newsfirstkannada.com

ಕ್ಲೈಮ್ಯಾಕ್ಸ್‌ನಲ್ಲಿ ರಂಗೇರಿದ ರಾಜ್ಯಸಭಾ ಎಲೆಕ್ಷನ್.. JDS ಇಬ್ಬರು ಶಾಸಕರು ನಾಟ್ ರೀಚೆಬಲ್‌!

Share :

Published February 26, 2024 at 5:40pm

Update February 26, 2024 at 5:36pm

    ಐದನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲ್ಲಿಸಲು ಜೆಡಿಎಸ್ ಮೆಗಾ ಪ್ಲಾನ್

    ಎಲ್ಲಾ ಜೆಡಿಎಸ್‌ ಶಾಸಕರು ಹೋಟೆಲ್‌ಗೆ ಬರುವಂತೆ ಹೆಚ್‌ಡಿಕೆ ಸೂಚನೆ

    ಅಡ್ಡ ಮತದಾನ, ಶಾಸಕರು ಗೈರಾಗದಂತೆ ಎಚ್ಚರ ವಹಿಸಿದ ದಳಪತಿಗಳು

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಮತದಾನ ನಡೆಯುತ್ತಿದ್ದು, ಕೊನೇ ಹಂತದಲ್ಲಿ ಚುನಾವಣಾ ಕಣ ರಂಗೇರಿದೆ. 4 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಐದನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಅವರು ಅಖಾಡದಲ್ಲಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿರುವ ಕುಪೇಂದ್ರ ರೆಡ್ಡಿ ಅವರ ಗೆಲುವು ಬಿಜೆಪಿ, ಜೆಡಿಎಸ್‌ ಪಕ್ಷಕ್ಕೆ ಪ್ರತಿಷ್ಟೆಯ ಪ್ರಶ್ನೆಯಾಗಿದೆ.

ರಾಜ್ಯಸಭಾ ಚುನಾವಣೆಯ ಮತದಾನದ ಹಿನ್ನೆಲೆಯಲ್ಲಿ ಎಲ್ಲಾ ಶಾಸಕರನ್ನ ಹೋಟೆಲ್‌ಗೆ ಬರುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‌.ಡಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ಖಾಸಗಿ ಹೋಟೆಲ್‌ನಲ್ಲೇ ಇಂದು ರಾತ್ರಿ ವಾಸ್ತವ್ಯ ಹೂಡಲಿರುವ ಜೆಡಿಎಸ್ ಶಾಸಕರು ನಾಳೆ ಬೆಳಗ್ಗೆ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ.

ಐದನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲ್ಲಿಸಲು ಜೆಡಿಎಸ್ ಮೆಗಾ ಪ್ಲಾನ್ ಮಾಡಿದೆ. ಮುಖ್ಯ ಸಚೇತಕ ಸುರೇಶ್ ಬಾಬು ಮೂಲಕ ವಿಪ್‌ ಜಾರಿಗೊಳಿಸಲಾಗಿದ್ದು, ನಾಳೆ ಕಡ್ಡಾಯವಾಗಿ ಕುಪೇಂದ್ರ ರೆಡ್ಡಿ ಮತ ಚಲಾಯಿಸುವ ಸೂಚನೆ ನೀಡಲಾಗಿದೆ. ಇನ್ನು, ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಜೆಡಿಎಸ್ ಶಾಸಕರು ಸಿಗದಂತೆ ಎಚ್ಚರಿಕೆ ವಹಿಸಲಾಗಿದೆ. ಅಡ್ಡ ಮತದಾನ, ಶಾಸಕರು ಗೈರಾಗದಂತೆ ಎಚ್ಚರ ವಹಿಸಲಾಗಿದೆ. ಹೀಗಾಗಿ ಶಾಸಕರು ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಾಗಿದೆ. ಶಾಸಕರ ಜೊತೆ ಕುಮಾರಸ್ವಾಮಿ ಕೂಡ ಹೋಟೆಲ್‌ನಲ್ಲಿ ಇದ್ದಾರೆ.

ಇದನ್ನೂ ಓದಿ: ಡಿಕೆ ಬ್ರದರ್ಸ್‌ ವಿರುದ್ಧ ಮತ್ತೆ ರೊಚ್ಚಿಗೆದ್ದ HD ಕುಮಾರಸ್ವಾಮಿ; ಚುನಾವಣೆಗೂ ಮೊದ್ಲೇ ಅಕ್ರಮ ಆರೋಪ

ಇಂದು ಸಂಜೆ ಒಳಗಾಗಿ ಹೋಟೆಲ್‌ಗೆ ಬರುವಂತೆ ಎಲ್ಲಾ ಜೆಡಿಎಸ್‌ ಶಾಸಕರಿಗೆ ಹೆಚ್‌.ಡಿ ಕುಮಾರಸ್ವಾಮಿ ಅವರು ಸೂಚನೆ ನೀಡಿದ್ದರು. ಆದರೆ, ಜೆಡಿಎಸ್ ನಾಯಕರ ಸಂಪರ್ಕಕ್ಕೆ ಇಬ್ಬರು ಶಾಸಕರು ನಾಟ್‌ ರೀಚೆಬಲ್ ಆಗಿದ್ದಾರೆ. ಜೆಡಿಎಸ್ ದೇವದುರ್ಗ ಶಾಸಕಿ ಕೆರಿಯಮ್ಮ ಫೋನ್ ಸ್ವಿಚ್‌ ಆಫ್ ಆಗಿದ್ದು, ಜೆಡಿಎಸ್ ನಾಯಕರ ಸಂಪರ್ಕಕ್ಕೆ ಸಿಕ್ಕಿಲ್ಲ. ಯಾದಗಿರಿ ಗುರುಮಿಟ್ಕಲ್ ಶಾಸಕ ಶರಣಗೌಡ ಕಂದಕೂರು ಕೂಡ ಹೋಟೆಲ್‌ಗೆ ಬಂದಿಲ್ಲ. ನನಗೆ ಯಾರೂ ಕರೆದೇ ಇಲ್ಲ ಎನ್ನುತ್ತಿರುವ ಕಂದಕೂರು ಅವರು ನಾಳೆ ನೇರವಾಗಿ ಬೆಂಗಳೂರಿಗೆ ಬರುವೆ ಎನ್ನುತ್ತಿದ್ದಾರೆ. ಕೊನೇ ಕ್ಷಣದಲ್ಲಿ ಯಾರು ಯಾರಿಗೆ ಮತ ಹಾಕ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ಲೈಮ್ಯಾಕ್ಸ್‌ನಲ್ಲಿ ರಂಗೇರಿದ ರಾಜ್ಯಸಭಾ ಎಲೆಕ್ಷನ್.. JDS ಇಬ್ಬರು ಶಾಸಕರು ನಾಟ್ ರೀಚೆಬಲ್‌!

https://newsfirstlive.com/wp-content/uploads/2024/02/JDS-HDK-Meeting.jpg

Load More