/newsfirstlive-kannada/media/post_attachments/wp-content/uploads/2024/06/HD-KUMARASWAMY-4.jpg)
ತೀಸ್ರೀ ಬಾರ್ ಮೋದಿ ಸರ್ಕಾರ್ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದಿದೆ. ನಮೋ ಸಂಪುಟದಲ್ಲಿ ಸಚಿವರಾದ ಹೆಚ್‌ಡಿ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದ್ದಾರೆ. ಇದೀಗ ಕೇಂದ್ರ ಮಿನಿಸ್ಟರ್ ಆಗಿ ಮೊದಲ ಬಾರಿಗೆ ದಳಪತಿ ರಾಜ್ಯಕ್ಕೆ ಇವತ್ತು ವಾಪಸ್ ಆಗಲಿದ್ದಾರೆ. ಇದು ಜೆಡಿಎಸ್ ಪಕ್ಷಕ್ಕೆ ಹೊಸ ಹುಮ್ಮಸ್ಸು ತಂದಿದೆ. ರಾಜ್ಯಕ್ಕೆ ವಾಪಸ್ ಆಗ್ತಿರೋ ಹೆಚ್‌ಡಿಕೆಗೆ ಸ್ವಾಗತ ಕೋರಲು ಭರ್ಜರಿ ಸಿದ್ದತೆ ನಡೆದಿದೆ.
ವಿಧಾನಸಭೆ ಕದನದ ಬಳಿಕ ರಾಜ್ಯದಲ್ಲಿ ಜೆಡಿಎಸ್ ಕತೆ ಮುಗಿದೆ ಹೋಯ್ತು ಎಂಬ ಚರ್ಚೆಗಳ ನಡುವೆ ಫಿನಿಕ್ಸ್‌ನಂತೆ ಹೆಚ್‌ಡಿಕೆ ಪುಟಿದೆದ್ದಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಉನ್ನತ ಸ್ಥಾನ ಪಡೆಯುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಮೂರನೇ ಬಾರಿಗೆ ಕೇಂದ್ರದಲ್ಲಿ ಎನ್‌ಡಿಎ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಜೆಡಿಎಸ್ ಪಕ್ಷದ ದಳಪತಿ ಕೇಂದ್ರದಲ್ಲಿ ಬೃಹತ್ ಕೈಗಾರಿಕಾ ಮತ್ತು ಉಕ್ಕು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದೀಗ ಅಧಿಕಾರ ಸ್ವೀಕಾರ ಬಳಿಕ ಕುಮಾರಸ್ವಾಮಿ ರಾಜ್ಯಕ್ಕೆ ಆಗಮಿಸಲಿದ್ದು ಜೆಡಿಎಸ್ ಕಾರ್ಯಕರ್ತರು ಸ್ವಾಗತ ಕೋರಲು ಸನ್ನದ್ಧರಾಗಿದ್ದಾರೆ.
ಇದನ್ನೂ ಓದಿ:ರೇಣುಕಾಸ್ವಾಮಿ ಸಾವಿಗೆ ಕಾರಣವಾಯ್ತಾ ಆ ಒಂದು ಕರೆ..? 20 ನಿಮಿಷ ಅಲ್ಲಿ ನಡೆದಿದ್ದೇನು..?
ಕೇಂದ್ರ ಸಚಿವರಾಗಿ ಹೆಚ್‌ಡಿಕೆ ಇವತ್ತು ರಾಜ್ಯಕ್ಕೆ ಆಗಮನ!
ಇಂದು ಬೆಳಗ್ಗೆ 11.50ಕ್ಕೆ ದೆಹಲಿಯಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಚ್‌ಡಿಕೆ ಆಗಮಿಸಲಿದ್ದಾರೆ. ಬರ್ತಿದ್ದಂತೆ ಕುಮಾರಸ್ವಾಮಿ ಕಾರ್ಯಕರ್ತರಿಂದ ಸನ್ಮಾನ ಸ್ಚೀಕರಿಸಲಿದ್ದಾರೆ. ಅಲ್ಲಿಂದ ನೇರವಾಗಿ ಮೆರವಣಿಗೆಯಲ್ಲಿ ಶೇಷಾದ್ರಿಪುರಂನಲ್ಲಿರುವ ರಾಜ್ಯ ಜೆಡೆಎಸ್ ಕಚೇರಿಗೆ ಆಗಮಿಸಲಿರುವ ಕುಮಾರಸ್ವಾಮಿ, ಕಾರ್ಯಕರ್ತ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಬಳಿಕ ಜೆಡಿಎಸ್ ಕಚೇರಿಯಲ್ಲಿ ದಳಪತಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಬಳಿಕ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್‌ರನ್ನ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ನಂತರ ಸಂಜೆ ಕುಟುಂಬಸ್ಥರ ಜೊತೆ ಆಂಧ್ರಪ್ರದೇಶದ ತಿರುಪತಿ ತೆರಳಿದ್ದಾರೆ.
ಇದನ್ನೂ ಓದಿ:ರೇಣುಕಾಸ್ವಾಮಿ ಮೃತದೇಹ ಬಿಸಾಡುವಾಗ ನಡೆಯಿತು ಯಡವಟ್ಟು.. ಪ್ಲಾನ್ ಉಲ್ಟಾ ಹೊಡೆದಿದ್ದೇ ಇಲ್ಲಿ..!
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಲೋಕ ಕದನದಲ್ಲಿ ಕಟ್ಟಿ ಹಾಕಲು ಜೆಡಿಎಸ್ ಎನ್‌ಡಿಎ ದೋಸ್ತಿ ಮಾಡಿದ್ರು.. ಇದು ಕುಮಾರಸ್ವಾಮಿಗೆ ಭರ್ಜರಿ ಲಾಭ ತಂದುಕೊಟ್ಟಿದೆ. ಅಲ್ಲದೇ ಕಾರ್ಯಕರ್ತರಿಗೂ ಹೊಸ ಜೋಶ್ ತಂದು ಕೊಟ್ಟಿದೆ. ಹೀಗಾಗಿ ತಮ್ಮ ದಳಪತಿಯನ್ನ ಸ್ವಾಗತಿಸುವ ಮೂಲಕ ಸಂಭ್ರಮಕ್ಕೆ ಕಾರ್ಯಕರ್ತರು ಸಿದ್ದತೆ ಮಾಡಿಕೊಂಡಿದ್ದಾರೆ.. ಈ ಮೂಲಕ ಕಾಂಗ್ರೆಸ್‌ಗೆ ಟಾಂಗ್ ನೀಡಲು ಪ್ಲಾನ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಮೃತದೇಹ ವಿಲೇವಾರಿಗೆ 30 ಲಕ್ಷ ರೂ ಡೀಲ್..? ರಾತ್ರಿ ಇಡೀ ದರ್ಶನ್ಗೆ ಫೋನ್ ಕರೆ.. ನಟ ಸಿಕ್ಕಿಬಿದ್ದಿದ್ದು ಹೀಗೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