newsfirstkannada.com

ಪ್ರಜ್ವಲ್ ರೇವಣ್ಣ ಆಗಮಿಸುತ್ತಿದ್ದಂತೆ ಬೆಂಗಳೂರು ಬಿಟ್ಟ HD ಕುಮಾರಸ್ವಾಮಿ.. ಕಾರಣವೇನು?

Share :

Published May 31, 2024 at 5:52am

    ಮುಜುಗರದಿಂದ ಪಾರಾಗಲು ಹೆಚ್​ಡಿಕೆ ಮೂರು ದಿನ ಟ್ರಿಪ್​​

    ಹೆಚ್​ಡಿಕೆ ಫ್ಯಾಮಿಲಿ ದಿಢೀರ್​ ಟ್ರಿಪ್​​ ಹೋಗಲು ಕಾರಣವೇನು?

    ಕಾಂಗ್ರೆಸ್ ಸಚಿವರು, ನಾಯಕರು ವಾಗ್ದಾಳಿ ನಡೆಸುವ ಭೀತಿ..!

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ತಮ್ಮಿಡೀ ಕುಟುಂಬ ಸಮೇತ ರೆಸಾರ್ಟ್​ ಒಂದಕ್ಕೆ ಪ್ರಯಾಣ ಬೆಳೆಸಿದ್ದಾರೆ. ಪ್ರಜ್ವಲ್​​​ ಆಗಮನ ಮತ್ತು ಆ ಬಳಿಕ ನಡೆಯುವ ರಾಜಕೀಯ ಹೀಟ್​​​ನಿಂದ ತಪ್ಪಿಸಿಕೊಳ್ಳಲು, ಮುಜುಗರದಿಂದ ಪಾರಾಗಲು ಕುಟುಂಬ ಸಮೇತ ಪ್ರವಾಸ ಹೋಗಿದೆ. ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್, ಸೊಸೆ ರೇವತಿ ಸೇರಿ ಇಡೀ ಕುಟುಂಬವೇ ಪ್ರವಾಸಕ್ಕೆ ತೆರಳಿದೆ ಅನ್ನೋ ಮಾಹಿತಿ ಸಿಕ್ಕಿದೆ.

ತಿಂಗಳು ಕಳೆದ್ರೂ ಪ್ರಜ್ವಲ್​​ ಪೆನ್​ಡ್ರೈವ್​ ಪ್ರಕರಣಕ್ಕೆ ಮುಕ್ತಿನೇ ಸಿಗಲಿಲ್ಲ. ಹಾಸನದಲ್ಲಿ ಅಶ್ಲೀಲ ಎಬ್ಬಿಸಿ ಜರ್ಮನಿಯಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್​​​ ಕೇಸ್​​​, ರಾಜ್ಯದಲ್ಲಿ ತಲೆ ಎತ್ತಿ ಮೆರೆದಿದ್ದ ಗೌಡರ ಕುಟುಂಬವನ್ನ ತಲೆತಗ್ಗಿಸುವಂತೆ ಮಾಡಿದೆ. ರೇವಣ್ಣ ಜೈಲು ಪರೇಡ್​​ ಮುಗಿಸಿ ದೇಗುಲ ಪ್ರದಕ್ಷಿಣೆಯಲ್ಲಿ ಮುಳುಗಿದ್ದಾರೆ. ಬೇಲ್​​ಗೆ ಅರ್ಜಿ ಸಲ್ಲಿಸಿ ಭವಾನಿ ಸಹ ಕಾಣಿಸಿಲ್ಲ. ಸಹೋದರ ಸೂರಜ್​​ ಅದೆಲ್ಲಿದ್ದಾರೆ ಅನ್ನೋದು ಕುಟುಂಬಕ್ಕಷ್ಟೇ ಗೊತ್ತು.

ಪ್ರವಾಸದಲ್ಲಿ ಹೆಚ್​​ಡಿಕೆ ಫ್ಯಾಮಿಲಿ!

