newsfirstkannada.com

‘ಪಾಕಿಸ್ತಾನಕ್ಕೆ ಬೆಂಬಲ ನೀಡಲು ಮ್ಯಾಚ್ ನೋಡೋಕೆ ಹೋಗಿದ್ರಾ..’ ಸಿದ್ದು-ಡಿಕೆಶಿಗೆ ಕುಮಾರಸ್ವಾಮಿ ಪ್ರಶ್ನೆ

Share :

Published October 21, 2023 at 2:28pm

    ನಿನ್ನೆ ಬೆಂಗಳೂರಲ್ಲಿ ಆಸೀಸ್-ಪಾಕ್ ಮಧ್ಯೆ ಪಂದ್ಯ

    ವಿಶ್ವಕಪ್ ಪಂದ್ಯ ವೀಕ್ಷಣೆಗೆ ಹೋಗಿದ್ದ ಸಿದ್ದು, ಡಿಕೆಎಸ್

    HDK ಹೆಂಗೆಲ್ಲ ತರಾಟೆ ತೆಗೆದುಕೊಂಡಿದ್ದಾರೆ ಗೊತ್ತಾ..?

ಬೆಂಗಳೂರು: ರಾಜ್ಯದಲ್ಲಿ ನೂರಾರು ಜ್ವಲಂತ ಸಮಸ್ಯೆಗಳಿವೆ. ಅದನ್ನು ಪರಿಹರಿಸುವುದು ಬಿಟ್ಟು ರಾಜ್ಯ ಸರ್ಕಾರದ ಪಟಾಲಂ ಕ್ರಿಕೆಟ್ ಮ್ಯಾಚ್ ನೋಡಿ ಮಜಾ ತೆಗೆದುಕೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.​ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ನಿನ್ನೆ ಬೆಂಗಳೂರಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳ ಮಧ್ಯೆ ಪಂದ್ಯ ಆಯೋಜನೆಗೊಂಡಿತ್ತು. ಈ ಪಂದ್ಯವನ್ನು ವೀಕ್ಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿ ಸಚಿವರು, ಕಾರ್ಯದರ್ಶಿಗಳು ಹೋಗಿದ್ದರು.

ಇದನ್ನು ವಿರೋಧಿಸಿ ನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ.. ಮೈದಾನದಲ್ಲಿ ಮಜಾ ಮಾಡಿಕೊಂಡು ಕುಳಿತಿದ್ದಾರೆ. ಇವರು ಪಾಕಿಸ್ತಾನಕ್ಕೆ ಬೆಂಬಲ ನೀಡಲು ಹೋಗಿದ್ದಾರೋ..? ಅಥವಾ ಆಸ್ಟ್ರೇಲಿಯಾಗೆ ಬೆಂಬಲ ನೀಡುವುದಕ್ಕೋ? ಇಂಡಿಯಾ-ಪಾಕಿಸ್ತಾನ ಮ್ಯಾಚ್ ನೋಡಲು ಹೋಗಿದ್ದರೆ ಅದು ಬೇರೆ ಆಗಿತ್ತು. ದೇಶಕ್ಕೆ ಬೆಂಬಲ ನೀಡಲು ಹೋಗಿದ್ದಾರೆ, ದೇಶ ಭಕ್ತರು ಎಂದು ಹೇಳಬಹುದಿತ್ತು.

ಸಿಎಂ, ಡಿಸಿಎಂ, ಸಚಿವರು ಸೇರಿ ಇಡೀ ಪಟಾಲಂ ಹೋಗಿದೆ. ಬೇರೆ‌ ದೇಶದ ಮ್ಯಾಚ್ ನೋಡೋಕೆ ಹೋಗಿದ್ದಾರೆ. ಇವರಿಗೆ ಮ್ಯಾಚ್ ನೋಡಲು 8, 8 ಗಂಟೆ ಟೈಮ್ ಇದೆ. ಮ್ಯಾಚ್ ನೋಡೋದು ತಪ್ಪು ಎಂದು ನಾನು ಹೇಳಲ್ಲ. ಕ್ರೀಡಾಪಟುಗಳಿಗೆ ನಾನು ಬೆಂಬಲ ನೀಡುತ್ತೇನೆ. ಬೇರೆ ದೇಶದ ಪಂದ್ಯಗಳ ವೀಕ್ಷಣೆ ಎಷ್ಟು ಸರಿ? ಎಂದು ಪ್ರಶ್ನೆ ಮಾಡಿದರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ಪಾಕಿಸ್ತಾನಕ್ಕೆ ಬೆಂಬಲ ನೀಡಲು ಮ್ಯಾಚ್ ನೋಡೋಕೆ ಹೋಗಿದ್ರಾ..’ ಸಿದ್ದು-ಡಿಕೆಶಿಗೆ ಕುಮಾರಸ್ವಾಮಿ ಪ್ರಶ್ನೆ

https://newsfirstlive.com/wp-content/uploads/2023/10/HDK-1.jpg

Load More