newsfirstkannada.com

ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಫಿಕ್ಸ್.. 3 ಕ್ಷೇತ್ರಕ್ಕೆ JDS ಅಭ್ಯರ್ಥಿ ಆಯ್ಕೆ ಅಂತಿಮ; ಯಾರಿಗೆ ಟಿಕೆಟ್‌?

Share :

Published March 26, 2024 at 3:48pm

Update March 26, 2024 at 3:49pm

  ಜೆಡಿಎಸ್‌ ಪಕ್ಷದ ಶಕ್ತಿ ಉಳಿಸೋಕೆ ನೀವೇ ಬರಬೇಕು ಅಂತ ಮಂಡ್ಯದಲ್ಲಿ ಒತ್ತಾಯ

  ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ, ಸಿ.ಎಸ್‌ ಪುಟ್ಟರಾಜು ನಿಲ್ಲಿಸಬೇಕು ಅಂತ ಇತ್ತು

  ಕೋಲಾರಕ್ಕೆ ಸಮೃದ್ಧಿ ಮಂಜುನಾಥ, ಮಲ್ಲೇಶ್ ಬಾಬು, ನಿಸರ್ಗ ನಾರಾಯಣಸ್ವಾಮಿ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿರುವ ಜೆಡಿಎಸ್‌ ಕೊನೆಗೂ ಅಭ್ಯರ್ಥಿಗಳ ಆಯ್ಕೆ ಫೈನಲ್ ಮಾಡಿದೆ. ನಿರೀಕ್ಷೆಯಂತೆ ಹಾಸನಕ್ಕೆ ಪ್ರಜ್ವಲ್ ರೇವಣ್ಣ ಅವರ ಹೆಸರು ಅಂತಿಮವಾಗಿದೆ. ಮಂಡ್ಯ, ಕೋಲಾರದ ಅಭ್ಯರ್ಥಿಗಳ ಆಯ್ಕೆಯೂ ಫೈನಲ್ ಆಗಿದ್ದು, ಹೆಚ್‌.ಡಿ ಕುಮಾರಸ್ವಾಮಿ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಮಂಡ್ಯ ಜಿಲ್ಲೆಯ ಜನ ಬಯಸುತ್ತಿದ್ದಾರೆ. ಜೆಡಿಎಸ್‌ ಪಕ್ಷದ ಶಕ್ತಿ ಉಳಿಸೋಕೆ ನೀವೇ ಬರಬೇಕು ಅಂತ ಆದೇಶ ನೀಡ್ತಾ ಇದ್ದಾರೆ. ನನ್ನ ಪಕ್ಷದ ಭವಿಷ್ಯ ಹಾಗೂ ಕಾರ್ಯಕರ್ತರ ಒತ್ತಾಯದಿಂದ ನಾನೇ ಮಂಡ್ಯ ಚುನಾವಣೆಯಲ್ಲಿ ಸ್ಪರ್ಧಿಸುವ ಅನಿವಾರ್ಯತೆ ಇದೆ ಅನ್ನೋ ಮೂಲಕ ಹೆಚ್‌ಡಿ ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸೋ ಸುಳಿವು ನೀಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಪರೋಕ್ಷವಾಗಿ ಮಂಡ್ಯದಿಂದಲೇ ಸ್ಪರ್ಧಿಸುವುದಾಗಿ ಹೆಚ್‌ಡಿಕೆ ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಕಾರ್ಯಕರ್ತರು ಜನತೆಯೇ ತೀರ್ಮಾನ ಕೊಡಬೇಕಿದೆ. ನಾವು ನಿಖಿಲ್ ಕುಮಾರಸ್ವಾಮಿ ಅಥವಾ ಸಿ.ಎಸ್‌ ಪುಟ್ಟರಾಜು ಅವರನ್ನೇ ನಿಲ್ಲಿಸಬೇಕು ಅಂತ ಇದ್ವಿ. ಆದರೆ ನಿಖಿಲ್ ಕುಮಾರಸ್ವಾಮಿಯವರು ನನಗೆ ಆತುರ ಇಲ್ಲ. ಎರಡು ಬಾರಿ ಸೋತಿದ್ದೇನೆ. ಮೂರನೇ ಬಾರಿ ಸೋತರೆ ಆ ನೋವು ತಡೆಯಲು ಆಗಲ್ಲ. ಈ ಬಾರಿ ಪಕ್ಷ ಸಂಘಟನೆಗೆ ನಿರ್ಧಾರ ಮಾಡಿದ್ದೇನೆ ಎಂದಿದ್ದಾರೆ.

