newsfirstkannada.com

ಹಲೋ.. ದೇವರಾಜೇಗೌಡ ಅಂತ ಯಾಕಪ್ಪಾ ಮಾತಾಡಿದೆ; ಡಿಕೆ ಮೇಲೆ ಮತ್ತೆ HDK ಅಟ್ಯಾಕ್‌; ಏನಂದ್ರು?

Share :

Published May 8, 2024 at 1:09pm

  ವಿಡಿಯೋ ಬಿಡುಗಡೆ ಮಾಡಿದವರನ್ನು ಯಾಕೆ ತನಿಖೆ ಮಾಡ್ತಾ ಇಲ್ಲ?

  ಗೃಹ ಸಚಿವರಾದ ಮಿಸ್ಟರ್ ಪರಮೇಶ್ವರ್‌ ಏನ್ ಮಾಡ್ತಾ ಇದ್ದಾರೆ?

  ಬಂಡೆ ರಕ್ಷಣೆ ಕೊಡುತ್ತೆ ಅಂತ ಡ್ರೈವರ್‌ ಕಾರ್ತಿಕ್ ಅಂದುಕೊಂಡಿದ್ದಾನೆ

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರ ಮಧ್ಯೆ ನಡೆಯುತ್ತಿರುವ ಮಾತಿನ ಯುದ್ಧ ತಾರಕಕ್ಕೇರಿದೆ. ವಕೀಲ ದೇವರಾಜೇಗೌಡ ಅವರು ಆಡಿಯೋ ಬಿಡುಗಡೆ ಮಾಡಿದ ಬಳಿಕ ಮತ್ತೆ ಡಿಕೆಶಿ ಮೇಲೆ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ.

ಪೆನ್‌ಡ್ರೈವ್ ಪ್ರಕರಣದಲ್ಲಿ ನಾನು ಹಿಟ್‌ ಅಂಡ್ ರನ್ ಕೆಲಸ ಮಾಡಲ್ಲ. ತನಿಖೆಗಾಗಿ ಎಸ್‌ಐಟಿ ತಂಡ ರಚನೆ ಆಗಿದೆ. ಆದರೆ ನಿಮ್ಮ ತನಿಖೆ ಹೆಚ್‌.ಡಿ ರೇವಣ್ಣ, ಪ್ರಜ್ವಲ್ ಮೇಲೆ ಯಾಕೆ ಕೇಂದ್ರೀಕೃತವಾಗಿದೆ. ವಿಡಿಯೋ ಬಿಡುಗಡೆ ಮಾಡಿದವರನ್ನು ಯಾಕೆ ತನಿಖೆ ಮಾಡ್ತಾ ಇಲ್ಲ ಎಂದು ಹೆಚ್‌ಡಿಕೆ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣಕ್ಕೆ ಹೊಸ ಟ್ವಿಸ್ಟ್‌.. ಹಾಸನದ ಡ್ರೈವರ್‌ ಕಾರ್ತಿಕ್‌ ಗೌಡ ಬಂಧನ? 

ಅಶ್ಲೀಲ ವಿಡಿಯೋ ಲೀಕ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ ಇದುವರೆಗೂ ಏನು ಮಾಡಿಲ್ಲ. ಗೃಹ ಸಚಿವರಾದ ಮಿಸ್ಟರ್ ಪರಮೇಶ್ವರ್‌ ಏನ್ ಮಾಡ್ತಾ ಇದ್ದಾರೆ. ನವೀನ್, ಕಾರ್ತಿಕ್, ಶ್ರೇಯಸ್ ಪಟೇಲ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ. ಖಾಸಗಿ ಚಾನೆಲ್ ಅಲ್ಲಿ ಡ್ರೈವರ್ ಕಾರ್ತಿಕ್‌ನ ಕುಳಿಸಿಕೊಂಡು ಟ್ರೈನಿಂಗ್ ಮಾಡುತ್ತಾ ಇದ್ದಾರೆ.

