newsfirstkannada.com

ವೋಟ್ ಮಾಡುವಾಗ ಕುಮಾರಸ್ವಾಮಿ ಮೇಲೆ ಹೆಂಡತಿ ಅನಿತಾ ಕೋಪ ಮಾಡಿಕೊಂಡ್ರಾ?- ವಿಡಿಯೋ ನೋಡಿ!

Share :

Published April 26, 2024 at 6:52pm

Update April 26, 2024 at 8:32pm

    ಕುಟುಂಬ ಸಮೇತ ಬಂದು ತಮ್ಮ ಹಕ್ಕು ಚಲಾಯಿಸಿದ ಹೆಚ್​.ಡಿ ಕುಮಾರಸ್ವಾಮಿ

    ಹೆಚ್​.ಡಿ ಕುಮಾರಸ್ವಾಮಿ ಅವರು ಪತ್ನಿ ಅನಿತಾ ಅವರಿಗೆ ಸನ್ನೆ ಮಾಡಿ ಹೇಳಿದ್ದೇನು?

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಹೆಚ್​.ಡಿ ಕುಮಾರಸ್ವಾಮಿ ವಿಡಿಯೋ

ರಾಮನಗರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರದಲ್ಲಿ ಇಂದು ಭರ್ಜರಿ ಮತದಾನ ನಡೆದಿದೆ. ಮತದಾರರು ತಮ್ಮ ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗೆ ಬಂದು ವೋಟ್​ ಹಾಕಿದ್ದಾರೆ. ಜೊತೆಗೆ ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಕೇತಗಾನಹಳ್ಳಿ ಗ್ರಾಮದ ಸಖೀ ಮತಗಟ್ಟೆಗೆ ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬ ಸಮೇತವಾಗಿ ಮತದಾನ ಮಾಡಿದೆ.

ಆದರೆ ಇದೇ ವೇಳೆ ಪರಸ್ಪರ ಒಬ್ಬರಿಗೊಬ್ಬರು ಕಣ್ಣು, ಕೈಗಳಲ್ಲೇ ಸನ್ನೆ ಮಾಡುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ದಂಪತಿ ಇಂದು ಮತ್ತೊಮ್ಮೆ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ಹೌದು, ಬಿಡದಿಯ ಕೇತಗಾನಗಳ್ಳಿಯಲ್ಲಿ ಕುಮಾರಸ್ವಾಮಿ ದಂಪತಿ, ಪುತ್ರ ಹಾಗೂ ಸೊಸೆ ಜೊತೆ ಆಗಮಿಸಿ ಮತದಾನ ಮಾಡಿದ್ದಾರೆ.

ಇದನ್ನೂ ಓದಿ: ‘ಮಂಡ್ಯ ಬಿಟ್ಟು ಕೊಟ್ಟಿದ್ದೇ ತಪ್ಪಾಯ್ತು’- JDS ವಿರುದ್ಧ ಸಿಡಿದೆದ್ದ ಸುಮಲತಾ ಅಂಬರೀಶ್; ಅಸಲಿಗೆ ಆಗಿದ್ದೇನು?

ಇದೇ ಸಮಯದಲ್ಲಿ ಮತದಾನ ಮಾಡುತ್ತಿದ್ದ ವೇಳೆ ಕುಮಾರಸ್ವಾಮಿ ಅವರು ಪತ್ನಿ ಅನಿತಾಗೆ ಸನ್ನೆ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ. ವೋಟ್ ಮಾಡಿ ಹೊರಬಂದ ಹೆಚ್​.ಡಿ ಕುಮಾರಸ್ವಾಮಿ ಪತ್ನಿ ಬಳಿ ಬಂದು ತೋರು ಬೆರಳು ತೋರಿಸಿ ಸನ್ನೆ ಮಾಡ್ತಾರೆ. ಬಳಿಕ ಅನಿತಾ, ಮತ್ತದೇ ರೀತಿ ಕೋಪದ ಲುಕ್​ನಲ್ಲಿ ಸನ್ನೆ ಮಾಡುತ್ತಾ ಕನ್ಫರ್ಮ್ ಮಾಡಿಕೊಳ್ತಾರೆ. ಇವರಿಬ್ಬರ ಈ ಸನ್ನೆ ಭಾಷೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು, ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೋಟ್ ಮಾಡುವಾಗ ಕುಮಾರಸ್ವಾಮಿ ಮೇಲೆ ಹೆಂಡತಿ ಅನಿತಾ ಕೋಪ ಮಾಡಿಕೊಂಡ್ರಾ?- ವಿಡಿಯೋ ನೋಡಿ!

https://newsfirstlive.com/wp-content/uploads/2024/04/hdk1.jpg

Load More