ದಳ ಸಾರಥ್ಯ ಹೊತ್ತಿರುವ ಕುಮಾರಸ್ವಾಮಿಗೆ ಈ ಪ್ರಕರಣ ಇನ್ನಿಲ್ಲದಂತೆ ಕಾಡಿದ್ದು ಸುಳ್ಳಲ್ಲ. ನಿತ್ಯವೂ ವಿರೋಧಿಗಳಿಗೆ ಪ್ರತ್ಯುತ್ತರ ಕೊಡುವ ಜವಾಬ್ದಾರಿ ನಿಭಾಯಿಸಿದ್ರು. ಹಿಯಾಳಿಕೆ, ಅವಮಾನ, ಅಸಮಾಧಾನಗಳಿಂದ ಬೆಂಡಾಡ ಹೆಚ್​​ಡಿಕೆ, 2ನೇ ಹಂತದ ಎಲೆಕ್ಷನ್​​​ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದೆ ಇಲ್ಲ. ಸದ್ಯ ಪರಿಸ್ಥಿತಿ ಕಾರ್ಮೋಡಕ್ಕೆ ಸರಿಯುತ್ತಿದ್ದು, ರಾಜಕೀಯ ಹವಾಮಾನ ಮತ್ತಷ್ಟು ಹೀಟ್​​ ಆಗಲಿದೆ. ಈ ಹೀಟ್​ನಿಂದ ಬಚಾವ್​ ಆಗಲು ಕುಮಾರಸ್ವಾಮಿ, ಪ್ರವಾಸ ಮಾರ್ಗ ತುಳಿದಿದ್ದಾರೆ.

ಮಾಜಿ ಸಿಎಂ ಹೆಚ್​​ಡಿಕೆ ಕುಟುಂಬ ಸಮೇತ ಪ್ರವಾಸ ಹೊಸದೇನಲ್ಲ. ಈ ಹಿಂದೆ ಯುರೋಪ್​​​, ಅರಬ್​​​ ಕಂಟ್ರಿಗಳಿಗೆ ಫ್ಯಾಮಿಲಿ ಟ್ರಿಪ್​ ಮಾಡಿದ್ರು. ಆದ್ರೆ, ಆಗಿನ ಪರಿಸ್ಥಿತಿ, ಈಗಿನ ಪರಿಸ್ಥಿತಿ ಭಿನ್ನ. ಈಗ ಪೆನ್​​ಡ್ರೈವ್​​​​ ಪ್ರಕರಣ, ಮಾಜಿ ಸಿಎಂ ಹೆಚ್​​ಡಿಕೆಯನ್ನ ಸಿಕ್ಕಾಪಟ್ಟೆ ಬೇಸರ ತರಿಸಿದೆ. ಸದ್ಯ ಪ್ರಜ್ವಲ್​​​ ಆಗಮನದ ಹಿನ್ನೆಲೆ, ತಮ್ಮ ಮುಖ ದರ್ಶನಕ್ಕೂ ಅವಕಾಶ ಸಿಗದಂತೆ ದೂರ ತೆರಳ್ತಿದ್ದಾರೆ.

ಪ್ರಜ್ವಲ್ ಬಂಧನವಾದ್ರೆ ಮತ್ತೊಮ್ಮೆ ಕುಟುಂಬಕ್ಕೆ ಮುಜುಗರ ತರಲಿದೆ. ಕಾಂಗ್ರೆಸ್ ಸಚಿವರು, ನಾಯಕರ ವಾಗ್ದಾಳಿಗಳನ್ನ ಎದುರಿಸೋದು ಕಷ್ಟ. ಅಲ್ಲದೆ, ಲೈಂಗಿಕ ಕೇಸ್​​ನಲ್ಲಿ ನಾಯಕರ ಆರೋಪಗಳಿಗೆ ಉತ್ತರ ನೀಡೋದು ಅಸಾಧ್ಯ. ಜೊತೆಗೆ ಪ್ರಜ್ವಲ್​ ಬಂಧಿಸಿದ್ರೆ ಕುಟುಂಬಸ್ಥರು ಬೇಸರ ಆಗಲಿದ್ದು ಅದು ಸಹ ಆತಂಕ ಇದೆ. ಇದೇ ಕಾರಣಕ್ಕೆ ಕುಟುಂಬಸ್ಥರ ಹಿತ ಕಾಪಾಡಲು ಟೂರ್​​​ ಹೊರಟಿರುವ ಸಾಧ್ಯತೆ ಇದೆ.

ಇದನ್ನೂ ಓದಿ: 2024ರ ಟಿ20 ವಿಶ್ವಕಪ್​​.. ಟೀಮ್​ ಇಂಡಿಯಾಗೆ ಬಂತು ಆನೆಬಲ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಜ್ವಲ್ ರೇವಣ್ಣ ಆಗಮಿಸುತ್ತಿದ್ದಂತೆ ಬೆಂಗಳೂರು ಬಿಟ್ಟ HD ಕುಮಾರಸ್ವಾಮಿ.. ಕಾರಣವೇನು?

https://newsfirstlive.com/wp-content/uploads/2024/04/HDK-Prajwal-Revanna.jpg

Load More