ಕಾರ್ತಿಕ್‌ ಗೌಡ 14 ವರ್ಷ ಡ್ರೈವರ್‌ ಕೆಲಸದಲ್ಲಿ ಇದ್ದವನು ಪ್ರಜ್ವಲ್ ನಡವಳಿಕೆ ಗೊತ್ತಿದ್ರೆ ಕೆಲಸ ಬಿಡಬೇಕಿತ್ತು. ಕಾರ್ತಿಕ್‌ಗೆ ಬೆಂಗಳೂರಿನ ಗಿರಿನಗರದಲ್ಲೇ ಇದ್ದಾನಂತೆ. ಬಂಡೆ ರಕ್ಷಣೆ ಕೊಡುತ್ತೆ ಅಂತ ಕಾರ್ತಿಕ್ ಅಂದುಕೊಂಡಿದ್ದಾನೆ. ಬಂಡೆ ಹೇಗೆ ರಕ್ಷಣೆ ಮಾಡುತ್ತೆ ಅಂತ ಕಾಯ್ತಾ ಇದ್ದಾನೆ ಎಂದು ಹೆಚ್‌ಡಿಕೆ ಹೇಳಿದ್ದಾರೆ.

ಹಲೋ.. ದೇವರಾಜೇಗೌಡ ಹೇಗಿದ್ಯಪ್ಪಾ ಅಂತ ವಕೀಲ ದೇವರಾಜೇಗೌಡರಿಗೆ ಕರೆ ಮಾಡಿದ್ದು ಯಾರು. ಎಲ್‌.ಆರ್‌ ಶಿವರಾಮೇಗೌಡರು ದೇವರಾಜೇಗೌಡರಿಗೆ ಕರೆ ಮಾಡಿದ್ದು. ನಿನಗೇನಿತ್ತು ಕೆಲಸ ಡಿಕೆ? ಹೆಚ್‌.ಡಿ ರೇವಣ್ಣ ಅವರ ಮೇಲೆ ಬೇಲೆಬಲ್‌ ಸೆಕ್ಷನ್ ಇತ್ತು. ಆಮೇಲೆ ಕಿಡ್ನಾಪ್ ಪ್ರಕರಣ ದಾಖಲು ಮಾಡಿ ಬಂಧಿಸಿದ್ದಾರೆ. ಸಂತ್ರಸ್ತೆಯನ್ನು ತೋಟದ ಮನೆಯಲ್ಲೇ ಹಿಡಿದ್ರಾ. ಸಂತ್ರಸ್ತೆ ಸಿಕ್ಕಿದ್ದು ಸಂಬಂಧಿಕರ ಮನೆಯಲ್ಲಿ. ರೇವಣ್ಣ ಅವರನ್ನು ಸರ್ಕಾರ ಯಾವ ರೀತಿ ನಡೆಸಿಕೊಳ್ಳುತ್ತಿದೆ. ಪ್ರಜ್ವಲ್ ರೇವಣ್ಣ ಯಾವಾಗ ಬರ್ತಾರೆ ಅಂತ ಗೊತ್ತಿಲ್ಲ. ಮೇ 15ನೇ ತಾರೀಖು ಬರ್ತಾನೆ ಅಂತ ಹೇಳಿದ್ದಾರೆ ಬರ್ತಾನಾ ನೋಡೋಣ. ಒಕ್ಕಲಿಗ ನಾಯಕರು ಈ ಬಗ್ಗೆ ಸುದ್ದಿಗೋಷ್ಟಿ ಮಾಡುತ್ತಾರಂತೆ. ನಾಳೆ ಅದರ ಬಗ್ಗೆ ಉತ್ತರ ಕೊಡ್ತೀನಿ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಲೋ.. ದೇವರಾಜೇಗೌಡ ಅಂತ ಯಾಕಪ್ಪಾ ಮಾತಾಡಿದೆ; ಡಿಕೆ ಮೇಲೆ ಮತ್ತೆ HDK ಅಟ್ಯಾಕ್‌; ಏನಂದ್ರು?

https://newsfirstlive.com/wp-content/uploads/2024/04/Dk-Shivakumar-On-HDK.jpg

Load More