ಗೆಸ್ ಮಾಡಿ.. ಭಾರತ- ಪಾಕ್ ಪಂದ್ಯವನ್ನ ಆರಂಭದಿಂದ ಕೊನೆವರೆಗೆ ನೋಡಿದ ಈ ರಾಜಕಾರಣಿ ಯಾರು?

author-image
Bheemappa
Updated On
ಗೆಸ್ ಮಾಡಿ.. ಭಾರತ- ಪಾಕ್ ಪಂದ್ಯವನ್ನ ಆರಂಭದಿಂದ ಕೊನೆವರೆಗೆ ನೋಡಿದ ಈ ರಾಜಕಾರಣಿ ಯಾರು?
Advertisment
  • ಭಾರತ ಗೆಲುವು ಸಾಧಿಸುತ್ತಿದ್ದಂತೆ ಎಲ್ಲೆಡೆ ಸಂಭ್ರಮ ಮುಗಿಲು ಮುಟ್ಟಿದೆ
  • ಭಾರತ- ಪಾಕಿಸ್ತಾನ ಎಂದರೆ ವಿಶ್ವದಲ್ಲಿ ಬಹುತೇಕ ಜನರು ನೋಡುತ್ತಾರೆ
  • ಮನೆಯಲ್ಲೇ ಕುಳಿತು ಆರಂಭದಿಂದ ಕೊನೆವರೆಗೂ ವೀಕ್ಷಣೆ ಮಾಡಿದರು

ಪಾಕ್ ಜೊತೆಗಿನ ಪಂದ್ಯ ಎಂದರೆ ಭಾರತ ಸೇರಿದಂತೆ ಇತರೆ ದೇಶದ ಜನ ಹಗಲು ರಾತ್ರಿ ಸೇರಿಯೇ ನೋಡುತ್ತಾರೆ. ಅದೇ ರೀತಿ ದುಬೈನಲ್ಲಿ ನಡೆದ ಚಾಂಪಿಯನ್ ಟ್ರೋಫಿಯ 5ನೇ ಪಂದ್ಯವನ್ನು ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ಅವರು ಮನೆಯಲ್ಲೇ ಕುಳಿತು ಆರಂಭದಿಂದ ಕೊನೆವರೆಗೂ ವೀಕ್ಷಣೆ ಮಾಡಿದ್ದಾರೆ.

publive-image

ದುಬೈನ ಅಂತರ ರಾಷ್ಟ್ರೀಯ ಸ್ಟೇಡಿಯಂ​​ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ 2025ರ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿಯಾಗಿ ಜಯ ಗಳಿಸಿದೆ. ಪಾಕಿಸ್ತಾನ ನೀಡಿದ್ದ 241 ರನ್​ಗಳನ್ನು ಗುರಿಯನ್ನು ಟೀಮ್ ಇಂಡಿಯಾ ಇನ್ನು 6 ವಿಕೆಟ್​ಗಳು ಬಾಕಿ ಇರುವಾಗಲೇ 244 ರನ್​ ಗಳಿಸಿ ಗೆಲುವು ಪಡೆದಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ತಮ್ಮ ವೃತ್ತಿ ಜೀವನದ 51ನೇ ಏಕದಿನದ ಶತಕ ಸಿಡಿಸಿ ಸಂಭ್ರಮಿಸಿದರು.

ಇದನ್ನೂ ಓದಿ:ವಿರಾಟ್​ ಕೊಹ್ಲಿ ಮನಮೋಹಕ ಸೆಂಚುರಿ.. ಪಾಕ್ ವಿರುದ್ಧ ಟೀಮ್ ಇಂಡಿಯಾಗೆ ಅಮೋಘ ಗೆಲುವು

ಈ ಪಂದ್ಯವನ್ನು ಮನೆಯಲ್ಲೇ ಕುಳಿತು ಟಿವಿಯಲ್ಲಿ ನೋಡಿದ ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ಅವರು ಭಾರತಕ್ಕೆ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ. ಈ ಸಂಬಂಧ ತಮ್ಮ ಟ್ವೀಟರ್​​ ಖಾತೆಯಲ್ಲಿ ಪೋಸ್ಟ್ ಅನ್ನು ಶೇರ್ ಮಾಡಿರುವ ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ ಅವರು, ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ರೋಚಕ ಜಯ ಗಳಿಸಿದ ಭಾರತ ಕ್ರಿಕೆಟ್ ತಂಡಕ್ಕೆ ಹೃದಯ ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

publive-image

ಇನ್ನು ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್​ನಲ್ಲಿ ಸಂಘಟಿತ ಶ್ರೇಷ್ಠ ಪ್ರದರ್ಶನ ನೀಡಿದ ಎಲ್ಲಾ ಭಾರತದ ಆಟಗಾರರು ತಂಡಕ್ಕೆ ಅದ್ಭುತ ಗೆಲುವು ತಂದುಕೊಟ್ಟಿದ್ದು, ನಮ್ಮ ಹೆಮ್ಮೆಯ ಕ್ಷಣಗಳಿಗೆ ಕಾರಣರಾಗಿದ್ದಾರೆ ಎಂದು ಹೊಗಳಿಕೆಯ ಮಾತುಗಳನ್ನು ಹಾಡಿದ್ದಾರೆ.

ದುಬೈ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ 2025ರ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ 49.4 ಓವರ್​ಗಳಲ್ಲಿ ಎಲ್ಲ ವಿಕೆಟ್​ ಕಳೆದುಕೊಂಡು 241 ರನ್​ಗಳ ಗುರಿ ನೀಡಿತ್ತು. ಈ ಸಾಧಾರಣ ಟಾರ್ಗೆಟ್ ಬೆನ್ನು ಹತ್ತಿದ ಟೀಮ್ ಇಂಡಿಯಾ 42.3 ಓವರ್​​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 244 ರನ್​ ಗಳಿಸುವ ಮೂಲಕ 6 ವಿಕೆಟ್​ಗಳ ಮೂಲಕ ಜಯಭೇರಿ ಬಾರಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment