newsfirstkannada.com

ವೇದಿಕೆಯಲ್ಲಿ ಸುಮಲತಾ ಅಂಬರೀಶ್ ಎದ್ದು ನಿಂತ್ರು ದೂರ ಹೋದ HD ಕುಮಾರಸ್ವಾಮಿ; ಆಮೇಲೇನಾಯ್ತು?

Share :

Published April 14, 2024 at 6:19pm

Update April 14, 2024 at 6:24pm

  ಪ್ರಧಾನಿ ಮೋದಿಯನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಹಿರಿಯ ​ನಾಯಕರು

  ಮೈಸೂರಿನಲ್ಲಿ ನಡೆದ ಸಮಾವೇಶಕ್ಕೆ ಬಿಜೆಪಿ ಹಾಗೂ ಜೆಡಿಎಸ್​ ನಾಯಕರು ಭಾಗಿ

  ವೇದಿಕೆ ಮೇಲೆ ಕುಳಿತಿದ್ದ ಸುಮಲತಾ ಅವರನ್ನೇ ಮರೆತು ಹೋದ ಕುಮಾರಸ್ವಾಮಿ

ಮೈಸೂರು: ಮುಂಬರುವ ಲೋಕಸಭಾ ಚುನಾವಣೆಯ ನಿಮಿತ್ತ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಳ್ಳಲು ಬಿಜೆಪಿ ಹಾಗೂ ಜೆಡಿಎಸ್​ ನಾಯಕರು ಕಾತುರದಿಂದ ಕಾಯುತ್ತಿದ್ದರು.

ಇದನ್ನೂ ಓದಿ: ಇಂದು ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ; ಯಾವ ಯಾವ ಕ್ಷೇತ್ರದಲ್ಲಿ ಮತಬೇಟೆ?

ಇದೇ ವೇಳೆ ಸಮಾವೇಶ ವೇದಿಕೆ ಮೇಲೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ವಿಪಕ್ಷ ನಾಯಕ ಆರ್‌.ಅಶೋಕ್​, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಇದ್ದರು. ಇನ್ನೊಂದು ಕಡೆ ಮಂಡ್ಯ ಹಾಲಿ ಸಂಸದೆ ಸುಮಲತಾ ಅಂಬರೀಶ್, ಹಾಲಿ ಸಂಸದ ಪ್ರತಾಪ್‌ ಸಿಂಹ ಅವರು ಕುಳಿತುಕೊಂಡಿದ್ದರು. ಈ ವೇಳೆ ವೇದಿಕೆ ಮೇಲೆ ಹೆಚ್.ಡಿ ಕುಮಾರಸ್ವಾಮಿ ಅವರು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರನ್ನು ಮಾತಾಡಿಸಲು ಬಂದಿದ್ದರು.

ಆ ನಂತರ ಎಲ್ಲರನ್ನೂ ಮಾತಾಡಿಸಿದ ಬಳಿಕ ಸುಮಲತಾ ಅಂಬರೀಶ್ ಹಾಗೂ ಪ್ರತಾಪ್‌ ಸಿಂಹರನ್ನು ಗಮನಿಸದೆ ಹಾಗೇ ಹೋಗಿದ್ದರು. ಇದನ್ನು ಗಮನಿಸಿದ ಸುಮಲತಾ ಅಂಬರೀಶ್ ಬೇಸರದಿಂದ ಎದ್ದು ಕುಳಿತುಕೊಂಡರು. ಬಳಿಕ ಮತ್ತೆ ಬಂದು ಸುಮಲತಾ ಅಂಬರೀಶ್ ಹಾಗೂ ಪ್ರತಾಪ್‌ ಸಿಂಹರನ್ನು ಮಾತಾಡಿಸಿದ್ದಾರೆ. ಈ ವೇಳೆ ಪ್ರತಾಪ್‌ ಸಿಂಹ ಹೆಚ್. ಡಿ. ಕುಮಾರಸ್ವಾಮಿ ಕಾಲಿಗೆ ಬಿದ್ದು ಆರ್ಶೀವಾದ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೇದಿಕೆಯಲ್ಲಿ ಸುಮಲತಾ ಅಂಬರೀಶ್ ಎದ್ದು ನಿಂತ್ರು ದೂರ ಹೋದ HD ಕುಮಾರಸ್ವಾಮಿ; ಆಮೇಲೇನಾಯ್ತು?

https://newsfirstlive.com/wp-content/uploads/2024/04/sumalatha1.jpg

Load More