ಹಾಸನ, ಮಂಡ್ಯ, ಕೋಲಾರ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಭೆ ಇದೆ. ಹಾಸನಕ್ಕೆ ಪ್ರಜ್ವಲ್ ರೇವಣ್ಣ ಅವರೇ ಫೈನಲ್ ಆಗಿದೆ. ಕೋಲಾರದಲ್ಲಿ ಸ್ಪರ್ಧಿಸಲು ಮೂರು ನಾಯಕರ ಶಾರ್ಟ್ ಲಿಸ್ಟ್ ಮಾಡಿದ್ದೇವೆ. ಸಮೃದ್ಧಿ ಮಂಜುನಾಥ, ಮಲ್ಲೇಶ್ ಬಾಬು, ನಿಸರ್ಗ ನಾರಾಯಣಸ್ವಾಮಿ ಹೆಸರು ಲಿಸ್ಟ್ ಮಾಡಿದ್ದೇವೆ.

ಇದನ್ನೂ ಓದಿ: Surapur by Election: ಸುರಪುರ ವಿಧಾನ ಸಭಾ ಉಪಚುನಾವಣೆಗೆ ಅಭ್ಯರ್ಥಿ ಹೆಸರು ಪ್ರಕಟಿಸಿದ ಬಿಜೆಪಿ..!

ಹಾಲಿ‌ ಬಿಜೆಪಿ ಸಂಸದ ಮುನಿಸ್ವಾಮಿ ಅವರು ಬಂದು ಈ ಬಾರಿಯೂ ಕೋಲಾರ ಗೆಲ್ಲಬೇಕು. ನನಗೆ ಅವಕಾಶ ಕೊಟ್ಟರೂ ಸಂತೋಷ ಅಂತಾ ಹೇಳಿದ್ದಾರೆ. ಕೋಲಾರ ಅಭ್ಯರ್ಥಿ ಆಯ್ಕೆ ಸಂಬಂಧ ಇಂದು ಸಂಜೆ ಅಧಿಕೃತವಾಗಿ ಘೋಷಣೆ ಮಾಡ್ತೀನಿ ಎಂದು ಹೇಳಿದ್ದಾರೆ.

ಚನ್ನಪಟ್ಟಣ, ರಾಮನಗರ ಜನತೆಗೆ ನಾನು ಮನವಿ ಮಾಡುತ್ತೇನೆ. ನಾನು ನಿಮ್ಮನ್ನ ಕೈ ಬಿಡಲ್ಲ. ಈ ಪಕ್ಷ ಉಳಿಸಲು, ಮೂರು ಬಾರಿ ಹೃದಯ ಶಸ್ತ್ರಚಿಕಿತ್ಸೆ ಆಗಿದ್ದು, ಎರಡು ಬಾರಿ‌ ಮೆದುಳಿಗೆ ಪೆಟ್ಟು ಆಗಿದೆ. ನನ್ನಿಂದ ಈ ನಾಡಿಗೆ‌ ಸೇವೆ ಮಾಡಬೇಕು. ಈ ಪಕ್ಷ ನಿಮ್ಮಿಂದ ಉಳಿಯಬೇಕು ಅನ್ನೋದಕ್ಕೆ ಇನ್ನೂ ಬದುಕಿದ್ದೇನೆ ಎಂದು ಹೆಚ್‌ಡಿಕೆ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಫಿಕ್ಸ್.. 3 ಕ್ಷೇತ್ರಕ್ಕೆ JDS ಅಭ್ಯರ್ಥಿ ಆಯ್ಕೆ ಅಂತಿಮ; ಯಾರಿಗೆ ಟಿಕೆಟ್‌?

https://newsfirstlive.com/wp-content/uploads/2024/03/HD-Kumaraswamy-6.jpg

Load More