ತಿಂದವರು ನೀರು ಕುಡಿಯಬೇಕು ಎಂದಿದ್ದೆ. ಸಂತ್ರಸ್ತ ಮಹಿಳೆಯನ್ನು ತೋಟದ ಮನೆಯಲ್ಲಿ ಇಟ್ಟಿದ್ದಾರೆ ಎನ್ನುತ್ತಿದ್ದಾರೆ. ಕಾಂಗ್ರೆಸ್‌ ಮಹಾನಾಯಕ ಬಾರಪ್ಪಾ ನಮ್ಮ ತೋಟದ ಮನೆಗೆ ಎಂದು ಹೆಚ್‌ಡಿಕೆ ಹೇಳಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಯಾವುದೇ ದೇಶದಲ್ಲಿದ್ರೂ ಹಿಡಿದು ತರುತ್ತೇವೆ: ಸಿಎಂ ಸಿದ್ದರಾಮಯ್ಯ 

ಹಾಸನ ಪ್ರಕರಣಕ್ಕೆ ಕಾಂಗ್ರೆಸ್‌ ಸರ್ಕಾರದಿಂದ ಈಗಾಗಲೇ ಎಸ್‌ಐಟಿ ರಚನೆ ಆಗಿದೆ. ಲುಕ್ ಔಟ್ ನೋಟಿಸ್ ಕೊಟ್ಟಿದ್ದೀರಿ. ಪ್ರಜ್ವಲ್ ರೇವಣ್ಣ ಬರಲ್ಲ ಅಂತ ಹೇಳಿಲ್ಲ, ಸಮಯ ಕೇಳಿದ್ದಾರೆ. ದೇವೇಗೌಡರು ಪ್ರಧಾನಿ ಮೋದಿ ಜೊತೆಗೂಡಿ ಹೊರ ದೇಶಕ್ಕೆ ಕಳುಹಿಸಲಾಗಿದೆ ಎನ್ನುತ್ತೀರಿ. ನೀವೇ ಈ ರೀತಿ ಹೇಳಿಕೆ ಕೊಟ್ರೆ ತನಿಖೆ ಸರಿಯಾದ ಪ್ರಕ್ರಿಯೆ ಆಗಬೇಕಾ ಬೇಡ್ವಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಇನ್ನು ಕೆಲವೊಬ್ಬರು ನಾನೇ ಪೆನ್‌ಡ್ರೈವ್ ಬಿಡುಗಡೆ ಮಾಡಿದ್ದೀನಿ ಅಂತ ಹೇಳ್ತಾರೆ. ಆದ್ರೆ ಟೆಂಟ್‌ಗಳಲ್ಲಿ ಅಶ್ಲೀಲ ತೋರಿಸುತ್ತಿದ್ರಲ್ಲ ಅವರದ್ದೇ ಕೆಲಸ ಈಗ ಮುಂದುವರೆದಿದೆ. ನಮ್ಮ ತಂದೆ, ತಾಯಿ ನೋವಿನಲ್ಲಿದ್ದಾರೆ. ಅವರಿಗೆ ಎಫೆಕ್ಟ್ ಆಗಬಾರದು ಅಂತ ನಿನ್ನೆ ಮೊನ್ನೆ ಆತ್ಮಸ್ಥೈರ್ಯ ತುಂಬಿದ್ದೀವಿ. ನಿಮಗೆ ತಂದೆ ತಾಯಿ ಬಾಂಧವ್ಯ ಇಲ್ಲದಿರಬಹುದು. ಮುಖ್ಯಮಂತ್ರಿಗೆ ಮನುಷ್ಯತ್ವ ಇಲ್ಲದಿರಬಹುದು. ಇವತ್ತು ಅವನನ್ನ ಆರೋಪಿ ಸ್ಥಾನದಲ್ಲಿ ನಿಲ್ಲಿಸಿರಬಹುದು. ನಿಮಗೆ ಬೇಕಾಗಿರೋದು ಮೇ7ನೇ ತಾರೀಖು‌ ಮತದಾನ. ನಂತರ ಏನು ಮಾಡುತ್ತೀರಿ ನೋಡೋಣ ಎಂದು ಕುಮಾರಸ್ವಾಮಿ ಹೇಳಿದರು.

ಅಶ್ಲೀಲ ವಿಡಿಯೋದಲ್ಲಿ ಪ್ರಜ್ವಲ್ ರೇವಣ್ಣ ಮುಖ ಒಂದು ಕಡೆಯೂ ಕಾಣಲ್ಲ. ಆದರೂ ಸಹ ನಾವು ಸಹಿಸಿಕೊಂಡಿದ್ದೇವೆ. ರಾಹುಲ್ ಗಾಂಧಿ ಅವರು 400 ಪ್ರಕರಣದಲ್ಲಿ ರೇಪ್ ಆಗಿದೆ ಅಂತ ಹೇಳಿದ್ದಾರೆ. ಹೆಣ್ಣು ಮಕ್ಕಳ ಫೋಟೋ ಹಾಗೆ ಬಿಟ್ಟಿದ್ದೀರಲಾ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ಯಾ. ಬೀದಿ ಬೀದಿಯಲ್ಲಿ ವೀಡಿಯೋ ಹಂಚಿದ್ದೀರಿ ಅಲಾ ಅದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ. ವಿಡಿಯೋ ಮಾಡಿಲ್ಲ ಅಂತ ನಾನು ಹೇಳಿಲ್ಲ. ತನಿಖೆ ಮಾಡಿ ಅಂತ ಹೇಳಿದ್ದೀನಿ. ನಾನು ಹಿಟ್ & ರನ್ ಅಂತಾ ಆರೋಪ ಮಾಡ್ತಾರೆ. ನನ್ನ ಹಾಗೂ ದೇವೇಗೌಡರ ವರ್ಚಸ್ಸು ಕಡಿಮೆ ಮಾಡೋಕೆ ಆಗಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಕಾಂಗ್ರೆಸ್‌ ಮಹಾನಾಯಕ ಬಾರಪ್ಪಾ ನಮ್ಮ ತೋಟದ ಮನೆಗೆ.. ಡಿಕೆಗೆ ಕುಮಾರಸ್ವಾಮಿ ಸವಾಲು!

https://newsfirstlive.com/wp-content/uploads/2024/05/HD-Kumaraswamy-On-Dk-Shivakumar.jpg

Load More